Asianet Suvarna News Asianet Suvarna News

IPL 2021: ಚೆನ್ನೈ ವಿರುದ್ಧ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್, ಧೋನಿ ಸೈನ್ಯದಲ್ಲಿ 3 ಬದಲಾವಣೆ!

  • ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ದೆಹಲಿ
  • ಅಗ್ರಸ್ಥಾನಕ್ಕಾಗಿ ಚೆನ್ನೈ ಹಾಗೂ ಡೆಲ್ಲಿ ಹೋರಾಟ
  • ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿರುವ ಡೆಲ್ಲಿ , ಚೆನ್ನೈ
IPL 2021 50th Match Delhi Capitals won toss elected to bowl first against Chennai super kings dubai ckm
Author
Bengaluru, First Published Oct 4, 2021, 7:08 PM IST

ದುಬೈ(ಅ.03):  IPL 2021ರ 50ನೇ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್(Delhi capitals) ಹಾಗೂ ಚೆನ್ನೈ ಸೂಪರ್ ಕಿಂಗ್ಸ್(Chennai super Kings) ಮುಖಾಮುಖಿಯಾಗುತ್ತಿದೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್  ಟಾಸ್(Toss) ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.  ಉಭಯ ತಂಡಗಳು ಈಗಾಗಲೇ ಪ್ಲೇ ಆಫ್ ಸ್ಥಾನ ಖಚಿತಪಡಿಸಿದೆ. ಹೀಗಾಗಿ ಚೆನ್ನೈ ಹಾಗೂ ಡೆಲ್ಲಿ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕಾಗಿ ಹೋರಾಟ ಮಾಡಲಿದೆ.

IPL 2021 ಕ್ವಾಲಿಫೈ ಲೆಕ್ಕಾಚಾರ: KKR, ಪಂಜಾಬ್, ರಾಜಸ್ಥಾನ & ಮುಂಬೈಗೆ ಈಗಲೂ ಇದೆ ಪ್ಲೇ-ಆಫ್‌ಗೇರುವ ಅವಕಾಶ..!

ದೆಹಲಿ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಸ್ಮಿತ್ ಬದಲು ರಿಪಾಲ್ ಪಟೇಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ರಿಪಾಲ್ ಇಂದು ಪದಾರ್ಪಣೆ ಮಾಡುತ್ತಿದ್ದಾರೆ. ಚೆನ್ನೈ ತಂಡದಲ್ಲಿ ಮಹತ್ವದ 3 ಬದಲಾವಣೆ ಮಾಡಲಾಗಿದೆ.

ದೆಹಲಿ ತಂಡ: (DD Squad)
ಪೃಥ್ವಿ ಶಾ, ಶಿಖರ್ ಧವನ್, ರಿಪಾಲ್ ಪಟೇಲ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಶಿಮ್ರೊನ್ ಹೆಟ್ಮೆಯರ್, ಅಕ್ಸರ್ ಪಟೇಲ್, ಆರ್ ಅಶ್ವಿನ್, ಕಾಗಿಸೋ ರಬಾಡಾ, ಅನ್ರಿಚ್ ನೊರ್ಜೆ, ಅವೇಶ್ ಖಾನ್

ಚೆನ್ನೈ ಸೂಪರ್ ಕಿಂಗ್ಸ್ ತಂಡ:(CSK Squad)
ರುತುರಾಜ್ ಗಾಯಕ್ವಾಡ್, ಫಾಫ್ ಡುಪ್ಲೆಸಿಸ್, ಮೊಯಿನ್ ಆಲಿ, ಅಂಬಾಟಿ ರಾಯುಡು, ರಾಬಿನ್ ಉತ್ತಪ್ಪ, ಎಂಎಸ್ ಧೋನಿ, ರವೀಂದ್ರ ಜಡೇಜಾ, ಸ್ಯಾಮ್ ಕುರನ್, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಜೋಶ್ ಹೇಜಲ್‌ವುಡ್

IPL 2021 ಅರ್ಧಶತಕ ಚಚ್ಚಿ ಬ್ಯಾಟ್‌ ಮೇಲೆ ಧೋನಿ ಹಸ್ತಾಕ್ಷರ ಪಡೆದ ಯಶಸ್ವಿ ಜೈಸ್ವಾಲ್‌

ಇಂದಿನ ಪಂದ್ಯಕ್ಕೆ ಬಳಸಲಾಗುವ ಪಿಚ್ ಆರಂಭಿಕ 10 ಓವರ್‌ನಲ್ಲಿ ಬ್ಯಾಟ್ಸ್‌ಮನ್‌ ಅಬ್ಬರಿಸಲಿದ್ದಾರೆ. ಬಳಿಕ ಬ್ಯಾಟ್ಸ್‌ಮನ್‌ಗೆ ತಾಳ್ಮೆ ಮುಖ್ಯವಾಗಲಿದೆ. ಅಂತಿಮ 10 ಓವರ್ ಸ್ಲೋ ಪಿಚ್ ಆಗಿ ಪರಿವರ್ತನೆಯಾಗಲಿದೆ. ಈ ಸಂದರ್ಭದಲ್ಲಿ ಬೌಲರ್‌ಗಳು ಹೆಚ್ಚಿನ ಯಶಸ್ಸು ಸಾಧಿಸುವ ಸಾಧ್ಯತೆ ಇದೆ.

IPL 2021: RCB vs PBKS ಇದು ನಿಮ್ಮ ಪ್ರಕಾರ out/Not out?

ಚೆನ್ನೈ(CSK) ಹಾಗೂ ಡೆಲ್ಲಿ (DD) ತಂಡ ಮೊದಲೆರೆಡು ತಂಡವಾಗಿ ಪ್ಲೇ ಆಫ್ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. 2019ರ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೆಚ್ಚು ಆಕ್ರಮಣಕಾರಿಯಾಗಿ ಆಟವಾಡಿದೆ. ಜೊತೆ ಉತ್ತಮ ಫಲಿತಾಂಶ ಕೂಡ ಕಂಡಿದೆ. ಇತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಷ್ಟೇ ದಿಟ್ಟ ಪ್ರದರ್ಶನದ ಮೂಲಕ ನಿರಾಯಾಸವಾಗಿ ಫ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿದೆ. ಐಪಿಎಲ್ 2021ರ ಬಲಿಷ್ಠ ಎರಡು ತಂಡದ ಹೋರಾಟ ಕುತೂಹಲ ಹೆಚ್ಚಿಸಿದೆ.

IPL 2021: ಹೈದರಾಬಾದ್ ವಿರುದ್ಧ ಗೆಲುವು, KKR ಪ್ಲೇ ಆಫ್ ಕನಸಿಗೆ ಮತ್ತಷ್ಟು ಜೀವ!

ಚೆನ್ನೈ ಸೂಪರ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಚೆನ್ನೈ ಆಡಿದ 12 ಪಂದ್ಯದಲ್ಲಿ 9 ಗೆಲುವು ಹಾಗೂ 3 ಸೋಲು ಕಂಡಿದೆ. ಈ ಮೂಲಕ 18 ಅಂಕ ಸಂಪಾದಿಸಿದೆ. ಎರಡನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ 12 ಪಂದ್ಯದಲ್ಲಿ 9 ಗೆಲುವು ಹಾಗೂ 3 ಸೋಲು ಕಂಡಿದೆ. ಇದರೊಂದಿಗೆ 18 ಅಂಕ ಸಂಪಾದಿಸಿದೆ. ಆದರೆ ಚೆನ್ನೈ ನೆಟ್‌ರನ್‌ರೇಟ್ ಆಧಾರದಲ್ಲಿ ಮೊದಲ ಸ್ಥಾನದಲ್ಲಿದೆ.  3ನೇ ತಂಡವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಸ್ಥಾನ ಖಚಿತಪಡಿಸಿದೆ. ಇದೀಗ ಇನ್ನೊಂದು ಸ್ಥಾನಕ್ಕಾಗಿ ಉಳಿದ ತಂಡಗಳು ಹೋರಾಟ ನಡೆಸುತ್ತಿದೆ.

IPL 2021 ಕ್ರಿಸ್‌ ಗೇಲ್‌ರನ್ನು ಪಂಜಾಬ್‌ ಕಿಂಗ್ಸ್‌ ಸರಿಯಾಗಿ ನಡೆಸಿಕೊಳ್ಳಲಿಲ್ಲ: ಪೀಟರ್‌ಸನ್‌

Follow Us:
Download App:
  • android
  • ios