ಮುಂಬೈ(ಏ.21): ಆರಂಭಿಕ ಆಘಾತದ ಬಳಿಕ ಪುಟಿದೆದ್ದು ಸತತ 2 ಗೆಲುವು ಸಾಧಿಸಿರುವ ಚೆನ್ನೈ ಸೂಪರ್‌ಕಿಂಗ್ಸ್‌, ಇದೀಗ ಕೋಲ್ಕತ ನೈಟ್‌ ರೈಡರ್ಸ್‌ ವಿರುದ್ದದ ಕಣಕ್ಕಿಳಿಯುತ್ತಿದ್ದು ಹ್ಯಾಟ್ರಿಕ್‌ ಜಯದ ನಿರೀಕ್ಷೆಯಲ್ಲಿದೆ. 

ಬುಧವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡ​ರ್ಸ್‌ ವಿರುದ್ಧ ಸೆಣಸಲಿದೆ. ಸತತ 2 ಪಂದ್ಯಗಳನ್ನು ಸೋತಿರುವ ಕೆಕೆಆರ್‌, ಹ್ಯಾಟ್ರಿಕ್‌ ಸೋಲು ತಪ್ಪಿಸಿಕೊಳ್ಳುವ ಒತ್ತಡದಲ್ಲಿದೆ. ಚೆನ್ನೈ ಸಾಂಘಿಕ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದೆ. ಆಲ್ರೌಂಡರ್‌ಗಳು ತಂಡಕ್ಕೆ ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ಮತ್ತೊಂದೆಡೆ ಕೆಕೆಆರ್‌ನ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗುತ್ತಿವೆ. ಆಲ್ರೌಂಡರ್‌ಗಳು ಕೈಹಿಡಿಯುತ್ತಿಲ್ಲ.

ಐಪಿಎಲ್‌ 2021: ಸನ್‌ರೈಸರ್ಸ್ ಕಾಪಾಡುತ್ತಾರಾ ಕೇನ್‌ ವಿಲಿಯಮ್ಸನ್‌..?

ಸಂಭವನೀಯ ತಂಡ:

ಚೆನ್ನೈ: ರಾಬಿನ್‌ ಉತ್ತಪ್ಪ, ಫಾಫ್‌ ಡು ಪ್ಲೆಸಿ, ಮೋಯಿನ್‌ ಅಲಿ, ಸುರೇಶ್‌ ರೈನಾ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಎಂ ಎಸ್‌ ಧೋನಿ(ನಾಯಕ), ಸ್ಯಾಮ್‌ ಕರ್ರನ್‌, ಡ್ವೇನ್‌ ಬ್ರಾವೋ, ಶಾರ್ದೂಲ್ ಠಾಕೂರ್‌‌, ದೀಪಕ್ ಚಹರ್‌‌.

ಕೆಕೆಆರ್‌: ನಿತೀಶ್‌ ರಾಣಾ, ಶುಭ್‌ಮನ್‌ ಗಿಲ್‌, ರಾಹುಲ್‌ ತ್ರಿಪಾಠಿ, ಇಯಾನ್‌ ಮೊರ್ಗನ್‌(ನಾಯಕ), ದಿನೇಶ್‌ ಕಾರ್ತಿಕ್‌, ಆಂಡ್ರೆ ರಸೆಲ್‌, ಶಕೀಬ್ ಅಲ್ ಹಸನ್‌‌, ಹರ್ಭಜನ್ ಸಿಂಗ್‌, ಪ್ಯಾಟ್ ಕಮಿನ್ಸ್‌‌, ವರುಣ್ ಚಕ್ರವರ್ತಿ‌, ಪ್ರಸಿದ್ಧ್ ಕೃಷ್ಣ.

ಸ್ಥಳ: ಮುಂಬೈ
ಪಂದ್ಯ ಆರಂಭ: ಸಂಜೆ 7.30 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌