ಚೆನ್ನೈ(ಏ.17):  ಹೊಡಿ ಬಡಿ ಆಟ ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ಪಡೆ ಕರಾರುವಕ್ ದಾಳಿ ಸಂಘಿಸಿತು. ಹೀಗಾಗಿ ಎರಡೂ ತಂಡದ ಬ್ಯಾಟ್ಸ್‌ಮನ್‌ಗಳು ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲರಾದರು. ಆದರೆ ಮಾರಕ ದಾಳಿಯಲ್ಲಿ ಮುಂಬೈ ಇಂಡಿಯನ್ಸ್ ಮೇಲುಗೈ ಸಾಧಿಸಿದೆ. ಈ ಮೂಲಕ ಮುಂಬೈ 13 ರನ್ ಗೆಲುವು ಕಂಡಿದೆ.

ಗೆಲುವಿಗೆ 151 ರನ್ ಟಾರ್ಗೆಟ್ ಪಡೆದ ಸನ್‌ರೈರ್ಸ್ ಹೈದರಾಬಾದ್ ತಂಡ ಉತ್ತಮ ಆರಂಭ ಪಡೆಯಿತು. ಜಾನಿ ಬೈರ್‌ಸ್ಟೋ 22 ಎಸೆತದಲ್ಲಿ43 ರನ್ ಕಾಣಿಕೆ ನೀಡಿದರು. ಇತ್ತ ನಾಯಕ ಡೇವಿಡ್ ವಾರ್ನರ್ 36 ರನ್ ಸಿಡಿಸಿ ಔಟಾದರು. ಮೊದಲ ವಿಕೆಟ್‌ಗೆ ಈ ದೋಡಿ 67 ರನ್ ಜೊತೆಯಾಟ ನೀಡಿತು.

ಮನೀಶ್ ಪಾಂಡೆ ಕೇವಲ 2 ರನ್ ಸಿಡಿಸಿ ಔಟಾದರು. ವಿರಾಟ್ ಸಿಂಗ್ 11 ರನ್ ಸಿಡಿಸಿ ನಿರ್ಗಮಿಸಿದರು. ಅಭಿಶೇಕ್ ಶರ್ಮಾ ಅಬ್ಬರಿಸಲಿಲ್ಲ. ಆದರೆ ವಿಜಯ್ ಶಂಕರ್ ತಂಡಕ್ಕೆ ಆಸರೆಯಾದರು. ಶಂಕರ್ 28 ರನ್ ಸಿಡಿಸಿ ಐಟಾದರು. ಬಳಿಕ ಹೈದರಾಬಾದ್ ದಿಢೀರ್ ವಿಕೆಟ್ ಕಳೆದುಕೊಂಡಿತು 

19.4 ಓವರ್‌ಗಳಲ್ಲಿ ಹೈದರಾಬಾದ್ 137 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಮುಂಬೈ ಇಂಡಿಯನ್ಸ್ 13 ರನ್ ಗೆಲುವು ಕಂಡಿತು. ರಾಹುಲ್ ಚಹಾರ್ ಹಾಗೂ ಟ್ರೆಂಟ್ ಬೋಲ್ಟ್ ತಲಾ 3 ವಿಕೆಟ್ ಪಡೆದು ಮಿಂಚಿದರು.  ಮುಂಬೈ ಇಂಡಿಯನ್ಸ್ 2ನೇ ಗೆಲುವು ಕಂಡರೆ, ಇತ್ತ ಹೈದರಾಬಾದ್ ಹ್ಯಾಟ್ರಿಕ್ ಸೋಲು ಕಂಡಿದೆ.