ಕಾಬೂಲ್(ಅ.04):  ಆಫ್ಘಾನಿಸ್ತಾನದಲ್ಲಿ ಮಹತ್ವದ ಶಾಂತಿ ಮಾತುಕತೆ ಬಳಿಕ ಬಾಂಬ್ ಸ್ಫೋಟ, ಆತ್ಮಾಹುತಿ ದಾಳಿಗಳ ಸಂಖ್ಯೆ ಕಡಿಮೆಯಾಗಿತ್ತು. ಇದೀಗ ಮತ್ತೆ ಆಫ್ಘಾನಿಸ್ತಾನದಲ್ಲಿ ಭೀಕರ ಆತ್ಮಾಹುತಿ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಆಫ್ಘಾನಿಸ್ತಾನದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಪೈರ್ ಬಿಸ್ಮಿಲ್ಲಾ ಜಾನ್ ಶಿನ್ವಾರಿ ಬಲಿಯಾಗಿದ್ದಾರೆ.

ಅಫ್ಘಾನಿಸ್ತಾನ ಕ್ರಿಕೆಟಿಗನ ಕಾರು ಅಪಘಾತ; ವಾಹನ ಪುಡಿ ಪುಡಿ!

ಆಫ್ಘಾನಿಸ್ತಾನದ ಘಾನಿಕಿಲ್ ಜಿಲ್ಲೆಯ ನಂಗಹರ್ ವಲಯದಲ್ಲಿ ಈ ಘಟನೆ ನಡೆದಿದೆ. ಜಿಲ್ಲಾ ಗರ್ವನರ್ ಕೌಂಪೌಂಡ್ ಬಳಿ ಉಗ್ರರು ಕಾರಿನ್ನು ಸ್ಫೋಟಿಸಿದ್ದಾರೆ. ಈ ಘಟನೆಯಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ. ಹಲವು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಹಾಗೂ ಆಫ್ಘಾನಿಸ್ತಾನ ದೇಶಿ ಕ್ರಿಕೆಟ್ ಪಂದ್ಯದ ಖಾಯಂ ಅಂಪೈರ್ ಆಗಿದ್ದ ಬಿಸ್ಮಲ್ಲಾ ಜಾನ್ ಶಿನ್ವಾರಿ ಸಾವನ್ನಪ್ಪಿದ್ದಾರೆ. 

36 ವರ್ಷದ ಶಿನ್ವಾರಿ 2018ರಲ್ಲಿ ನಡೆದ ಆಫ್ಘಾನಿಸ್ತಾನ ಹಾಗೂ ಜಿಂಬಾಬ್ವೆ ನಡುವಿನ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಅಂಪೈರ್ ಆಗಿ ಸೇವೆ ಸಲ್ಲಿಸಿದರು. ಇದು ಶಿನ್ವಾರಿ ಅವರ ಚೊಚ್ಚಲ ಅಂತಾರಾಷ್ಟ್ರೀಯ ಅಂಪೈರಿಂಗ್ ಆಗಿತ್ತು. 

ಆತ್ಮಾಹುತಿ ದಾಳಿಯಲ್ಲಿ 30ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ಜಿಲ್ಲಾ ಗರ್ವನರ್ ಕಚೇರಿ ಬಳಿಕ ಓರ್ವ ಉಗ್ರನನ್ನು ಸೇನೆ ಹೊಡೆದುರುಳಿಸಿದೆ.