* ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್‌ ವಿಶ್ವಕಪ್‌ಗೆ ದಿನಗಣನೆ ಆರಂಭ* ಜೂನ್‌ 18ರಿಂದ ಸೌಥಾಂಪ್ಟನ್‌ನಲ್ಲಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಆರಂಭ* ಫೈನಲ್‌ನಲ್ಲಿ 90ರ ದಶಕದ ರೆಟ್ರೋ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ ಟೀಂ ಇಂಡಿಯಾ

ಮುಂಬೈ(ಮೇ.31): ಜೂನ್ 18ರಿಂದ ಸೌಥಾಂಪ್ಟನ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಭಾರತ ತಂಡದ ಜೆರ್ಸಿ ಅನಾವರಣಗೊಂಡಿದೆ. 

ಟೀಂ ಇಂಡಿಯಾದ ಬ್ಯಾಟಿಂಗ್‌ ತಾರೆ ಚೇತೇಶ್ವರ್‌ ಪೂಜಾರ, ಸಾಮಾಜಿಕ ತಾಣಗಳಲ್ಲಿ ಜೆರ್ಸಿ ಪ್ರದರ್ಶನ ಮಾಡಿದ್ದಾರೆ. ಐಸಿಸಿ ಪಂದ್ಯವಾಗಿರುವ ಕಾರಣ, ಜೆರ್ಸಿ ಮೇಲೆ ಪ್ರಾಯೋಜಕರ ಹೆಸರಿನ ಬದಲಿಗೆ ಇಂಡಿಯಾ ಎಂದು ಮುದ್ರಿಸಲಾಗಿದೆ. ಈ ಮೊದಲು ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಸಹಾ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ನ ಸ್ವೆಟರ್‌ನೊಂದಿಗೆ ಫೋಸ್ ಕೊಟ್ಟಿದ್ದರು.

Scroll to load tweet…

ಹೊಸ ಕಿಟ್‌ ರೆಡಿ ಇದೆ. ಮೈದಾನಕ್ಕಿಳಿಯಲು ಹಾತೊರೆಯುತ್ತಿದ್ದೇನೆ ಎಂದು ಟೀಂ ಇಂಡಿಯಾ ಟೆಸ್ಟ್‌ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇನ್ನು 14 ದಿನಗಳ ಕ್ವಾರಂಟೈನ್‌ನಲ್ಲಿರುವ ಚೇತೇಶ್ವರ್ ಪೂಜಾರ, ಹೋಟೆಲ್‌ ಕೊಠಡಿಯಲ್ಲೇ ಬ್ಯಾಟಿಂಗ್‌ ಅಭ್ಯಾಸ ನಡೆಸುತ್ತಿರುವಂತೆ ಫೋಸ್‌ ನೀಡಿದ್ದು, ಈ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

View post on Instagram

ಟೆಸ್ಟ್‌ ಚಾಂಪಿಯನ್‌ಶಿಪ್‌ ಡ್ರಾ/ ಟೈ ಆದ್ರೆ ಏನಾಗುತ್ತೆ? ಕುತೂಹಲಕ್ಕೆ ತೆರೆ ಎಳೆದ ಐಸಿಸಿ

ಸೌಥಾಂಪ್ಟನ್‌ನಲ್ಲಿ ನಡೆಯಲಿರುವ ಚೊಚ್ಚಲ ಆವೃತ್ತಿಯ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ನಂ.1 ಶ್ರೇಯಾಂಕಿತ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾವು, ಎರಡನೇ ಶ್ರೇಯಾಂಕಿತ ನ್ಯೂಜಿಲೆಂಡ್ ಎದುರು ಪ್ರಶಸ್ತಿಗಾಗಿ ಕಾದಾಡಲಿವೆ. ಒಂದು ವೇಳೆ ಪಂದ್ಯ ಡ್ರಾ ಅಥವಾ ಟೈ ಆದರೆ ಎರಡು ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುವುದು ಎಂದು ಐಸಿಸಿ ತಿಳಿಸಿದೆ.