ಕೊಹ್ಲಿ ನಂತರ ಯಾರಿಗೆ ಟಿ-20 ಜವಾಬ್ದಾರಿ? ಕನ್ನಡಿಗ ರಾಹುಲ್ ಗೆ ಅಧಿಕ ಮತ!
ನವದೆಹಲಿ(ಸೆ. 16) ಎಲ್ಲರಿಗೂ ಧನ್ಯವಾದ ತಿಳಿಸಿರುವ ವಿರಾಟ್ ಕೊಹ್ಲಿ ಟಿ20 ನಾಯಕತ್ವದಿಂದ ಕೆಳಗಿಳಿಯುವ ಪ್ರಕಟಣೆ ಮಾಡಿದ್ದಾರೆ. ಇದಾದ ಮೇಲೆ ಸಹಜವಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ಮುಂದಿನ ನಾಯಕ ಯಾರು ಎಂಬ ಚರ್ಚೆ ಆರಂಭವಾಗಿದೆ.
ಗುರುವಾರ ಮಧ್ಯಾಹ್ನ ಟ್ವೀಟ್ ಮಾಡಿದ್ದ ಕೊಹ್ಲಿ ಅನೇಕ ವಿಚಾರಗಳನ್ನು ಬರೆದುಕೊಂಡಿದ್ದರು. ಕಳದೆ 5-6 ವರ್ಷದಿಂದ ಎಲ್ಲ ಮೂರು ಮಾದರಿಯಲ್ಲಿ ಟೀಂ ಇಂಡಿಯಾ ಮುನ್ನಡೆಸಿಕೊಂಡು ಬಂದಿದ್ದೇನೆ. ನಾನು ಏಕದಿನ ಮತ್ತು ಟೆಸ್ಟ್ ತಂಡ ಮುನ್ನಡೆಸಲು ಸದಾ ಸಿದ್ಧನಾಗಿಯೇ ಇದ್ದೇನೆ. ಇನ್ನು ಮುಂದೆ ಟಿ20 ಯಲ್ಲಿ ಒಬ್ಬ ಬ್ಯಾಟ್ಸ್ ಮನ್ ಆಗಿ ಇರಲು ಬಯಸಿದ್ದೇನೆ ಎಂದು ತಿಳಿಸಿ ನಾಯಕತ್ವ ತ್ಯಜಿಸುವ ವಿಚಾರ ತಿಳಿಸಿದ್ದರು.
ಕೊಹ್ಲಿ ಈ ನಿರ್ಧಾರದ ಬಳಿಕ ಸೋಶಿಯಲ್ ಮೀಡಿಯಾ ಸಹಜವಾಗಿಯೇ ಪ್ರತಿಕ್ರಿಯೆಗೆ ಇಳಿಯಿತು. ಮುಂದಿನ ನಾಯಕ ಯಾರಾಗಬೇಕು ಎಂಬುದಕ್ಕೆ ತನ್ನದೇ ಆದ ವಿಶ್ಲೇಷಣೆ ತೆರೆದಿಟ್ಟಿತು.
ರೋಹಿತ್ ಶರ್ಮಾ; ರೋಹಿತ್ ಶರ್ಮಾ ಮುಂದಿನ ನಾಯಕರಾಗಬೇಕು ಎಂದು ಅಭಿಮಾನಿಗಳು ಬ್ಯಾಟ್ ಬೀಸಿದ್ದಾರೆ. ಅಪಾರ ಅನುಭವ ಶರ್ಮಾ ಅವರಿಗೆ ಇದೆ. ಓಪನರ್ ಆಗಿ ಗುರುತಿಸಿಕೊಂಡಿರುವ ಶರ್ಮಾ ಮುಂಬೈ ಇಂಡಿಯನ್ಸ್ ನಾಯಕರಾಗಿ ತಂಡಕ್ಕೆ ಐಪಿಎಲ್ ಗೆದ್ದು ಕೊಟ್ಟವರು.
ಕೆಎಲ್ ರಾಹುಲ್; ಕನ್ನಡಿಗ ಕೆಎಲ್ ರಾಹುಲ್ ಮೇಲೆಯೂ ಅಪಾರ ನಿರೀಕ್ಷೆ ಹೊರಿಸಿದ್ದಾರೆ. ಪಂಜಾಬ್ ತಂಡವನ್ನು ಮುನ್ನಡೆಸುತ್ತಿರುವ ರಾಹುಲ್ ಸಹ ಅತ್ಯುತ್ತಮ ಆಯ್ಕೆ ಎನ್ನುವ ಅಭಿಪ್ರಾಯ ಬಂದಿದೆ. ಇದೇ ಕಾರಣಕ್ಕೆ ಕೆಎಲ್ ರಾಹುಲ್ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ.
ಶ್ರೇಯಸ್ ಅಯ್ಯರ್: 1 ಕೋಟಿ ರುಪಾಯಿ
ಶ್ರೇಯಸ್ ಅಯ್ಯರ್; ಯುವ ಕ್ರಿಕೆಟಿಗ ಮಧ್ಯಮ ಕ್ರಮಾಂಕ್ಕೆ ಬಲತುಂಬಲ್ಲ ಶ್ರೇಯಸ್ ಅಯ್ಯರ್ ಸಹ ಒಂದು ಒಳ್ಳೆಯ ಆಯ್ಕೆಯಾಗಬಹುದು ಎನ್ನುವುದು ಪಂಡಿತರ ಲೆಕ್ಕಾಚಾರ
ರಿಷಬ್ ಪಂತ್; ಎಡಗೈ ಬ್ಯಾಟ್ಸ್ ಮನ್..ವಿಕೇಟ್ ಕೀಪರ್ ರಿಷಬ್ ಪಂತ್ ಸಹ ಒಂದು ಒಳ್ಳೆ ಆಯ್ಕೆ. ದಿಗ್ಗಜ ಆಟಗಾರರು ಸಹ ರಿಷಬ್ ಪಂತ್ ಭಾರತದ ಭವಿಷ್ಯದ ನಾಯಕ ಎಂದಿದ್ದರು .