Asianet Suvarna News Asianet Suvarna News

ಟೀಂ ಇಂಡಿಯಾದ ನ್ಯೂಜಿಲೆಂಡ್‌ ಪ್ರವಾಸ 2022ಕ್ಕೆ ಮುಂದೂಡಿಕೆ..!

* ಕಿವೀಸ್‌ ವಿರುದ್ದದ ಏಕದಿನ ಸರಣಿ ಒಂದು ವರ್ಷ ಮುಂದೂಡಿಕೆ

* ಟಿ20 ವಿಶ್ವಕಪ್‌ ಬಳಿಕ ಟೀಂ ಇಂಡಿಯಾ ಕಿವೀಸ್‌ ಪ್ರವಾಸ ಕೈಗೊಳ್ಳಬೇಕಿತ್ತು

*  ಐಸಿಸಿ ವಿಶ್ವಕಪ್‌ ಸೂಪರ್‌ ಲೀಗ್‌ನ ಭಾಗವಾಗಿ 3 ಏಕದಿನ ಪಂದ್ಯಗಳನ್ನು ಕಿವೀಸ್ ವಿರುದ್ದ ಆಡಬೇಕಿದೆ

Indian Cricket Team ODI tour of New Zealand postponed Says Report kvn
Author
Wellington, First Published Sep 17, 2021, 12:18 PM IST
  • Facebook
  • Twitter
  • Whatsapp

ವೆಲ್ಲಿಂಗ್‌ಟನ್(ಸೆ.17)‌: ಬಿಡುವಿಲ್ಲದ ವೇಳಾಪಟ್ಟಿ ಹಾಗೂ ಕಠಿಣ ಕೋವಿಡ್‌-19 ನಿಯಮದ ಕಾರಣ ಟೀಂ ಇಂಡಿಯಾದ ನ್ಯೂಜಿಲೆಂಡ್‌ ಪ್ರವಾಸವನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.

ಯುಎಇನಲ್ಲಿ ಆಯೋಜನೆಗೊಂಡಿರುವ ಟಿ20 ವಿಶ್ವಕಪ್‌ ಬಳಿಕ, ಐಸಿಸಿ ವಿಶ್ವಕಪ್‌ ಸೂಪರ್‌ ಲೀಗ್‌ನ ಭಾಗವಾಗಿ 3 ಏಕದಿನ ಪಂದ್ಯಗಳನ್ನು ಆಡಲು ಭಾರತ ತಂಡ ನ್ಯೂಜಿಲೆಂಡ್‌ ಪ್ರವಾಸ ಕೈಗೊಳ್ಳಬೇಕಿತ್ತು. ಆದರೆ, ಇದೀಗ ಸರಣಿಯನ್ನು ಮುಂದೂಡಲಾಗಿದ್ದು, ಮುಂದಿನ ವರ್ಷ ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ನಂತರ ಸರಣಿ ಆಯೋಜಿಸುವುದಾಗಿ ನ್ಯೂಜಿಲೆಂಡ್‌ ಕ್ರಿಕೆಟ್‌ನ ವಕ್ತಾರರು ತಿಳಿಸಿದ್ದಾರೆ. 

ಕೊಹ್ಲಿ ನಂತರ ಯಾರಿಗೆ ಟಿ-20 ಜವಾಬ್ದಾರಿ? ಕನ್ನಡಿಗ ರಾಹುಲ್ ಗೆ ಅಧಿಕ ಮತ!

ಈಗಾಗಲೇ ನಿಗದಿ ಆಗಿರುವಂತೆ ನವೆಂಬರ್‌ನಲ್ಲಿ 2 ಟೆಸ್ಟ್‌ ಹಾಗೂ 3 ಟಿ20 ಪಂದ್ಯಗಳ ಸರಣಿಯನ್ನಾಡಲು ನ್ಯೂಜಿಲೆಂಡ್‌ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ. ಇದೀಗ ನ್ಯೂಜಿಲೆಂಡ್ ತಂಡವು ಟಿ20 ವಿಶ್ವಕಪ್ ಟೂರ್ನಿ ಮುಕ್ತಾಯದ ಬಳಿಕ ನೆದರ್ಲ್ಯಾಂಡ್‌, ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ವಿರುದ್ದ ಏಕದಿನ ಸರಣಿಯನ್ನಾಡಲಿದೆ. ಇನ್ನು ಮುಂಬರುವ ಮಾರ್ಚ್‌ 04ರಿಂದ ಏಪ್ರಿಕ್‌ 03ರವರೆಗೆ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಆತಿಥ್ಯವನ್ನು ವಹಿಸಲಿದೆ.
 

Follow Us:
Download App:
  • android
  • ios