Asianet Suvarna News Asianet Suvarna News

IPL 2021: ಅಂಬಾಟಿ ರಾಯುಡು ಹಾಫ್ ಸೆಂಚುರಿ, ಡೆಲ್ಲಿಗೆ 137 ರನ್ ಗುರಿ!

  • ಅಂಬಾಟಿ ರಾಯುಡು ಹೋರಾಟದಿಂದ ಚೆನ್ನೈ ಚೇತರಿಕೆ
  • ಡೆಲ್ಲಿ ತಂಡಕ್ಕೆ 137 ರನ್ ಟಾರ್ಗೆಟ್ ನೀಡಿದ ಧೋನಿ ಸೈನ್ಯ
  • ಅಂಕಪಟ್ಟಿಯ ಅಗ್ರಸ್ಥಾನಕ್ಕೆಗಾಗಿ ಹೋರಾಟ
IPL 2021 Ambati Rayudu helps Chennai Super kings to set run target to Delhi capitals ckm
Author
Bengaluru, First Published Oct 4, 2021, 9:13 PM IST
  • Facebook
  • Twitter
  • Whatsapp

ದುಬೈ(ಅ.04):  ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕಾಗಿ ನಡೆಯುತ್ತಿರುವ ಹೋರಾಟ ಕುತೂಹಲಕ್ಕೆ ಕಾರಣವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಬೃಹತ್ ಮೊತ್ತದ ನಿರೀಕ್ಷೆಯಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್‌ಗೆ ನಿರಾಸೆಯಾಗಿದೆ. ಚೆನ್ನೈ ಆಪತ್ಭಾಂಧವ ರುತುರಾಜ್ ಗಾಯಕ್ವಾಡ್ ಬಹುಬೇಗನೆ ವಿಕೆಟ್ ಕೈಚೆಲ್ಲಿದರು. ಆದರೆ ಅಂಬಾಟಿ ರಾಯುಡು ಹೋರಾಟದ  ಕಾರಣ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ ನಷ್ಟಕ್ಕೆ 136 ರನ್ ಸಿಡಿಸಿದೆ. 

ರೋಹಿತ್ ಶರ್ಮಾ-ಜಸ್ಪ್ರೀತ್ ಬುಮ್ರಾ: ಟೀಮ್‌ ಇಂಡಿಯಾದ ಆಟಗಾರರ ಲುಕ್‌ಅಲೈಕ್‌ ಇಲ್ಲಿದ್ದಾರೆ!

ಟಾಸ್ ಸೋತು ಬ್ಯಾಟಿಂಗ್ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಆರಂಭ ಪಡೆಯಲಿಲ್ಲ. ಪ್ರತಿ ಪಂದ್ಯದಲ್ಲಿ ಅಬ್ಬರಿಸುತ್ತಿದ್ದ ರುತುರಾಜ್ ಗಾಯಕ್ವಾಡ್ ಕೇವಲ 13 ರನ್ ಸಿಡಿಸಿ ಔಟಾದರು. ಇದು ಸಿಎಸ್‌ಕೆ ತಂಡಕ್ಕೆ ಅತೀ ದೊಡ್ಡ ಹೊಡೆತ ನೀಡಿತು. ಇತ್ತ ಫಾಫ್ ಡುಪ್ಲೆಸಿಸ್ ಕೇವಲ 10 ರನ್ ಸಿಡಿಸಿ ಔಟಾದರು.

IPL 2021 ಕ್ವಾಲಿಫೈ ಲೆಕ್ಕಾಚಾರ: KKR, ಪಂಜಾಬ್, ರಾಜಸ್ಥಾನ & ಮುಂಬೈಗೆ ಈಗಲೂ ಇದೆ ಪ್ಲೇ-ಆಫ್‌ಗೇರುವ ಅವಕಾಶ..

ಚೆನ್ನೈ ಸೂಪರ್ ಕಿಂಗ್ಸ್ ತಂಡ ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ವೈಫಲ್ಯದಿಂದ ಕುಗ್ಗಿ ಹೋಯಿತು. ಮೊಯಿನ್ ಆಲಿ ಕೇವಲ 5 ರನ್ ಸಿಡಿಸಿ ಔಟಾದರು.  ಇತ್ತ ಕನ್ನಡಿಗ ರಾಬಿನ್ ಉತ್ತಪ್ಪ 19 ರನ್ ಸಿಡಿಸಿ ಔಟಾದರು. 62 ರನ್ ಗಳಿಸುವಷ್ಟರಲ್ಲೇ ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್ ಕಳೆದುಕೊಂಡಿತು. 

 

ಅಂಬಾಟಿ ರಾಯುಡು ಹಾಗೂ ನಾಯಕ ಎಂ.ಎಸ್.ಧೋನಿ ಜೊತೆಯಾಟದಿಂದ ಚೆನ್ನೈ ತಂಡ ಚೇತರಿಸಿಕೊಂಡಿತು. ಆರಂಭದಲ್ಲಿ ಸ್ಟ್ರೈಕ್ ರೇಟ್ ಕಳಪೆಯಾಗಿತ್ತು. ಆದರೆ ಅಂಬಾಟಿ ರಾಯುಡು ಭರ್ಜರಿ ಸಿಕ್ಸರ್ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ರನ್ ವೇಗ ಹೆಚ್ಚಿಸಿದರು. ಧೋನಿ ಬ್ಯಾಟಿಂಗ್ ಸ್ಟ್ರೈಕ್ ರೇಟ್ ನಿಧಾನವಾಗಿದ್ದರೂ ಉತ್ತಮ ಸಾಥ್ ನೀಡಿದರು.

IPL 2021: ಪಂಜಾಬ್‌ ಮಣಿಸಿ ಪ್ಲೇ ಆಫ್‌ಗೆ ಲಗ್ಗೆಯಿಟ್ಟ ನಮ್ಮ ಆರ್‌ಸಿಬಿ

ಅಬ್ಬರಿಸಿದ ಅಂಬಾಟಿ ರಾಯುಡು ಹಾಫ್ ಸೆಂಚುರಿ ಸಿಡಿಸಿದರು. ಧೋನಿ ಆಟ 18 ರನ್‌ಗೆ ಅಂತ್ಯವಾಯಿತು. ಅಂಬಾಟಿ ರಾಯುಡು ಅಜೇಯ 55 ರನ್ ಸಿಡಿಸಿದರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ ನಷ್ಟಕ್ಕೆ 135 ರನ್ ಸಿಡಿಸಿತು. ಡೆಲ್ಲಿ ಪರ ಅನಿರ್ಚ್ ನೋರ್ಜೆ 1, ಆವೇಶ್ ಖಾನ್ 1, ರವೀಂದ್ರನ್ ಅಶ್ವಿನ್ 1 ಹಾಗೂ ಅಕ್ಸರ್ ಪಟೇಲ್ 2 ವಿಕೆಟ್ ಕಬಳಿಸಿದರು.

 

ಅಂಕಪಟ್ಟಿಯಲ್ಲಿ  ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಸ್ಥಾನದಲ್ಲಿದೆ. 18 ಅಂಕ ಸಂಪಾದಿಸಿರುವ ಚೆನ್ನೈ 12 ಪಂದ್ಯದಲ್ಲಿ 9 ಪಂದ್ಯ ಗೆದ್ದುಕೊಂಡಿದೆ. ಇನ್ನುಳಿದ 3 ಪಂದ್ಯಗಳನ್ನು ಸೋತಿದೆ. ಇನ್ನು ಎರಡನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ 12 ಪಂದ್ಯದಲ್ಲಿ 9 ಗೆಲುವು 3 ಪಂದ್ಯ ಸೋತಿದೆ. 

Follow Us:
Download App:
  • android
  • ios