Asianet Suvarna News Asianet Suvarna News

INDvSL; ಸೂರ್ಯಕುಮಾರ್, ಧವನ್ ಹೋರಾಟ, ಶ್ರೀಲಂಕಾಗೆ 165 ರನ್ ಟಾರ್ಗೆಟ್!

  • ಆರಂಭದಲ್ಲಿ ಆಘಾತ ಅನುಭವಿಸಿದ ತಂಡಕ್ಕೆ ಧವನ್-ಯಾದವ್ ನೆರವು
  • ದಿಟ್ಟ ಹೋರಾಟದಿಂದ ಶ್ರೀಲಂಕಾಗೆ 165 ರನ್ ಟಾರ್ಗೆಟ್
  • ಭಾರತ-ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯ
INDvsSL 1st t20 Suryakumar Yadav helps Team India to set run 165 target to Srilanka ckm
Author
Bengaluru, First Published Jul 25, 2021, 9:42 PM IST
  • Facebook
  • Twitter
  • Whatsapp

ಕೊಲೊಂಬೊ(ಜು.25): ನಾಯಕ ಶಿಖರ್ ಧವನ್, ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ, ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಉತ್ತಮ ಮೊತ್ತ ಪೇರಿಸಿದೆ. ಆರಂಭಿಕ ಆಘಾತದ ಹೊರತಾಗಿಯೂ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 164 ರನ್ ಸಿಡಿಸಿತು. ಈ ಮೂಲಕ ಲಂಕಾಗೆ 165 ರನ್ ಟಾರ್ಗೆಟ್ ನೀಡಿತು.

ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಮೊದಲ ಓವರ್‌ನ ಮೊದಲ ಎಸೆತದಲ್ಲಿ ಪೃಥ್ವಿ ಶಾ ವಿಕೆಟ್ ಕಳೆದುಕೊಂಡಿತು. ನಾಯಕ ಶಿಖರ್ ಧವನ್ ಹಾಗೂ ಸಂಜು ಸ್ಯಾಮನ್ಸ್ ಹೋರಾಟ ರನ್ ವೇಗ ಹೆಚ್ಚಿಸಿತು. ಆದರೆ ಸಂಜು 27 ರನ್ ಸಿಡಿಸಿ ಔಟಾದರು. 

ಸೂರ್ಯಕುಮಾರ್ ಯಾದವ್ ಹಾಗೂ ಧವನ್ ಹೋರಾಟ ಟೀಂ ಇಂಡಿಯಾಗೆ ನೆರವಾಯಿತು. ಧವನ್ 46 ರನ್ ಕಾಣಿಕೆ ನೀಡಿದರೆ, ಸೂರ್ಯಕುಮಾರ್ ಯಾದವ್ ಹಾಫ್ ಸೆಂಚುರಿ ಸಿಡಿಸಿದರು. ಇವರಿಬ್ಬರ ವಿಕೆಟ್ ಪತನದ ಬಳಿಕ ಹಾರ್ದಿಕ್ ಪಾಂಡ್ಯ ಅಬ್ಬರಿಸಲಿಲ್ಲ. 10 ರನ್ ಸಿಡಿಸಿ ಔಟಾದರು.

ಇಶಾನ್ ಕಿಶನ್  ಅಜೇಯ 20 ರನ್ ಸಿಡಿಸಿದರೆ, ಕ್ರುನಾಲ್ ಪಾಂಡ್ಯ ಅಜೇಯ 3 ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು 164 ರನ್ ಸಿಡಿಸಿತು. 
 

Follow Us:
Download App:
  • android
  • ios