ಸಿಡ್ನಿ(ಜ.11): ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ ನಡುವಿನ ಸಿಡ್ನಿ ಟೆಸ್ಟ್ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯಕಂಡಿದೆ. ಸೋಲಿನ ಸುಳಿಯಲ್ಲಿದ್ದ ಟೀಂ ಇಂಡಿಯಾ ವನ್ನು ಭಾರತೀಯ ಬ್ಯಾಟ್ಸ್‌ಮನ್‌ಗಳು ನೆರವಾದರು. ಹೀಗಾಗಿ ಪಂದ್ಯ ಡ್ರಾಗೊಂಡಿದೆ. ಭಾರತ ತಂಡದ ಕೆಚ್ಚೆದೆಯ ಹೋರಾಟಕ್ಕೆ ದಿಗ್ಗಜ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಿಡ್ನಿ ಟೆಸ್ಟ್‌; ಪಂತ್ ಶೈನಿಂಗ್, ಸೋಲಿನಿಂದ ಪಾರು ಮಾಡಿದ ಹನುಮ-ಅಶ್ವಿನ್

ರಿಷಬ್ ಪಂತ್ ಸಿಡಿಸಿದ 97 ರನ್, ಹನುಮಾ ವಿಹಾರಿ ಹಾಗೂ ರವಿಚಂದ್ರನ್ ಅಶ್ವಿನ್ ಜೊತೆಯಾಟ ಟೀಂ ಇಂಡಿಯಾವನ್ನು ಅಪಾಯದಿಂದ ಪಾರು ಮಾಡಿತು. ವಿಹಾರಿ 161 ಎಸೆತ ಎದುರಿಸಿ ಅಜೇಯ 23 ರನ್ ಸಿಡಿಸಿದರೆ, ಅಶ್ವಿನ್ 128 ಎಸೆತದ ಎದುರಿಸಿ ಅಜೇಯ 28 ರನ್ ಸಿಡಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡರು. 

ಅಂತಿಮ ದಿನದ ಆರಂಭಿಕ ಹಂತದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ್ದ ಆಸ್ಟ್ರೇಲಿಯಾಗೆ ಇನ್ನೇನು 5 ವಿಕೆಟ್ ಕಬಳಿಸಿ ಗೆಲುವು ತನ್ನದಾಗಿಸಿಕೊಳ್ಳುವ ಲೆಕ್ಕಾಚಾರದಲ್ಲಿತ್ತು. ಆದರೆ ಭಾರತದ ಹೋರಾಟಕ್ಕೆ ಆಸೀಸ್ ತಲೆಬಾಗಿತು. ಟೀಂ ಇಂಡಿಯಾ ಈ ದಿಟ್ಟ ಹೋರಾಟವನ್ನು ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್, ಶೇನ್ ವಾರ್ನ್ ಸೇರಿದಂತೆ ಹಲವರು ಶ್ಲಾಘಿಸಿದ್ದಾರೆ