Asianet Suvarna News Asianet Suvarna News

ಭಾರತವನ್ನು ಸೋಲಿನಿಂದ ಪಾರು ಮಾಡಿದ ಹೀರೋ, 4ನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯ!

ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿನಿಂದ ಪಾರಾಗಿದೆ. ಇಷ್ಟೇ ಅಲ್ಲ ಅದ್ಭುತ ಹೋರಾಟದ ಮೂಲಕ ಪಂದ್ಯವನ್ನು ಡ್ರಾಮಾಡಿಕೊಂಡಿದೆ. ಆದರೆ ದಿಟ್ಟ ಹೋರಾಟ ನೀಡಿ ಹೀರೋ ಆಗಿ  ಮಿಂಚಿದ ಟೀಂ ಇಂಡಿಯಾ ಕ್ರಿಕೆಟಿಗ 4ನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.

Injured hanuma vihari ruled out from 4th and last test against Australia ckm
Author
Bengaluru, First Published Jan 11, 2021, 9:49 PM IST

ಸಿಡ್ನಿ(ಜ.11): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯ ಡ್ರಾಗೊಂಡಿದೆ. ಸೋಲಿನ ಸುಳಿಯಲ್ಲಿದ್ದ ಟೀಂ ಇಂಡಿಯಾವನ್ನು ಪಾರುಮಾಡಿದ್ದು, ರಿಷಬ್ ಪಂತ್, ಹನುಮಾ ವಿಹಾರಿ ಹಾಗೂ ಆರ್ ಅಶ್ವಿನ್. ಅದರಲ್ಲೂ ಪ್ರಮುಖವಾಗಿ ಹನುಮಾ ವಿಹಾರಿ ಸಮಯೋಚಿತ ಬ್ಯಾಟಿಂಗ್ ಭಾರತ ತಂಡಕ್ಕೆ ನೆರವಾಯಿತು. ಇತ್ತ ಅಶ್ವಿನ ಕೂಡ ಉತ್ತಮ ಸಾಥ್ ನೀಡಿದರು. ದಿಟ್ಟ ಹೋರಾಟ ನೀಡಿದ ಸಿಡ್ನಿ ಟೆಸ್ಟ್ ಹೀರೋ ಹನಮಾ ವಿಹಾರಿ ಮುಂದಿನ ಪಂದ್ಯಕ್ಕೆ ಲಭ್ಯರಿಲ್ಲ.

ಆಸೀಸ್ ವಿರುದ್ಧ ಟೀಂ ಇಂಡಿಯಾ ಅದ್ಭುತ ಹೋರಾಟ; ಸಚಿನ್ ಸೇರಿದಂತೆ ದಿಗ್ಗಜರ ಪ್ರತಿಕ್ರಿಯೆ!.

ಮಂಡಿ ನೋವಿಗೆ ತುತ್ತಾಗಿರುವ ಹನುಮಾ ವಿಹಾರಿ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಇಷ್ಟೇ ಅಲ್ಲ ವಿಹಾರಿ ಚೇತರಿಕೆಗೆ ಹೆಚ್ಚು ವಿಶ್ರಾಂತಿಯ ಅಗತ್ಯವಿರುವ ಕಾರಣ ಇಂಗ್ಲೆಂಡ್ ವಿರುದ್ಧದ ಸರಣಿಗೂ ಅಲಭ್ಯರಾಗುವ ಸಾಧ್ಯತೆ ಇದೆ.

ಸಿಡ್ನಿ ಟೆಸ್ಟ್‌; ಪಂತ್ ಶೈನಿಂಗ್, ಸೋಲಿನಿಂದ ಪಾರು ಮಾಡಿದ ಹನುಮ-ಅಶ್ವಿನ್

ಸಿಡ್ನಿ ಟೆಸ್ಟ್ ಪಂದ್ಯದ ಅಂತಿಮ ದಿನ ಬ್ಯಾಟಿಂಗ್ ವೇಳೆ ಹನುಮಾ ವಿಹಾರಿಗೆ ಮಂಡಿ ನೋವಿಗೆ ಪಂದ್ಯದ ನಡುವೆ ತುರ್ತು ಚಿಕಿತ್ಸೆ ನೀಡಲಾಗಿತ್ತು. ನೋವಿನಿಂದ ಬಳಲುತ್ತಿದ್ದರೂ, ತಂಡಕ್ಕೆ ದಿಟ್ಟ ಹೋರಾಟ ನೀಡಿದ್ದರು. ನೋವು ಹೆಚ್ಚಾಗಿರುವ ಕಾರಣ ವಿಹಾರಿಗೆ ಹೆಚ್ಚಿನ ವಿಶ್ರಾಂತಿಯ ಅಗತ್ಯವಿದೆ ಎಂದು ಬಿಸಿಸಿಐ ಹೇಳಿದೆ.

ಈಗಾಗಲೇ ಗಾಯಗೊಂಡಿರುವ ರವಿಂದ್ರ ಜಡೇಜಾ ಬದಲು ಸೂಕ್ತ ಆಲ್ರೌಂಡರ್ ಕೊರತೆ ತಂಡದಲ್ಲಿದೆ. ಹೀಗಾಗಿ ವೇಗಿ ಶಾರ್ದೂಲ್ ಠಾಕೂರ್‌ಗೆ ಸ್ಥಾನ ನೀಡುವ ಸಾಧ್ಯತೆ ಇದೆ. ಶಾರ್ದೂಲ್ ಬ್ಯಾಟಿಂಗ್‌ನಲ್ಲಿ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ. 

Follow Us:
Download App:
  • android
  • ios