Asianet Suvarna News Asianet Suvarna News

ಶ್ರೀಲಂಕಾ ವಿರುದ್ಧದ ತವರಿನ ಸರಣಿಗೆ ರೋಹಿತ್ ಶರ್ಮಾ ಡೌಟ್, ನಾಯಕನಾಗಿ ಪಾಂಡ್ಯ ಮುಂದುವರಿಕೆ!

ಬಾಂಗ್ಲಾದೇಶ ಸರಣಿಯಿಂದ ಹೊರಬಿದ್ದಿರುವ ನಾಯಕ ರೋಹಿತ್ ಶರ್ಮಾ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇದೀಗ ಶ್ರೀಲಂಕಾ ವಿರುದ್ಧದ ತವರಿನ ಸರಣಿಗೂ ರೋಹಿತ್ ಶರ್ಮಾ ಅಲಭ್ಯರಾಗುವ ಸಾಧ್ಯತೆ ಇದೆ.
 

Injured Rohit sharma likely to miss home series against Srilanka t20 hardik pandya may lead team India ckm
Author
First Published Dec 22, 2022, 7:03 PM IST

ಮುಂಬೈ(ಡಿ.22):  ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಗಾಯಗೊಂಡ ನಾಯಕ ರೋಹಿತ್ ಶರ್ಮಾ ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ರೋಹಿತ್ ಶರ್ಮಾ ಸಂಪೂರ್ಣ ಚೇತರಿಕಿಗೆ ಹೆಚ್ಚಿನ ಸಮಯ ಬೇಕಿದೆ. ಹೀಗಾಗಿ ತವರಿನಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ದದ ಟಿ20 ಸರಣಿಗೂ ರೋಹಿತ್ ಶರ್ಮಾ ಅಲಭ್ಯರಾಗುವ ಸಾಧ್ಯತೆ ಇದೆ. ಬಿಸಿಸಿಐ ವೈ್ಯಕೀಯ ತಂಡದ ವರದಿ ಪ್ರಕಾರ ರೋಹಿತ್ ಶರ್ಮಾ ಚೇತರಿಸಿಕೊಳ್ಳಲು ಕೆಲ ಸಮಯಬೇಕು. ರೋಹಿತ್ ಅನುಪಸ್ಥಿತಿಯಲ್ಲಿ ಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕನಾಗಿ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ. ಬಿಸಿಸಿಐ ಮೂಲಗಳ ಪ್ರಕಾರ, 2024ರ ಟಿ20 ವಿಶ್ವಕಪ್ ಟೂರ್ನಿಗೆ ಹೊಸ ತಂಡ ರಚಿಸಲು ಬಿಸಿಸಿಐ ಆಸಕ್ತಿ ತೋರಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಯುವಕರ ತಂಡ ಕಟ್ಟಲು ಬಿಸಿಸಿಐ ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿದೆ. ಇದರ ಅಂಗವಾಗಿ ರೋಹಿತ್ ಶರ್ಮಾಗೆ ಉದ್ದೇಶಪೂರ್ವಕ ವಿಶ್ರಾಂತಿ ನೀಡಲಾಗುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ರೋಹಿತ್ ಶರ್ಮಾರನ್ನು ಏಕದಿನ ಹಾಗೂ ಟೆಸ್ಟ್ ತಂಡಕ್ಕೆ ಸೀಮಿತಗೊಳಿಸಲು ಬಿಸಿಸಿಐ ಮುಂದಾಗಿದೆ. ಅದರಲ್ಲೂ ಏಕದಿನದಲ್ಲಿ ರೋಹಿತ್ ಶರ್ಮಾ ನಾಯಕರಾಗಿ ಮುಂದುವರಿಯವು ಸಾಧ್ಯತೆ ಹೆಚ್ಚು. ಟಿ20ಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಹೊಸ ತಂಡ ಕಟ್ಟಲು ಬಿಸಿಸಿಐ ಅನಧಿಕೃತ ಸೂಚನೆ ನೀಡಿದ್ದರೆ, ಟೆಸ್ಟ್ ಮಾದರಿಯಲ್ಲಿ ಟೀಂ ಇಂಡಿಯಾವನ್ನು ಕೆಎಲ್ ರಾಹುಲ್ ಮುನ್ನಡೆಸುವ ಸಾಧ್ಯತೆಗಳು ಕಂಡು ಬರುತ್ತಿದೆ.

Ind vs Ban ಉಮೇಶ್-ಅಶ್ವಿನ್ ದಾಳಿಗೆ ಬಾಂಗ್ಲಾ ತತ್ತರ; 227 ರನ್‌ಗೆ ಆತಿಥೇಯರು ಆಲೌಟ್‌

ಬಾಂಗ್ಲಾದೇಶ ವಿರುದ್ಧದ 2ನೇ ಏಕದಿನ ಪಂದ್ಯದ ವೇಳೆ ಗಾಯಗೊಂಡ ರೋಹಿತ್ ಶರ್ಮಾ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅಂತಿಮ ಟೆಸ್ಟ್ ಪಂದ್ಯಕ್ಕೆ ವಾಪಸ್ಸಾಗುವ ಸಾಧ್ಯತೆ ಮಾತುಗಳು ಕೇಳಿಬಂದಿತ್ತು. ಇದೀಗ ರೋಹಿತ್‌ಗೆ ಹೆಚ್ಚಿನ ವಿಶ್ರಾಂತಿ ಪಡೆದುಕೊಳ್ಳಲು ಬಿಸಿಸಿಐ ಸೂಚಿಸಿದೆ.  ಏಕದಿನ ಸರಣಿಯ 2ನೇ ಪಂದ್ಯದ ವೇಳೆ ರೋಹಿತ್‌ರ ಎಡಗೈ ಹೆಬ್ಬೆರಳಿಗೆ ಗಾಯವಾಗಿತ್ತು. ಹೀಗಾಗಿ ಚಿಕಿತ್ಸೆಗಾಗಿ ಮುಂಬೈಗೆ ಮರಳಿದ್ದ ಅವರು 3ನೇ ಏಕದಿನ, ಮೊದಲ ಟೆಸ್ಟ್‌ ಪಂದ್ಯಕ್ಕೆ ಗೈರಾಗಿದ್ದರು. ಮುಂದಿನ ವಾರ ವೈದ್ಯಕೀಯ ತಪಾಸಣೆಗೆ ಒಳಗಾಗಲಿದ್ದಾರೆ.

ಭಾರತ ಹಾಗೂ ಶ್ರೀಲಂಕಾ ನಡುವಿನ ತವರಿನ ಸರಣಿ ಜನವರಿ 3ರಿಂದ ಆರಂಭಗೊಳ್ಳಲಿದೆ. 3 ಟಿ20 ಹಾಗೂ 3 ಏಕದಿನ ಪಂದ್ಯಗಳ ಸರಣಿ ಆಯೋಜಿಸಲಾಗಿದೆ. ಜನವರಿ 3, 5 ಹಾಗೂ 7 ರಂದು ಟಿ20  ಸರಣಿ ನಡೆಯಲಿದೆ. ಇನ್ನು ಜನವರಿ 10, 12 ಹಾಗೂ 15 ರಂದು ಏಕದಿನ ಸರಣಿ ನಡೆಯಲಿದೆ. ಸದ್ಯ ಬಾಂಗ್ಲಾದೇಶ ವಿರುದ್ದದ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ ಟೀಂ ಇಂಡಿಯಾ ಇದೀಗ 2ನೇ ಪಂದ್ಯ ಗೆದ್ದು ವೈಟ್ ವಾಶ್ ಗೆಲುವಿನ ವಿಶ್ವಾಸದಲ್ಲಿದೆ. 

Ind vs Ban ಬಾಂಗ್ಲಾದೇಶ ಎದುರಿನ ಎರಡನೇ ಟೆಸ್ಟ್‌ನಿಂದ ರೋಹಿತ್ ಶರ್ಮಾ, ನವದೀಪ್ ಸೈನಿ ಔಟ್..!

ಭಾರತದ ತಾರಾ ಬ್ಯಾಟರ್‌ ವಿರಾಟ್‌ ಕೊಹ್ಲಿ ಐಸಿಸಿ ಏಕದಿನ ರಾರ‍ಯಂಕಿಂಗ್‌ನಲ್ಲಿ 8ನೇ ಸ್ಥಾನ ಪಡೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ಧ ಶತಕ ಸಿಡಿಸಿದ್ದ ಕೊಹ್ಲಿ ಇತ್ತೀಚೆಗೆ ಪ್ರಕಟಗೊಂಡ ನೂತನ ರಾರ‍ಯಂಕಿಂಗ್‌ನಲ್ಲಿ 2 ಸ್ಥಾನ ಜಿಗಿತ ಕಂಡರು. ಟೆಸ್ಟ್‌ ಬ್ಯಾಟಿಂಗ್‌ ರಾರ‍ಯಂಕಿಂಗ್‌ನಲ್ಲಿ ರಿಷಭ್‌ ಪಂತ್‌ 5, ರೋಹಿತ್‌ ಶರ್ಮಾ 10ನೇ ಸ್ಥಾನದಲ್ಲಿದ್ದಾರೆ. ವಿರಾಟ್‌ 12ನೇ ಸ್ಥಾನ ಕಾಯ್ದುಕೊಂಡಿದ್ದಾರೆ.

Follow Us:
Download App:
  • android
  • ios