ಟಿ20 ತಂಡಕ್ಕೆ ಬೇಕಿದೆ ಕೊಹ್ಲಿ ಎನರ್ಜಿ; ರನ್ ಮಷೀನ್ ಇಲ್ಲದೇ ಹೋದ್ರೆ ಸಂಕಷ್ಟ ತಪ್ಪಿದ್ದಲ್ಲ..!
ಏಕದಿನ ವಿಶ್ವಕಪ್ ಈಗ ಮುಗಿದ ಅಧ್ಯಾಯ. ಈಗ ಟೀಂ ಇಂಡಿಯಾದ ನೆಕ್ಸ್ಟ್ ಟಾರ್ಗೆಟ್ T20 ವರ್ಲ್ಡ್‌ಕಪ್. ಹೊಡಿಬಡಿ ಆಟದ ವಿಶ್ವಕಪ್ ಟೂರ್ನಿಗೆ ಇನ್ನು ಆರೇ ಆರು ತಿಂಗಳು ಮಾತ್ರ ಬಾಕಿಯಿದೆ. ಆದ್ರೆ, ಈ ಮೆಗಾ ಟೂರ್ನಿಯಲ್ಲಿ ತಂಡದ ಸೀನಿಯರ್ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ, ಕೆ.ಎಲ್ ರಾಹುಲ್ ಆಡ್ತಾರೋ ಇಲ್ವೋ ಅನ್ನೋ ಅನುಮಾನ ಶುರುವಾಗಿದೆ.
ಬೆಂಗಳೂರು(ನ.25): ಮುಂದಿನ ವರ್ಷ ನಡೆಯೋ T20 ವಿಶ್ವಕಪ್ ತಂಡಕ್ಕೆ ಟೀಂ ಇಂಡಿಯಾ ಸಿದ್ಧತೆ ಆರಂಭಿಸಿದೆ. ಆದ್ರೆ, T20 ಕ್ರಿಕೆಟ್‌ನಿಂದ ಕೆಲ ಸೀನಿಯರ್ಸ್ ದೂರ ಉಳಿಯಲಿದ್ದಾರೆ ಅನ್ನೊ ಮಾತುಗಳು ಕೇಳಿಬರ್ತಿವೆ. ಇದೇ ನಿಜವಾದ್ರೆ, ತಂಡಕ್ಕೆ ಹಿನ್ನಡೆಯಾಗಲಿದೆ. ಅದರಲ್ಲೂ ವಿರಾಟ್ ಕೊಹ್ಲಿ ಚುಟುಕು ಕ್ರಿಕೆಟ್ ಆಡದೇ ಹೋದ್ರೆ, ಇನ್ನೂ ದೊಡ್ಡ ನಷ್ಟವಾಗಲಿದೆ. ಹೇಗೆ ಅಂತ ಹೇಳ್ತೀವಿ, ಈ ಸ್ಟೋರಿ ನೋಡಿ.
ಏಕದಿನ ವಿಶ್ವಕಪ್ ಈಗ ಮುಗಿದ ಅಧ್ಯಾಯ. ಈಗ ಟೀಂ ಇಂಡಿಯಾದ ನೆಕ್ಸ್ಟ್ ಟಾರ್ಗೆಟ್ T20 ವರ್ಲ್ಡ್‌ಕಪ್. ಹೊಡಿಬಡಿ ಆಟದ ವಿಶ್ವಕಪ್ ಟೂರ್ನಿಗೆ ಇನ್ನು ಆರೇ ಆರು ತಿಂಗಳು ಮಾತ್ರ ಬಾಕಿಯಿದೆ. ಆದ್ರೆ, ಈ ಮೆಗಾ ಟೂರ್ನಿಯಲ್ಲಿ ತಂಡದ ಸೀನಿಯರ್ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ, ಕೆ.ಎಲ್ ರಾಹುಲ್ ಆಡ್ತಾರೋ ಇಲ್ವೋ ಅನ್ನೋ ಅನುಮಾನ ಶುರುವಾಗಿದೆ.
BCCI ಈ ಮೂವರ T20 ಭವಿಷ್ಯವನ್ನ ಇವರಿಗೆ ಬಿಟ್ಬಿಟ್ಟಿದೆ. ಆದ್ರೆ, ಒಂದು ವೇಳೆ ಈ ಗ್ರೇಟ್ ಬ್ಯಾಟರ್ಸ್ ಟಿ20 ವಿಶ್ವಕಪ್ ಅಡದೇ ಹೋದ್ರೆ, ತಂಡಕ್ಕೆ ದೊಡ್ಡ ಲಾಸ್ ಆಗಲಿದೆ. ಅದರಲ್ಲೂ ವಿರಾಟ್ ಇಲ್ಲ ಅಂದ್ರೆ, ತಂಡಕ್ಕೆ ಸಂಕಷ್ಟ ತಪ್ಪಿದ್ದಲ್ಲ. ಯಾಕಂದ್ರೆ, 20 ಓವರ್ ಫಾರ್ಮೆಟ್ನಲ್ಲಿ ರನ್ ಮಷಿನ್ ಹಲವು ಬಾರಿ ತಂಡಕ್ಕೆ ಆಪತ್ಭಾಂಧವರಾಗಿದ್ದಾರೆ. ಅಲ್ಲದೇ, ಕಳೆದ ಕೆಲ ಟೂರ್ನಿಗಳಲ್ಲಿ ತಂಡದ ಟಾಪ್ ಸೋರರ್ ಆಗಿದ್ದಾರೆ. ಅದಕ್ಕೆ ಈ ಅಂಕಿಅಂಶಗಳೇ ಸಾಕ್ಷಿ..!
ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಪರ ಹೈಯೆಸ್ಟ್ ರನ್..!
ಯೆಸ್, ಕಳೆದೊಂದು ವರ್ಷದಿಂದ ವಿರಾಟ್ ಯಾವುದೇ ಅಂತಾರಾಷ್ಟ್ರೀಯ T20 ಪಂದ್ಯವಾಡಿಲ್ಲ. ಅದ್ರೆ, ಆಡಿದ ಎರಡು ಮಹತ್ವದ ಟೂರ್ನಿಗಳಲ್ಲಿ ಮಿಂಚಿದ್ದಾರೆ. ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್‌ಗಳನ್ನಾಡಿ ತಂಡಕ್ಕೆ ಗೆಲುವು ತಂದುಕೊಟ್ಟದ್ದಾರೆ. ಕಳೆದ ವರ್ಷ ದುಬೈನಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಕೊಹ್ಲಿ, 5 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿದ್ರು. 92ರ ಸರಾಸರಿ ಮತ್ತು 147.59ರ ಸ್ಟ್ರೈಕ್ರೇಟ್ನಲ್ಲಿ 276 ರನ್ ದಾಖಲಿಸಿದ್ರು.
ಟೀಂ ಇಂಡಿಯಾಗೆ ಸಿಕ್ಕ ನಯಾ ಫಿನಿಶರ್; ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟ ರಿಂಕು ಸಿಂಗ್..!
T20 ವಿಶ್ವಕಪ್ನಲ್ಲೂ ಕೊಹ್ಲಿ ಅಬ್ಬರಿಸಿದ್ರು. ಆಸ್ಟ್ರೇಲಿಯಾದಲ್ಲಿ ನಡೆದ ಟೂರ್ನಿಯಲ್ಲಿ ಚೇಸಿಂಗ್ ಮಾಸ್ಟರ್, ತಮ್ಮ ಸಾಮರ್ಥ್ಯವನ್ನ ಪ್ರೂವ್ ಮಾಡಿದ್ರು. ಅದರಲ್ಲೂ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಕ್ಷರಶ: ಅಬ್ಬರಿಸಿದ್ರು. ಅಸಾಮಾನ್ಯ ಬ್ಯಾಟಿಂಗ್ ಮೂಲಕ ತಂಡವನ್ನ ಸೋಲಿನ ಸುಳಿಯಿಂದ ಪಾರು ಮಾಡಿದ್ರು. ಒಟ್ಟು 6 ಪಂದ್ಯಗಳಿಂದ 98.67ರ ಸರಾಸರಿಯಲ್ಲಿ 296 ರನ್ ಕಲೆಹಾಕಿದ್ರು.
IPL ಟೂರ್ನಿಯಲ್ಲೂ RCB ಪರ ಟಾಪ್ ಸ್ಕೋರರ್
ಕೇವಲ ಟೀಮ್ ಇಂಡಿಯಾ ಪರ ಅಷ್ಟೇ ಅಲ್ಲ, IPLನಲ್ಲೂ ಮಿಂಚಿದ್ದಾರೆ. RCB ತಂಡದ ಸ್ಟಾರ್ ಬ್ಯಾಟರ್ ಅಗಿರೋ ವಿರಾಟ್, 14 ಪಂದ್ಯಗಳಿಂದ 53.25ರ ಸರಾಸರಿ ಮತ್ತು ಆಲ್ಮೋಸ್ಟ್ 140ರ ಸ್ಟ್ರೈಕ್ರೇಟ್ನಲ್ಲಿ 639 ರನ್ ಕಲೆಹಾಕಿದ್ದಾರೆ. ಇದ್ರಲ್ಲಿ 2 ಶತಕ ಮತ್ತು 6 ಅರ್ಧಶತಕ ಸೇರಿವೆ.
ಅಂಡರ್ 19 ಏಷ್ಯಾಕಪ್‌ಗೆ ಭಾರತ ತಂಡ ಪ್ರಕಟ, ರಾಜ್ಯದ ಧನುಷ್ ಗೌಡಗೆ ಸ್ಥಾನ
ವಿರಾಟ್ ಮಾತ್ರವಲ್ಲ, ಸದ್ಯದ ಫಾರ್ಮ್ ನೋಡಿದ್ರೆ ರೋಹಿತ್ ಮತ್ತು ಕೆ.ಎಲ್ ರಾಹುಲ್ ಅಗತ್ಯ ಕೂಡ ತಂಡಕ್ಕಿದೆ. ಆದ್ರೆ, ಈ ಇಬ್ಬರಿಗೆ ಹೋಲಿಸಿದ್ರೆ ಕೊಹ್ಲಿ ಅಗತ್ಯ ತಂಡಕ್ಕೆ ತುಂಬಾನೇ ಮುಖ್ಯ. ಬರೀ ಅಂಕಿ-ಅಂಶ, ಆಟದ ಲೆಕ್ಕಾಚಾರ ಅಷ್ಟೇ ಅಲ್ಲ. ಬ್ರ್ಯಾಂಡ್ ದೃಷ್ಟಿಯಿಂದಲೂ ವಿರಾಟ್ ತಂಡದಲ್ಲಿರಲೇಬೇಕು. ಕೊಹ್ಲಿ ಟೀಮ್ ಇಂಡಿಯಾದ ಬಿಗ್ಗೆಸ್ಟ್ ಬ್ರ್ಯಾಂಡ್ ಆಗಿದ್ದು. ಕೊಹ್ಲಿ ಇದ್ರೆ ಮಾತ್ರ ಬಿಸಿಸಿಐಗೆ ಸ್ಪಾನ್ಸರ್ಸ್ ಸೇರಿದಂತೆ ವಿವಿಧ ರೂಪದಲ್ಲಿ ದುಡ್ಡು ಹರಿದು ಬರಲಿದೆ. ಈ ಎಲ್ಲಾ ದೃಷ್ಟಿಯಿಂದ ಕೊಹ್ಲಿ ಇನ್ನು ಒಂದೆರೆಡು ವರ್ಷ ಟಿ20 ಕ್ರಿಕೆಟ್ ಅಡಲೇಬೇಕು.
ಸ್ಪೋರ್ಟ್ಸ್ ಬ್ಯುರೊ, ಏಷ್ಯಾನೆಟ್ ಸುವರ್ಣ ನ್ಯೂಸ್