ಭಾರತದ ಮೊದಲ ಟಿ10 ಲೀಗ್ ಟೂರ್ನಿಗೆ ಭರ್ಜರಿ ಸಿದ್ದತೆಇಂಡಿಯಾ ಮಾಸ್ಟರ್ಸ್‌ ಕ್ರಿಕೆಟ್ ಟೂರ್ನಿ ಜೂನ್ 14ರಿಂದ ಆರಂಭದೇಶದ ವಿವಿಧ ನಗರಗಳು ಪಂದ್ಯಗಳಿಗೆ ಆತಿಥ್ಯ

- ಸ್ಪಂದನ್ ಕಣಿಯಾರ್, ಕನ್ನಡಪ್ರಭ

ಮುಂಬೈ(ಮಾ.28): ಚೊಚ್ಚಲ ಆವೃತ್ತಿಯ ಟಿ10(10 ಓವರ್‌) ಇಂಡಿಯಾ ಮಾಸ್ಟ​ರ್ಸ್‌ ಕ್ರಿಕೆಟ್‌ ಟೂರ್ನಿಗೆ ಈ ವರ್ಷ ಜೂನ್‌ನಲ್ಲಿ ಚಾಲನೆ ಸಿಗಲಿದೆ. ಜೂನ್ 14ರಿಂದ 28ರ ವರೆಗೂ 12 ದಿನಗಳ ಕಾಲ ಒಟ್ಟು 6 ತಂಡಗಳ ನಡುವೆ 19 ಪಂದ್ಯಗಳು ನಡೆಯಲಿವೆ. ದೇಶದ ವಿವಿಧ ನಗರಗಳು ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.

ಪ್ರತಿ ತಂಡದಲ್ಲೂ ಬಾಲಿವುಡ್‌ ನಟ, ನಟಿಯರ ಸಹ ಮಾಲಿಕತ್ವ ಇರಲಿದ್ದು, ಕ್ರಿಕೆಟ್‌ ಜೊತೆ ಪ್ರೇಕ್ಷಕರಿಗೆ ಮನರಂಜನೆಯೂ ಸಿಗಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ)ಯಿಂದ ಮಾನ್ಯತೆ ಪಡೆದಿರುವ ವಿಶ್ವದ ಏಕೈಕ ಟಿ10 ಲೀಗ್‌ ಎನಿಸಿರುವ ಅಬುಧಾಬಿ ಲೀಗ್‌ನ ಆಯೋಜಕರಾದ ಟಿ ಟೆನ್‌ ಗ್ಲೋಬಲ್‌ ಸ್ಪೋರ್ಟ್ಸ್‌ ಸಂಸ್ಥೆಯು ಇಂಡಿಯಾ ಮಾಸ್ಟ​ರ್ಸ್‌ ಟೂರ್ನಿಯನ್ನೂ ಆಯೋಜಿಸುತ್ತಿದ್ದು, ಭಾರತದ ಮಾಜಿ ಕ್ರಿಕೆಟಿಗರಾದ ಸುರೇಶ್‌ ರೈನಾ, ಮೊಹಮದ್‌ ಕೈಫ್‌, ರಾಬಿನ್‌ ಉತ್ತಪ್ಪ, ಹರ್ಭಜನ್‌ ಸಿಂಗ್‌, ಮುರಳಿ ವಿಜಯ್‌, ಇರ್ಫಾನ್‌ ಪಠಾಣ್‌ ಜೊತೆ ವಿದೇಶಿ ತಾರೆಯರಾದ ಕ್ರಿಸ್‌ ಗೇಲ್‌, ಕೀರನ್‌ ಪೊಲ್ಲಾರ್ಡ್‌, ಡ್ವೇನ್‌ ಬ್ರಾವೋ, ಜ್ಯಾಕ್‌ ಕಾಲಿಸ್‌, ಇಯಾನ್‌ ಮೊರ್ಗನ್‌ ಸೇರಿ ಒಟ್ಟು 90ಕ್ಕೂ ಹೆಚ್ಚು ನಿವೃತ್ತ ಕ್ರಿಕೆಟಿಗರು ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯ ಮುಖ್ಯಸ್ಥ ಶಾಜಿ-ಉಲ್‌-ಮುಲ್‌್ಕ ಸೋಮವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

KKR ತಂಡಕ್ಕೆ ನೂತನ ನಾಯಕ ನೇಮಕ; ರಾಣಾ ಹೆಗಲೇರಿದ ಮಹತ್ವದ ಜವಾಬ್ದಾರಿ..!

ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ರಾಬಿನ್‌ ಉತ್ತಪ್ಪ ಮಾತನಾಡಿ, ‘ಬಾಲ್ಯದಲ್ಲಿ ನಾವು ಟೆನಿಸ್‌ ಬಾಲ್‌ನಲ್ಲಿ 6, 8 ಓವರ್‌ ಕ್ರಿಕೆಟ್‌ ಆಡುತ್ತಿದ್ದೆವು. ಅಂತದ್ದೇ ಅನುಭವ ಟಿ10 ಲೀಗ್‌ನಲ್ಲೂ ಸಿಗಲಿದೆ. ಅಂ.ರಾ.ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿರುವ ಆಟಗಾರರಿಗೆ ಮತ್ತೆ ಮೈದಾನಕ್ಕಿಳಿಯುವ ಅವಕಾಶ ಸಿಗಲಿದೆ. ಜೊತೆಗೆ ಅಭಿಮಾನಿಗಳೂ ತಮ್ಮ ನೆಚ್ಚಿನ ಕ್ರಿಕೆಟಿಗರ ಆಟವನ್ನು ಮತ್ತೆ ನೋಡಿ ಆನಂದಿಸಬಹುದು’ ಎಂದರು.

ಇನ್ನು ಮೊಹಮದ್‌ ಕೈಫ್‌ ಮಾತನಾಡಿ, ‘ಪ್ರೇಕ್ಷಕರಿಗೆ ಟಿ10 ಕ್ರಿಕೆಟ್‌ ಹೊಸ ಅನುಭವ ನೀಡಲಿದೆ. ಬ್ಯಾಟರ್‌ಗಳು ರನ್‌ ಸಿಡಿಸುವುದಷ್ಟೇ ಅಲ್ಲ, ಬೌಲರ್‌ಗಳ ವಿಶೇಷ ಕೌಶಲ್ಯಗಳು ಅನಾವರಣಗೊಳ್ಳಲಿದೆ. ಈ ಮಾದರಿಯು ಕ್ರಿಕೆಟ್‌ನ ಭವಿಷ್ಯವನ್ನು ಬದಲಿಸಲಿದೆ’ ಎಂದರು.