ಪಂದ್ಯ ಟೈ, ಸೂಪರ್ ಓವರ್ ಟೈ, 2ನೇ ಸೂಪರ್ ಓವರ್‌ನಲ್ಲಿ ಗೆದ್ದು ಸಂಭ್ರಮಿಸಿದ ಭಾರತ

ಭಾರತ ನೀಡಿದ 212 ರನ್ ಟಾರ್ಗೆಟ್ ಚೇಸ್ ಮಾಡಿದ ಆಫ್ಘಾನಿಸ್ತಾನ ಪಂದ್ಯ ಟೈ ಮಾಡಿತು. ಸೂಪರ್ ಓವರ್‌ನಲ್ಲಿ ಆಫ್ಘಾನಿಸ್ತಾನ ನೀಡಿದ 17 ರನ್ ಟಾರ್ಗೆಟನ್ನು ಭಾರತ ಟೈ ಮಾಡಿಕೊಂಡಿತು. ಹೀಗಾಗಿ 2ನೇ ಸೂಪರ್ ಆಡಿಸಲಾಯಿತು. ಈ ಸೂಪರ್ ಓವರ್‌ನಲ್ಲಿ ಭಾರತ ಗೆಲುವು ದಾಖಲಿಸಿ ಸಂಭ್ರಮಿಸಿದೆ.

INDvsAFG 2nd Super over decider India vs Afghanistan tie breaker match Rohit team thrash AFghan ckm

ಬೆಂಗಳೂರು(ಜ.17) ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಬೆಂಗಳೂರು ಟಿ20 ಪಂದ್ಯ ಟೈ ಮೇಲೇ ಟೈ ಆಗುವ ಮೂಲಕ ಹೊಸ ಇತಿಹಾಸ ರಚಿಸಿದೆ. ಭಾರತ 212 ರನ್ ಬೃಹತ್ ಮೊತ್ತ ಚೇಸ್ ಮಾಡಿದ ಆಫ್ಘಾನಿಸ್ತಾನ ಪಂದ್ಯವನ್ನು ರೋಚಕ ಟೈ ಮಾಡಿಕೊಂಡಿತು. ಆಫ್ಘಾನಿಸ್ತಾನದ ಬ್ಯಾಟಿಂಗ್ ನಿಜಕ್ಕೂ ಮೆಚ್ಚಲೇ ಬೇಕು. ಪಂದ್ಯ ಟೈ ಆದ ಕಾರಣ ಸೂಪರ್ ಓವರ್ ಆಡಿಸಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಕೇವಲ 11 ರನ್ ಸಿಡಿಸಿತು. ಈ ಗುರಿ ಬೆನ್ನಟ್ಟಲು ಆಫ್ಘಾನಿಸ್ತಾನಕ್ಕೆ ಸಾಧ್ಯವಾಗಲಿಲ್ಲ. ಮೂರು ಎಸೆತದಲ್ಲಿ ಆಫ್ಘಾನ್ 2 ವಿಕೆಟ್ ಕಳೆದುಕೊಂಡು ಸೋಲು ಕಂಡಿತು. 

ಪಂದ್ಯ ಟೈ, ಸೂಪರ್ ಓವರ್ ಟೈ, ಎರಡನೇ ಸೂಪರ್ ಓವರ್‌ನಲ್ಲಿ ಗೆಲುವಿನ ಸಿಹಿ ಕಂಡಿತು. ಎರಡೆರಡು ಸೂಪರ್ ಓವರ್ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಅಭಿಮಾನಿಗಳಿಗೆ ಡಬಲ್ ಖುಷಿ ನೀಡಿತು. 2ನೇ ಸೂಪರ್ ಓವರ್‌ನಲ್ಲಿ ರೋಹಿತ್ ಶರ್ಮಾ ಬೌಂಡರಿ ಹಾಗೂ ಸಿಕ್ಸರ್ ಮೂಲಕ ಅಬ್ಬರಿಸಿದರು. ಆದರೆ ರಿಂಕು ವಿಕೆಟ್ ಹಾಗೂ ರೋಹಿತ್ ಶರ್ಮಾ ರನೌಟ್‌ನಿಂದ ಭಾರತದ ಆಟ ಅಂತ್ಯಗೊಂಡಿತು. ಕೇವಲ 11 ರನ್ ಸಿಡಿಸಿದ ಭಾರತ ತಂಡ ಆಫ್ಘಾನಿಸ್ತಾನಕ್ಕೆ ಸುಲಭ 12 ರನ್ ಟಾರ್ಗೆಟ್ ನೀಡಿತು.

ಬೃಹತ್ ಮೊತ್ತ ಸಿಡಿಸಿದರೂ ಪಂದ್ಯ ರೋಚಕ ಟೈ, ಸೂಪರ್ ಓವರ್‌ನಲ್ಲಿ ಮತ್ತೆ ಟೈ!

ಸುಲಭ ಗುರಿ ಚೇಸ್ ಮಾಡಲು ಬಂದ ಅಫ್ಘಾನಿಸ್ತಾನ ಆರಂಭಿ 3 ಎಸೆತದಲ್ಲಿ 2 ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು. ಆಫ್ಘಾನಿಸ್ತಾನ ಕೇವಲ 1 ರನ್ ಸಿಡಿಸಿ ಸೋಲೋಪ್ಪಿಕೊಂಡಿತು. ಆದರೆ ಎರಡೆರಡು ಸೂಪರ್ ಓವರ್ ಪಂದ್ಯದ ರೋಚಕತೆ ಮತ್ತಷ್ಟು ಹೆಚ್ಚಿಸಿತ್ತು. ಭಾರತ 3-0 ಅಂತರದಲ್ಲಿ ಸರಣಿ ಕೈವಶ ಮಾಡಿತು. ಅಂತಿಮ ಪಂದ್ಯದಲ್ಲಿ ಆಫ್ಘಾನಿಸ್ತಾನದ ದಿಟ್ಟ ಹೋರಾಟಕ್ಕೆ ಬಾರಿ ಮೆಚ್ಚುಗೆ ವ್ಯಕ್ತವಾಯಿತು. 
 

Latest Videos
Follow Us:
Download App:
  • android
  • ios