ಭಾರತ ತಂಡ ಬರೋಬ್ಬರಿ 7 ವರ್ಷಗಳ ಬಳಿಕ ಟೆಸ್ಟ್ ಪಂದ್ಯವನ್ನಾಡಲಿದ್ದು, ವರ್ಷಾಂತ್ಯದಲ್ಲಿ ಇಂಗ್ಲೆಂಡ್ ವಿರುದ್ದ ಬಿಳಿ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮುಂಬೈ(ಮಾ.09): ಈ ವರ್ಷ ಜೂನ್ ಇಲ್ಲವೇ ಜುಲೈನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡಲಿದೆ. ಸೋಮವಾರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟರಲ್ಲಿ ಈ ವಿಷಯ ಬಹಿರಂಗಪಡಿಸಿದರು.
7 ವರ್ಷಗಳ ಬಳಿಕ ಭಾರತ ತಂಡ ಟೆಸ್ಟ್ ಆಡಲಿದೆ. ವರ್ಷಾಂತ್ಯದಲ್ಲಿ ಭಾರತ ಮಹಿಳಾ ತಂಡವು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಏಕೈಕ ಟೆಸ್ಟ್ ಪಂದ್ಯವನ್ನಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಭಾರತ ಮಹಿಳಾ ಕ್ರಿಕೆಟ್ ತಂಡವು ಇದುವರೆಗೂ 36 ಟೆಸ್ಟ್ ಪಂದ್ಯಗಳನ್ನಾಡಿದ್ದು, ಈ ಪೈಕಿ 5 ಗೆಲುವು, 6 ಸೋಲು ಕಂಡಿದ್ದು, 25 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ. ಇನ್ನೂ ಕುತೂಹಲಕಾರಿ ಸಂಗತಿಯೆಂದರೆ ಭಾರತ ಕೊನೆಯದಾಗಿ ಆಡಿದ ಮೂರು ಪಂದ್ಯಗಳಲ್ಲೂ ಗೆಲುವಿನ ನಗೆ ಬೀರಿದೆ.
ಮಹಿಳಾ ವಿಶ್ವಕಪ್‌ಗೆ ಹೆಚ್ಚಿನ ತಂಡಗಳು
ದುಬೈ: 2026ರಿಂದ ಮಹಿಳಾ ಕ್ರಿಕೆಟ್ ವಿಶ್ವಕಪ್‌ಗಳಲ್ಲಿ ಹೆಚ್ಚಿನ ತಂಡಗಳು ಸ್ಪರ್ಧಿಸಲಿವೆ ಎಂದು ಸೋಮವಾರ ಐಸಿಸಿ ಘೋಷಿಸಿತು. 2026ರ ಟಿ20 ವಿಶ್ವಕಪ್‌ನಲ್ಲಿ 10 ತಂಡಗಳ ಬದಲಿಗೆ 12 ತಂಡಗಳು ಸ್ಪರ್ಧಿಸಲಿವೆ.
ಮಹಿಳಾ ಕ್ರಿಕೆಟ್: ಇಂಡೋ-ಆಫ್ರಿಕಾ 2ನೇ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಆರಂಭ
2029ರ ಏಕದಿನ ವಿಶ್ವಕಪ್‌ನಿಂದ 8ರ ಬದಲು 10 ತಂಡಗಳು ಇರಲಿವೆ. 2027ರಿಂದ ಮಹಿಳಾ ಟಿ20 ಚಾಂಪಿಯನ್ಸ್ ಕಪ್ ಎನ್ನುವ ಹೊಸ ಟೂರ್ನಿ ಪರಿಚಯಿಸಲಿದ್ದು, 6 ತಂಡಗಳು ಸ್ಪರ್ಧಿಸಲಿವೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
