Asianet Suvarna News Asianet Suvarna News

ವಿಶ್ವಕಪ್ ಗೆದ್ದುಕೊಟ್ಟ ವಿರಾಟ್ ಕೊಹ್ಲಿ ಮೊಬೈಲ್‌ನಲ್ಲಿ ನೀಮ್ ಕರೋಲಿ ಬಾಬಾ ವಾಲ್‌ಪೇಪರ್‌; ಯಾರೀ ಬಾಬಾ?

ಭಾರತದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರ ಮೊಬೈಲ್ ವಾಲ್‌ಪೇಪರ್‌ನಲ್ಲಿ ಇಟ್ಟುಕೊಂಡಿರುವ ಕರೋಲಿ ಬಾಬಾ ಯಾರು ಗೊತ್ತಾ? ಪೂರ್ಣ ಮಾಹಿತಿ ಇಲ್ಲಿದೆ ನೋಡಿ...

Indian star cricketer Virat Kohli mobile phone wallpaper having neem karoli baba photo sat
Author
First Published Jul 6, 2024, 7:38 PM IST | Last Updated Jul 6, 2024, 9:19 PM IST

ಬೆಂಗಳೂರು (ಜು.06): ಭಾರತಕ್ಕೆ ಟಿ-20 ವಿಶ್ವಕಪ್ ತಂದುಕೊಟ್ಟ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿರುವ ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ತಮ್ಮ ಫೋನಿಗೆ ಕರೋಲಿ ಬಾಬಾ ಅವರ ವಾಲ್‌ಪೇಪರ್ ಇಟ್ಟುಕೊಂಡಿದ್ದಾರೆ. ಆದರೆ, ಈ ಕರೋಲಿ ಬಾಬಾ ಯಾರು, ಅವರ ವಿಶೇಷತೆ ಏನು? ವಿರಾಟ್ ಕೊಹ್ಲಿಗೆ ಹೆಂಡತಿ, ಮಕ್ಕಳ ಮೇಲಿನ ಪ್ರೀತಿಗಿಂತ ಕರೋಲಿ ಬಾಬಾ ಮೇಲಿನ ಭಕ್ತಿ ಹೆಚ್ಚಾಗಿರಲು ಕಾರಣವೇನು ಎನ್ನುವ ಮಾಹಿತಿ ಇಲ್ಲಿದೆ ನೋಡಿ...

ವಿಶ್ವಕಪ್ ಗೆಲುವಿನ ಬಳಿಕ ಭಾರತ ತಂಡಕ್ಕೆ ಪ್ರಧಾನಿ ಮೋದಿ ಅವರು ದೆಹಲಿಯಲ್ಲಿ ಶುಭ ಕೋರಿದ್ದಾರೆ, ಕೆಲಹೊತ್ತು ವಿಶ್ವಕಪ್ ಗೆದ್ದ ತಂಡದೊಂದಿಗೆ ಮಾತನಾಡಿ ಭರ್ಜರಿ ಔತಣವನ್ನೂ ಕೊಟ್ಟಿದ್ದಾರೆ. ಇದಾದ ನಂತರ ಮುಂಬೈಗೆ ಬಂದ ಭಾರತ ತಂಡದ ಆಟಗಾರರಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಹಾಗೂ ಮುಂಬೈ ನಗರದ ವಾಂಖೆಡೆ ಕ್ರೀಡಾಂಗಣದಲ್ಲಿ ಭರ್ಜರಿ ಸ್ವಾಗತ ಕೋರಲಾಯಿತು. ಈ ವೇಳೆ ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲ ಆಟಗಾರರು ಭರ್ಜರಿಯಾಗಿ ಕುಣಿದು ಕುಪ್ಪಳಿಸಿ ಸಂತಸವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಕೊಹ್ಲಿ, ರೋಹಿತ್, ಜಡ್ಡು ಟಿ20 ಗುಡ್‌ಬೈ: ತ್ರಿಮೂರ್ತಿಗಳ ಸ್ಥಾನ ತುಂಬಲು ಹಲವರ ನಡುವೆ ಪೈಪೋಟಿ..!

ವಿಶ್ವಕಪ್ ಗೆಲುವಿನ ಬಳಿಕ ಅಂತಾರಾಷ್ಟ್ರೀಯ ಟಿ-20 ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಜೊತೆ ಸಮಯ ಕಳೆಯಲು ಲಂಡನ್‌ಗೆ ತೆರಳುತ್ತಿದ್ದಾರೆ. ಇನ್ನು ವಿರುಷ್ಕಾ ದಂಪತಿ ಕುಟುಂಬ ಸಮೇತ ಲಂಡನ್‌ಗೆ ಹೋಗಲು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಕುಟುಂಬ ಸಮೇತರಾಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಆಗ ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಆಸಕ್ತಿ ಹೊಂದಿರುವ ಅಭಿಮಾನಿಗಳು ವಿರಾಟ್ ಕೊಹ್ಲಿ ಅವರ ಮೊಬೈಲ್ ವಾಲ್‌ ಪೇಪರ್ ಅನ್ನೂ ಗಮನಿಸಿದ್ದಾರೆ. ಆಗ ಅದರಲ್ಲಿ ಕರೋಲಿ ಬಾಬಾ ಅವರ ಫೋಟೋ ಇರುವುದು ಕಂಡುಬಂದಿದೆ.

ಹೆಂಡತಿ ಮಕ್ಕಳಿಗಿಂತ ಕರೋಲಿ ಬಾಬಾ ಮೇಲಿನ ಭಕ್ತಿ ಹೆಚ್ಚಾಯ್ತಾ?
ವಿರಾಟ್ ಕೊಹ್ಲಿ ಅವರ ಫೋನಿನಿ ವಾಲ್‌ಪೇಪರ್‌ನಲ್ಲಿ ಕಂಡುಬಂದ ಕರೋಲಿ ಬಾಬಾ ಅವರು 1973ರಲ್ಲಿ ನಿಧನರಾಗುದ್ದಾರೆ. ಆಧ್ಯಾತ್ಮಿಕ ನಾಯಕರಾಗಿದ್ದ ನೀಮ್ ಕರೋಲಿ ಬಾಬಾ (Neem Karoli Baba) ಅವರ ಫೋಟೋವನ್ನು ವಿರಾಟ್ ತಮ್ಮ ವಾಲ್‌ ಪೇಪರ್ ಆಗಿ ಇಟ್ಟಿಕೊಂಡಿದ್ದರ ಬಗ್ಗೆ ಅಭಿಮಾನಿಗಳ ಕುತೂಹಲ ಆರಂಭವಾಗಿದೆ. ಈ ಸಂಬಂಧಪಟ್ಟಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ವಿರಾಟ್ ಕೊಹ್ಲಿ ನೆಟ್ಟಿಗರು ಇದನ್ನು ಹಂಚಿಕೊಂಡಿದ್ದಾರೆ. ಜೊತೆಗೆ, ತಮ್ಮದೇ ಅಭಿಪ್ರಾಯ ಹಂದಿಕೊಂಡಿದ್ದಾರೆ. ಜೊತೆಗೆ, ಹೆಂಡತಿ ಮಕ್ಕಳಿಗಿಂತಲೂ ಕರೋಲಿ ಬಾಬಾ ಅಷ್ಟೊಂದು ಪ್ರಭಾವ ಬೀರಿದ್ದಾರಾ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ.

ಈ ಕುರಿತು ನೆಟ್ಟಿಗನೊಬ್ಬ ಕರೋಲಿ ಬಾಬಾ ವಿರಾಟ್ ಕೊಹ್ಲಿ ಬಾಳಲ್ಲಿ ಪ್ರಭಾವ ಬೀರಿದ್ದರಿಂದ ಅವರ ಚಿತ್ರವನ್ನು  ತಮ್ಮ ಮೊಬೈಲ್‌ನ ವಾಲ್‌ಪೇಪರ್​​​​ನಲ್ಲಿ ಹಾಕಿದ್ದಾರೆ ಎಂದು ಹೇಳಿದ್ದಾನೆ. ಮತ್ತೊಬ್ಬ ನೆಟ್ಟಿಗ ವಿರಾಟ್ ಕೊಹ್ಲಿ ತಮ್ಮ ಫೋನ್‌ನಲ್ಲಿ ನೀಮ್ ಕರೋಲಿ ಬಾಬಾ ಅವರ ವಾಲ್‌ಪೇಪರ್ ಹೊಂದಿದ್ದಾರೆ' ಇಟ್ಟಿರುವುದು ಖಚಿತವಾಗಿದ್ದು, ಅವರ ಭಕ್ತಿ ತೋರಿಸುತ್ತದೆ ಎಂದು ಎಂದು ಹೇಳಿದ್ದಾರೆ. ಇನ್ನೋರ್ವ ವ್ಯಕ್ತಿ ಕೂಡ 'ವಿರಾಟ್ ತಮ್ಮ ಫೋನ್‌ನಲ್ಲಿ ನೀಮ್ ಕರೋಲಿ ಬಾಬಾ ಅವರ ವಾಲ್‌ಪೇಪರ್ ಅನ್ನು ಹೊಂದಿರುವುದು ನಾನೂ ನೋಡಿದ್ದೇನೆ ಎಂದು ಎಂದು ಟ್ವೀಟ್ ಮಾಡಿದ್ದಾರೆ.

ಜಿಮ್‌ನಲ್ಲಿ ವರ್ಕೌಟ್ ಮಾಡೋ ವೀಡಿಯೋ ಹಂಚಿಕೊಂಡ ಮೇಘಾ ಶೆಟ್ಟಿ, 'ಡಿ ಬಾಸ್' ಬಗ್ಗೆ ಮಾತಾಡಿ ಎಂದ ದರ್ಶನ್ ಫ್ಯಾನ್ಸ್!

ಅಷ್ಟಕ್ಕೂ ಯಾರೀ ಕರೋಲಿ ಬಾಬಾ:
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮುನ್ನವೇ 1900ರಲ್ಲಿ ಲಕ್ಷ್ಮಣ್ ನಾರಾಯಣ ಶರ್ಮಾ ಆಗಿ ಜನಿಸಿದ ಬಾಲಕ ತಮ್ಮ 11ನೇ ವಯಸ್ಸಿನಲ್ಲೇ ಆಧ್ಯಾತ್ಮಿಕ ಪ್ರಯಾಣ ಪ್ರಾರಂಭಿಸಿದರು. ನಂತರ, ಭಗವಾನ್ ಶ್ರೀ ಹನುಮಂತನ ಅನುಯಾಯಿಯಾಗಿದ್ದ ಲಕ್ಷ್ಮಣ್ ನಾರಾಯಣ ಶರ್ಮಾ ಇವರು ಬಾಬಾ ನೀಮ್ ಕರೋಲಿ ಆಗಿ ಗುರುತಿಸಿಕೊಂಡರು. ನಂತರ, ಇವರ ಭಕ್ತರಿಂದ ಮಹಾರಾಜ್-ಜಿ ಎಂಬ ಹೆಸರಿನಿಂದಲೂ ಕರೆಯಲ್ಪಟ್ಟರು. ಇವರು ಮೂಲತಃ 'ನೀಬ್ ಕರೋರಿ' ಗ್ರಾಮದಲ್ಲಿ ನೆಲೆಸಿದ್ದರಿಂದ, ಸುತ್ತಲಿನ ಜನರು ಈ ಗ್ರಾಮವನ್ನು 'ನೀಮ್​​ ಕರೋಲಿ' ಎಂದು ತಪ್ಪಾಗಿ ಉಲ್ಲೇಖಿಸಲಾಗುತ್ತಿತ್ತು. ಇದು ಜನರ ಆಡು ಮಾತಿನಿಂದ ಹೊಗೆಯೇ ಮುಂದುವರಿದು ನೀಮ್​ ಕರೋಲಿ ಬಾಬಾ ಎಂದತೇ ಜನಪ್ರಿಯರಾದರು. ಇವರು 1973ರಲ್ಲಿ ಅಧ್ಯಾತ್ಮಿಕತೆಯ ದಾರಿಯಲ್ಲಿಯೇ ಸಾಗಿ ದೈವಾಧೀನರಾಗಿದ್ದರು. ಇನ್ನು ವಿರಾಟ್ ಕೊಹ್ಲಿ ದಂಪತಿ ದೇಶದ ವಿವಿಧ ನಗರಗಳಲ್ಲಿರುವ ನೀಮ್​ ಕರೋಲಿ ಬಾಬಾ ಅವರ ಆಶ್ರಮಗಳಿಗೆ ಆಗಾಗ ಭೇಟಿ ನೀಡುತ್ತಿದ್ದರು. ಈಗ ತಮ್ಮ ಫೋನಿನಲ್ಲಿ ಕರೋಲಿ ಬಾಬಾ ಫೋಟೊವನ್ನು ವಾಲ್ ಪೆಪರ್ ಹಾಕಿಕೊಂಡಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. 

Latest Videos
Follow Us:
Download App:
  • android
  • ios