* ಐಪಿಎಲ್‌ನ ಲೀಗ್‌ ಹಂತದ ಪಂದ್ಯಗಳಿಗೆ ಮಹಾರಾಷ್ಟ್ರದ 4 ಸ್ಟೇಡಿಯಂಗಳು ಆತಿಥ್ಯ* ಐಪಿಎಲ್‌ ಲೀಗ್ ಹಂತದ 70 ಪಂದ್ಯಗಳು ಮಹಾರಾಷ್ಟ್ರದ 4 ಸ್ಟೇಡಿಯಂನಲ್ಲಿ ಜರುಗಲಿದೆ* ಕೆಂಪು ಹಾಗೂ ಕಪ್ಪು ಮಣ್ಣಿನ ಪಿಚ್ ಹೇಗೆ ವರ್ತಿಸಲಿದೆ ಎನ್ನುವುದರ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್‌

ಬೆಂಗಳೂರು(ಮಾ.26): ಕಲರ್ ಫುಲ್ ಟೂರ್ನಿ ಐಪಿಎಲ್ (IPL) ಇಂದಿನಿಂದ ಕಿಕ್ ಆಫ್ ಆಗಲಿದೆ. ಮಹಾರಾಷ್ಟ್ರದ ನಾಲ್ಕು ಸ್ಟೇಡಿಯಂಗಳಲ್ಲಿ 10 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಮರಾಠರ ನಾಡಿನಲ್ಲಿ ಎಲ್ಲಾ 70 ಲೀಗ್ ಮ್ಯಾಚ್​ಗಳು ನಡೆಯಲಿವೆ. ಈ ಸಲದ ಐಪಿಎಲ್ ಲೀಗ್ ಪಂದ್ಯಗಳು (IPL League) ನಡೆಯೋ ಸ್ಟೇಡಿಯಂಗಳತ್ತ ಒಮ್ಮೆ ಕಣ್ಣಾಡಿಸಿದ್ರೆ, ಈ ಸಲವೂ ಬೌಲರ್​ಗಳ ಮಾರಣ ಹೋಮ ನಡೆಯೋದು ಗ್ಯಾರಂಟಿ.

ವಾಂಖೆಡೆ ಸ್ಟೇಡಿಯಂ: 20 ಪಂದ್ಯಗಳು

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ (Wankhede Stadium) ಈ ಸಲದ ಐಪಿಎಲ್​ನ 20 ಮ್ಯಾಚ್​ಗಳು ನಡೆಯಲಿವೆ. ಕೆಂಪು ಮಣ್ಣಿನಿಂದ ಮಾಡಿರುವ ಪಿಚ್ ಸ್ಪರ್ಧಾತ್ಮಕವಾಗಿದೆ. ಬಾಲ್ ಬೌನ್ಸ್ ಸಹ ಆಗುತ್ತೆ. ಬ್ಯಾಟ್​ಗೆ ಈಸಿಯಾಗಿ ಸಿಗುತ್ತೆ ಕೂಡ. ಈ ಪಿಚ್ ಸ್ಪಿನ್ನರ್​​ಗೆ ಹೆಚ್ಚು ಸಹಾಯವಾಗುತ್ತೆ. ಆದರೆ ಬೌಂಡ್ರಿ ಸೈಜ್ ಚಿಕ್ಕದಾಗಿದೆ. ಹಾಗಾಗಿ ಬಿಗ್ ಹಿಟ್ಟರ್ಸ್​ ಭರ್ಜರಿ ಶಾಟ್​​ಗಳನ್ನ ಹೊಡೆದ್ರೆ, ಬಾಲ್ ಸ್ಟೇಡಿಯಂ ದಾಟಿ ಹೋಗಲಿದೆ. ಅಲ್ಲಿಗೆ ವಾಂಖೆಡೆ ಸ್ಟೇಡಿಯಂನಲ್ಲಿ ಈ ಸಲ ಬೌಂಡರಿ-ಸಿಕ್ಸರ್​​ಗಳ ಸುರಿಮಳೆಯಾಗೋದಂತೂ ಗ್ಯಾರಂಟಿ. ಆದರೆ ಹೊಡೆಯೋ ತಂಡ ಯಾವುದು ಅನ್ನೋದೇ ಕುತೂಹಲ.

ಬ್ರಾಬೋರ್ನ್​ ಮೈದಾನ: 15 ಮ್ಯಾಚ್​​ಗಳು

ಮುಂಬೈನ ಬ್ರಾಬೋರ್ನ್​ ಸ್ಟೇಡಿಯಂ ಪಿಚ್ ಸಹ ಕೆಂಪು ಮಣ್ಣಿನಿಂದಲೇ ತಯಾರಿಸಲಾಗಿದೆ. ಹೆಚ್ಚೂಕಮ್ಮಿ ವಾಂಖೆಡೆ ಸ್ಟೇಡಿಯಂ ತರವೇ ಇದೆ. ಸ್ಪರ್ಧಾತ್ಮಕ ಪಿಚ್. ಸ್ಪಿನ್ನರ್ಸ್​​ಗೆ ಹೆಲ್ಪ್ ಆಗಲಿದೆ. ಬಾಲ್ ಬೌನ್ಸ್ ಸಹ ಆಗಲಿದೆ. ಬ್ಯಾಟರ್​​ಗಳಿಗೆ ಎಷ್ಟು ನೆರವಾಗುತ್ತೋ ಅಷ್ಟೇ ಬೌಲರ್​ಗಳಿಗೂ ನೆರವಾಗಲಿದೆ. ಹಾಗಾಗಿ ಸ್ಪರ್ಧಾತ್ಮಕ ಪಿಚ್​ನಲ್ಲಿ ಯಾರು ಮೊದಲು ಬ್ಯಾಟಿಂಗ್ ಮಾಡ್ತಾರೆ ಅನ್ನೋದು ಇಂಪಾರ್ಟೆಂಟ್ ಆಗಲ್ಲ. ಯಾರು ಕ್ರೀಸಿನಲ್ಲಿ ನಿಂತು ಮ್ಯಾಚ್ ವಿನ್ ಮಾಡ್ತಾರೆ ಅನ್ನೋದೇ ಮುಖ್ಯ.

ಡಿವೈ ಪಾಟೀಲ್ ​ ಸ್ಟೇಡಿಯಂ: 20 ಪಂದ್ಯಗಳು

ಡಿವೈ ಪಾಟೀಲ್ ಸ್ಟೇಡಿಯಂ ಪಿಚ್ ಸಹ ಕೆಂಪು ಮಣ್ಣಿನಿಂದಲೇ ಮಾಡಿರೋದು. ಸ್ಪರ್ಧಾತ್ಮಕ ಪಿಚ್ ಆಗಿದ್ದು, ಬಾಲ್ ಹೆಚ್ಚು ಬೌನ್ಸ್ ಆಗಲಿದೆ. ಸ್ಪರ್ಧಾತ್ಮಕ ಪಿಚ್​ಗಳಲ್ಲಿ ಈ ಪಿಚ್ ಸಹ ಒಂದು. ಬಿಸಿಸಿಐ ಚೀಫ್​ ಪಿಚ್ ಕ್ಯೂರೇಟರ್​ ತಪೋಸ್​ ಚಟರ್ಜಿ ರೆಡಿ ಮಾಡಿರೋ ಪಿಚ್ ಆಗಿರೋದ್ರಿಂದ ತೀವ್ರ ಕುತೂಹಲ ಕೆರಳಿಸಿದೆ. ಪಿಚ್ ಹೇಗೆ ವರ್ತಿಸುತ್ತೆ ಅನ್ನೋದು ಮಾತ್ರ ನಿಗೂಢ.

IPL ಟೂರ್ನಿಯಿಂದಲೇ 100 ಕೋಟಿ ಜೇಬಿಗಿಳಿಸಿದ ಟಾಪ್ 5 ಕ್ರಿಕೆಟಿಗರಿವರು..!

ಎಂಸಿಎ ಮೈದಾನ: 15 ಮ್ಯಾಚ್​​ಗಳು

ಮುಂಬೈನ ಮೂರು ಸ್ಟೇಡಿಯಂನಲ್ಲಿ 55 ಐಪಿಎಲ್ ಪಂದ್ಯಗಳಿಗೆ ಆತಿಥ್ಯ ವಹಿಸಿದ್ರೆ, ಪುಣೆಯ ಎಂಸಿಎ ಮೈದಾನ 15 ಮ್ಯಾಚ್​ಗಳಿಗೆ ಆತಿಥ್ಯ ವಹಿಸಲಿದೆ. ಮುಂಬೈನ ಮೂರು ಮೈದಾನದ ಪಿಚ್​ಗಳು ಕೆಂಪು ಮಣ್ಣಿನಿಂದ ತಯಾರಿಸಿದ್ದು. ಆದರೆ ಪುಣೆ ಸ್ಟೇಡಿಯಂ ಮಾತ್ರ ಕಪ್ಪು ಮಣ್ಣಿನಿಂದ ತಯಾರಿಸಲಾಗಿದೆ. ಬೌಂಡ್ರಿ ಲೈನ್ ಸಹ ಚಿಕ್ಕದಾಗಿದೆ. ಹಾಗಾಗಿ ಇಲ್ಲಿ ಬೌಂಡ್ರಿ-ಸಿಕ್ಸರ್​ಗಳು ಧಾರಾಳವಾಗಿ ಬರಲಿವೆ. ಸ್ಫೋಟಕ ದಾಂಡಿಗರು ಈ ಮೈದಾನ ರನ್ ಹೊಳೆಯನ್ನೇ ಹರಿಸಬಹುದು.

ಒಂದು ಸ್ಟೇಡಿಯಂನಲ್ಲಿ ಐದು ಪಿಚ್​ಗಳು..!

ಎಲ್ಲಾ ನಾಲ್ಕು ಸ್ಟೇಡಿಯಂನಲ್ಲಿ ತಲಾ ಐದೈದು ಪಿಚ್​ಗಳನ್ನ ಸಿದ್ದಪಡಿಸಲಾಗಿದೆ. ಒಂದೊಂದು ಪಂದ್ಯವನ್ನ ಒಂದೊಂದು ಪಿಚ್​ನಲ್ಲಿ ಆಡಿಸಲಾಗುತ್ತೆ. ಪಿಚ್​ಗಳನ್ನೂ ರೊಟೆಟ್​ ಮಾಡಲಾಗುತ್ತೆ. ಕೆಂಪು ಮಣ್ಣಿನಿಂದ ತಯಾರಿಸಲಾಗಿರುವ ಪಿಚ್​​​​​​ನಲ್ಲಿ ಬಾಲ್ ಹೆಚ್ಚು ಸ್ವಿಂಗ್ ಆಗಲಿದೆ. ಆದರೆ ಕಪ್ಪು ಮಣ್ಣಿನಿಂದ ತಯಾರಿಸಲಾಗಿರುವ ಪುಣೆ ಪಿಚ್ ವೇಗದ ಬೌಲರ್ಸ್​​​​ಗೆ ಸಹಾಯವಾಗುತ್ತೆ. ಬೆಂಗಳೂರು, ಕೋಲ್ಕತಾ ಮತ್ತು ಡೆಲ್ಲಿ ಪಿಚ್​ಗಳನ್ನೂ ಕಪ್ಪು ಮಣ್ಣಿನಿಂದಲೇ ತಯಾರಿಸಿರೋದು. ಇನ್ನು ಪಂದ್ಯ ವೀಕ್ಷಿಸಲು ಸ್ಟೇಡಿಯಂಗೆ ಪ್ರೇಕ್ಷಕರನ್ನ ಬಿಡಲಾಗುವುದು. ಹಾಗಾಗಿ ನಾಲ್ಕು ಸ್ಟೇಡಿಯಂಗಳಲ್ಲೂ ಆಡಿಯನ್ಸ್​, ಬೌಂಡ್ರಿ-ಸಿಕ್ಸರ್​ಗಳ ರಸದೌತಣ ವೀಕ್ಷಿಸಬಹುದು. ಈ ಸಲವೂ ಐಪಿಎಲ್​​ನಲ್ಲಿ ಬೌಲರ್​ಗಳ ಮಾರಣ ಹೋಮ, ರನ್ ಹೊಳೆ ಹರಿಯೋದು ಗ್ಯಾರಂಟಿ.