* ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ಟೆಸ್ಟ್‌ನಲ್ಲಿ ಆಂಗ್ಲರ ಮೇಲುಗೈ* ಮಿಥಾಲಿ ರಾಜ್ ಪಡೆ ಕೇವಲ 231 ರನ್‌ಗಳಿಗೆ ಆಲೌಟ್* ಇನ್ನೂ 165 ರನ್‌ಗಳ ಹಿನ್ನಡೆಯಲ್ಲಿರುವ ಭಾರತ ಮಹಿಳಾ ಕ್ರಿಕೆಟ್ ತಂಡ

ಬ್ರಿಸ್ಟಾಲ್‌(ಜೂ.18): ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ ಏಕೈಕ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ ಕೇವಲ 231 ರನ್‌ಗಳಿಗೆ ಆಲೌಟ್ ಆಗಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ತಂಡವು ಭಾರತದ ಮೇಲೆ ಫಾಲೋ ಆನ್ ಹೇರಿದೆ. ಸದ್ಯ ಮಿಥಾಲಿ ರಾಜ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಇನ್ನೂ 165 ರನ್‌ಗಳ ಹಿನ್ನಡೆ ಅನುಭವಿಸಿದೆ. 

ಹೌದು, ಎರಡನೇ ದಿನದಾಟದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 187 ರನ್ ಬಾರಿಸಿದ್ದ ಭಾರತ ತಂಡವು ಮೂರನೇ ದಿನದಾಟದ ಆರಂಭದಲ್ಲೇ ಹರ್ಮನ್‌ಪ್ರೀತ್ ಕೌರ್ ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ ತನ್ನ ಖಾತೆಗೆ 44 ರನ್‌ ಸೇರಿಸುವಷ್ಟರಲ್ಲಿ ಎಲ್ಲಾ 5 ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು. ಭಾರತ ಪರ ಆಲ್ರೌಂಡರ್ ದೀಪ್ತಿ ಶರ್ಮಾ 29 ರನ್‌ ಬಾರಿಸಿ ಅಜೇಯರಾಗುಳಿದರು.

Scroll to load tweet…
Scroll to load tweet…

ಮಹಿಳಾ ಟೆಸ್ಟ್ ಕ್ರಿಕೆಟ್‌; ಶೆಫಾಲಿ-ಮಂಧನಾ ಅಬ್ಬರದ ಹೊರತಾಗಿಯೂ ದಿಢೀರ್ ಕುಸಿದ ಭಾರತ

ಇಂಗ್ಲೆಂಡ್ ತಂಡದ ಪರ ಎಕ್ಲೆಸ್ಟೋನ್‌ 88 ರನ್‌ ನೀಡಿ 4 ವಿಕೆಟ್ ಪಡೆದರೆ, ನಾಯಕಿ ಹೀಥರ್ ನೈಟ್ 2 ಹಾಗೂ ಬ್ರೆಂಟ್, ಶೊರಬ್‌ಸೋಲೆ, ಸ್ಕೀವರ್, ಕೇಟ್ ಕ್ರಾಸ್ ತಲಾ ಒಂದೊಂದು ವಿಕೆಟ್ ಪಡೆದರು.