Asianet Suvarna News Asianet Suvarna News

IPL ಸಭೆ ಅಂತ್ಯ: ಪಂದ್ಯದ ಸಮಯ, ಫೈನಲ್‌ಗೆ ಕ್ರೀಡಾಂಗಣ ಫಿಕ್ಸ್!

ಮುಂಬರುವ ಐಪಿಎಲ್ ಟೂರ್ನಿ ಕುರಿತು ನಡೆದ ಮಹತ್ವ ಸಭೆ ಅಂತ್ಯಗೊಂಡಿದೆ. ಈ ಸಭೆಯಲ್ಲಿ ಪಂದ್ಯದ ಸಮಯ ಬದಲಾವಣೆ, ಫೈನಲ್ ಪಂದ್ಯ ಆಯೋಜನೆ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳು ಅಂತಿಮಗೊಂಡಿದೆ. ಐಪಿಎಲ್ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳೇನು? ಇಲ್ಲಿದೆ ವಿವರ.

IPL 2020 BCCI announces no change of timing in night game
Author
Bengaluru, First Published Jan 27, 2020, 8:31 PM IST

ಮುಂಬೈ(ಜ.27): ಟೀಂ ಇಂಡಿಯಾ ಸದ್ಯ ನ್ಯೂಜಿಲೆಂಡ್ ಪ್ರವಾಸದಲ್ಲಿದೆ. ಇತ್ತ ಬಿಸಿಸಿಐ 2020ರ ಐಪಿಎಲ್ ಟೂರ್ನಿಗೆ ಭರದ ಸಿದ್ದತೆ ನಡೆಸುತ್ತಿದೆ. ಕೆಲ ಮಹತ್ವದ ನಿರ್ಧಾರಕ್ಕಾಗಿ ಬಿಸಿಸಿಐ ಮುಂಬೈನಲ್ಲಿಂದು ಐಪಿಎಲ್ ಸಭೆ ಆಯೋಜಿಸಿತ್ತು. ಈ ಸಭೆಯಲ್ಲಿ ಪಂದ್ಯದ ಸಮಯ ಬದಲಾವಣೆ ಕೂಗು, ನೋ ಬಾಲ್, ಸಬ್ಸಿಟ್ಯೂಟ್ ಆಟಗಾರ, ಫೈನಲ್ ಪಂದ್ಯಕ್ಕೆ ಮೈದಾನ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: RCB ಸಂಭವನೀಯ ಪ್ಲೇಯಿಂಗ್ XI: ಯಾರಿಗೆಲ್ಲಾ ಸಿಕ್ಕಿದೆ ಚಾನ್ಸ್..?.

ರಾತ್ರಿ ಪಂದ್ಯವನ್ನು 8 ಗಂಟೆ ಬದಲು 7 ಗಂಟೆಗೆ ಆರಂಭಿಸಬೇಕು ಎಂದು ನೇರ ಪ್ರಸಾರದ ವಾಹಿನಿ ಸ್ಟಾರ್ ಸ್ಪೋರ್ಟ್ ಮನವಿ ಮಾಡಿತ್ತು. ಆದರೆ ಪಂದ್ಯದ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಹಿಂದಿನಂತೆ ಮೊದಲ ಪಂದ್ಯ 4 ಗಂಟೆ ಹಾಗೂ 2ನೇ ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಈತನನ್ನು ಖರೀದಿಸಲು 9 ಕೋಟಿ ನೀಡಲು ರೆಡಿಯಾಗಿದ್ದ RCB, ಕೊನೆಗೆ ಹರಾಜಾಗಿದ್ದು 50 ಲಕ್ಷಕ್ಕೆ..!.

ಹೆಚ್ಚಾಗಿ ಒಂದು ಪಂದ್ಯ ಆಯೋಜಿಸುವುದಾಗಿ ಗಂಗೂಲಿ ಹೇಳಿದ್ದಾರೆ. ವಾರಾಂತ್ಯ ಹೊರತು ಪಡಿಸಿ ಇನ್ನೆಲ್ಲಾ ದಿನ ಒಂದೊಂದು ಪಂದ್ಯ ಆಯೋಜಿಸುವುದಾಗಿ ಬಿಸಿಸಿಐ ಹೇಳಿದೆ. ಇನ್ನು ಐಪಿಎಲ 2020ರ ಫೈನಲ್ ಪಂದ್ಯಕ್ಕೆ ಅಹಮ್ಮದಾಬಾದ್‌ನ ನವೀಕೃತ ಮೊಟೆರಾ ಕ್ರೀಡಾಂಗಣ ಆತಿಥ್ಯ ವಹಿಸಲಿದೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಇದೀಗ ಈ ಬಾರಿಯ ಐಪಿಎಲ್ ಫೈನಲ್ ಮುಂಬೈನಲ್ಲಿ ಆಯೋಜಿಸುವುದಾಗಿ ಗಂಗೂಲಿ ಹೇಳಿದ್ದಾರೆ. 

ಇದನ್ನೂ ಓದಿ:IPL 2020: ಇಲ್ಲಿದೆ ಕೊಹ್ಲಿ ಸೇರಿದಂತೆ RCB ಕ್ರಿಕೆಟಿಗರ ಸ್ಯಾಲರಿ ಲಿಸ್ಟ್!

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಥರ್ಡ್ ಅಂಪೈರ್ ನೋ ಬಾಲ್ ಹಾಗೂ ಸಬ್ಸ್‌ಟ್ಯೂಟ್ ಆಟಾಗಾರ ಸೇರ್ಪಡೆ ನಿಯಮ ಜಾರಿಯಾಗಲಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಮೇ 24 ರಂದು ಫೈನಲ್ ಪಂದ್ಯ ನಡೆಯಲಿದೆ. ಮಾರ್ಚ್ 29ಕ್ಕೆ ಐಪಿಎಲ್ ಟೂರ್ನಿ ಆರಂಭವಾಗಲಿದೆ. ಆದರೆ ಫೆಬ್ರವರಿಯಲ್ಲಿ ವೇಳಾಪಟ್ಟಿ ಬಿಡುಗಡೆಯಾಗಲಿದೆ ಎಂದು ಬಿಸಿಸಿಐ ಹೇಳಿದೆ.
 

Follow Us:
Download App:
  • android
  • ios