Asianet Suvarna News Asianet Suvarna News

Sachin Tendulkar ಕೋಲ್ಕತಾದ ಕ್ಷೌರಿಕನ ಪುತ್ರಗೆ ಸಚಿನ್‌ 5 ದಿನ ಕೋಚಿಂಗ್‌!

ಟ್ವೀಟರ್‌ನಲ್ಲಿ ವಿಡಿಯೋ ಹಾಕಿದ್ದ ಶಾಹಿದ್‌ ತಂದೆ

5ರ ಶಾಹಿದ್‌ ಬ್ಯಾಟಿಂಗ್‌ ನೋಡಿ ಮನಸೋತ ಸಚಿನ್‌

ಮಗನನ್ನು ಒಳ್ಳೆಯ ಕ್ರಿಕೆಟ್ ಅಕಾಡೆಮಿಗೆ ಸೇರಿಸ್ತೇನೆ ಎಂದ ತಂದೆ

internet sensation kid ended up training with idol sachin tendulkar for five days san
Author
Bengaluru, First Published Mar 12, 2022, 1:18 AM IST

ಮುಂಬೈ (ಮಾ.11): ‘ಕ್ರಿಕೆಟ್‌ ದೇವರು’ ಎಂದೇ ಕರೆಸಿಕೊಳ್ಳುವ ಸಚಿನ್‌ ತೆಂಡುಲ್ಕರ್‌ರಿಂದ (Sachin Tendulkar) ಕ್ರಿಕೆಟ್‌ ಪಾಠಗಳನ್ನು ಕಲಿಯುವ ಅದೃಷ್ಟಎಷ್ಟುಜನರಿಗೆ ಸಿಗಲಿದೆ ಹೇಳಿ. ಅಂತದ್ದೊಂದು ಅಪರೂಪದ ಅವಕಾಶ ಕೋಲ್ಕತಾದ ಕ್ಷೌರಿಕರೊಬ್ಬರ ಪುತ್ರ, 5 ವರ್ಷದ ಎಸ್‌.ಕೆ.ಶಾಹಿದ್‌ (S K Shahid) ಎಂಬಾತನಿಗೆ ಇತ್ತೀಚೆಗೆ ಸಿಕ್ಕಿತ್ತು ಎನ್ನುವ ವಿಷಯ ಬಹಿರಂಗವಾಗಿದೆ.

ಶಾಹಿದ್‌ ಬ್ಯಾಟಿಂಗ್‌ ಅಭ್ಯಾಸ ನಡೆಸುವ ವಿಡಿಯೋವನ್ನು ಇತ್ತೀಚೆಗೆ ಅವರ ತಂದೆ ಟ್ವೀಟರ್‌ನಲ್ಲಿ(Twitter) ಪೋಸ್ಟ್‌ ಮಾಡಿದ್ದರು. ಆ ವಿಡಿಯೋ ವೈರಲ್‌ ಆಗಿತ್ತು. ಆಸ್ಪ್ರೇಲಿಯಾದ ಫಾಕ್ಸ್‌ ಕ್ರಿಕೆಟ್‌ ವಾಹಿನಿಯು ಆ ವಿಡಿಯೋವನ್ನು ರೀಟ್ವೀಟ್‌ ಮಾಡಿ ಸಚಿನ್‌, ಶೇನ್‌ ವಾರ್ನ್‌ ಹಾಗೂ ಇಂಗ್ಲೆಂಡ್‌ ಮಾಜಿ ನಾಯಕ ಮೈಕಲ್‌ ವಾನ್‌ಗೆ ಟ್ಯಾಗ್‌ ಮಾಡಿತ್ತು. ಕಳೆದ ವಾರ ನಿಧನರಾದ ವಾರ್ನ್‌, ಆ ವಿಡಿಯೋಗೆ ಪ್ರತಿಕ್ರಿಯೆ ಸಹ ನೀಡಿದ್ದರು.

ಶಾಹಿದ್‌ರ ಬ್ಯಾಟಿಂಗ್‌ ಕೌಶಲ್ಯಕ್ಕೆ ಮನಸೋತ ಸಚಿನ್‌, ತಮ್ಮ ಕಚೇರಿ ಮೂಲಕ ಆತನನ್ನು ಮುಂಬೈನಲ್ಲಿರುವ ತಮ್ಮ ಮಿಡ್ಲ್‌ಸೆಕ್ಸ್‌ ತೆಂಡುಲ್ಕರ್‌ ಅಕಾಡೆಮಿಗೆ (Tendulkar Middlesex Global Academy) ಕರೆಸಿಕೊಂಡಿದ್ದರು. ಶಾಹಿದ್‌ ಹಾಗೂ ಅವರ ತಂದೆಗೆ ಉಳಿಯಲು ವ್ಯವಸ್ಥೆ ಮಾಡಿಕೊಟ್ಟಿದ್ದ ಸಚಿನ್‌, ಸ್ವತಃ ತಾವೇ 5 ದಿನಗಳ ಕಾಲ ಬ್ಯಾಟಿಂಗ್‌ ತರಬೇತಿ ಸಹ ನೀಡಿದ್ದಾರೆ. ಸಚಿನ್‌ರಿಂದ ಬ್ಯಾಟಿಂಗ್‌ನ ಆರಂಭಿಕ ಪಾಠಗಳನ್ನು ಕಲಿತ ಶಾಹಿದ್‌ರನ್ನು ಕೋಲ್ಕತಾದಲ್ಲಿ ಒಳ್ಳೆಯ ಅಕಾಡೆಮಿಗೆ ಸೇರಿಸಲು ಸಿದ್ಧತೆ ನಡೆಸುತ್ತಿರುವುದಾಗಿ ಆತನ ತಂದೆ ಹೇಳಿಕೊಂಡಿದ್ದಾರೆ.


ಅಲೆಕ್ಸ್ ಹ್ಯಾಲ್ಸ್ ಬದಲು ಕೆಕೆಆರ್ ತಂಡಕ್ಕೆ Aaron Finch
ಹಾಕಿ: ಭಾರತಕ್ಕಿಂದು ಜರ್ಮನಿ ಎದುರಾಳಿ
ಭುವನೇಶ್ವರ:
ಭಾರತ ಮಹಿಳಾ ಹಾಕಿ ತಂಡ ( Indian Women Hockey Team )  ಶನಿವಾರ ಮತ್ತು ಭಾನುವಾರ ನಡೆಯಲಿರುವ ಎಫ್‌ಐಎಚ್‌ ಪ್ರೊ ಲೀಗ್‌ ( FIH Pro League ) ಪಂದ್ಯಗಳಲ್ಲಿ ವಿಶ್ವ ನಂ.5 ಜರ್ಮನಿ ( Germany ) ತಂಡವನ್ನು ಎದುರಿಸಲಿದೆ. ಚೊಚ್ಚಲ ಬಾರಿಗೆ ಪ್ರೊ ಲೀಗ್‌ನಲ್ಲಿ ( Pro League)  ಆಡುತ್ತಿರುವ ಭಾರತ ( India ), ಆಡಿರುವ 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಚೀನಾ ( China ) ವಿರುದ್ಧ 7-1, 2-1 ಗೋಲುಗಳಲ್ಲಿ ಗೆದ್ದು ಶುಭಾರಂಭ ಮಾಡಿದ್ದ ಭಾರತ, ಸ್ಪೇನ್‌ ( Spain ) ವಿರುದ್ಧ ಮೊದಲ ಪಂದ್ಯದಲ್ಲಿ 2-1ರಲ್ಲಿ ಜಯಿಸಿತ್ತು. 2ನೇ ಪಂದ್ಯದಲ್ಲಿ 3-4 ಗೋಲುಗಳ ವೀರೋಚಿತ ಸೋಲು ಕಂಡಿತ್ತು. ವಿಶ್ವ ರಾರ‍ಯಂಕಿಂಗ್‌ನಲ್ಲಿ 9ನೇ ಸ್ಥಾನದಲ್ಲಿರುವ ಭಾರತಕ್ಕೆ, ಈ ಪಂದ್ಯ ಅತ್ಯಂತ ಮಹತ್ವದೆನಿಸಿದ್ದು, ಗೋಲ್‌ಕೀಪರ್‌ ಸವಿತಾ (Goal Keeper Savita) ನೇತೃತ್ವದ ಪಡೆ ಗೆಲುವಿನ ವಿಶ್ವಾಸದಲ್ಲಿದೆ.
ಪಂದ್ಯ: ಸಂಜೆ 5ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋಟ್ಸ್‌ರ್‍ ಸೆಲೆಕ್ಟ್ 2

 IPL 2022: ಮುಂಬೈ ಇಂಡಿಯನ್ಸ್‌ಗೆ ಟಕ್ಕರ್ ನೀಡಿ ಲಸಿತ್ ಮಾಲಿಂಗರನ್ನು ಸೆಳೆದುಕೊಂಡ ರಾಜಸ್ಥಾನ ರಾಯಲ್ಸ್..!
ರಾಜಸ್ಥಾನ ರಾಯಲ್ಸ್‌ಗೆ ಮಾಲಿಂಗ ಬೌಲಿಂಗ್‌ ಕೋಚ್‌
ಮುಂಬೈ:
ಶ್ರೀಲಂಕಾದ ಮಾಜಿ ವೇಗಿ ( Former Srilanka Bowler) , ಐಪಿಎಲ್‌ನಲ್ಲಿ ( IPL ) ಗರಿಷ್ಠ ವಿಕೆಟ್‌ ಕಬಳಿಸಿರುವ ಬೌಲರ್‌ ಎನ್ನುವ ದಾಖಲೆ ಹೊಂದಿರುವ ಲಸಿತ್‌ ಮಾಲಿಂಗ  ( Lasith Malinga )  2022ರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ( Rajasthan Royals ) ತಂಡದ ವೇಗದ ಬೌಲಿಂಗ್‌ ಕೋಚ್‌ ಆಗಿ ಕಾರ‍್ಯನಿರ್ವಹಿಸಲಿದ್ದಾರೆ. ಮುಂಬೈ ಇಂಡಿಯನ್ಸ್‌ ( Mumbai Indians ) ಪರ 122 ಪಂದ್ಯಗಳನ್ನು ಆಡಿರುವ ಮಾಲಿಂಗ 170 ವಿಕೆಟ್‌ ಕಬಳಿಸಿದ್ದಾರೆ. ತಂಡದ ಪ್ರಧಾನ ಕೋಚ್‌ ಕುಮಾರ ಸಂಗಕ್ಕರ, ಮಾಲಿಂಗ ಅವರ ಹೆಸರನ್ನು ಫ್ರಾಂಚೈಸಿಗೆ ಶಿಫಾರಸು ಮಾಡಿದ್ದರು ಎನ್ನಲಾಗಿದೆ.

Follow Us:
Download App:
  • android
  • ios