ಭಾರತ-ಬಾಂಗ್ಲಾದೇಶ ನಡುವಿನ ಸೀಮಿತ ಓವರ್‌ಗಳ ಸರಣಿಗೆ ಕ್ಷಣಗಣನೆಜನವರಿ 03ರಿಂದ ಮೂರು ಪಂದ್ಯಗಳ ಟಿ20 ಸರಣಿ ಆರಂಭಇಂದು ಮುಂಬೈಗೆ ಬಂದಿಳಿದ ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ

ಮುಂಬೈ(ಜ.01): ಶ್ರೀಲಂಕಾ ವಿರುದ್ಧ ಮಂಗಳವಾರದಿಂದ ಆರಂಭಗೊಳ್ಳಲಿರುವ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವನ್ನಾಡಲು ಭಾನುವಾರ ಭಾರತ ತಂಡ ಮುಂಬೈ ತಲುಪಲಿದೆ. ಭಾನುವಾರ ಸಂಜೆ, ಮಂಗಳವಾರ ಆಟಗಾರರು ಅಭ್ಯಾಸ ನಡೆಸಲಿದ್ದಾರೆ. ಸರಣಿಯಲ್ಲಿ ಭಾರತ ತಂಡವನ್ನು ಹಾರ್ದಿಕ್‌ ಪಾಂಡ್ಯ ಮುನ್ನಡೆಸಲಿದ್ದು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಸರಣಿಯ 2ನೇ ಪಂದ್ಯ ಜ.5ರಂದು ಪುಣೆಯಲ್ಲಿ ನಡೆಯಲಿದ್ದು, 3ನೇ ಪಂದ್ಯಕ್ಕೆ ಜ.7ರಂದು ರಾಜ್‌ಕೋಟ್‌ ಆತಿಥ್ಯ ವಹಿಸಲಿದೆ. ಜ.10ರಿಂದ ಏಕದಿನ ಸರಣಿ ಆರಂಭಗೊಳ್ಳಲಿದ್ದು, ಮೊದಲ ಪಂದ್ಯಕ್ಕೆ ಗುವಾಹಟಿ, ಜ.12ರಂದು 2ನೇ ಪಂದ್ಯಕ್ಕೆ ಕೋಲ್ಕತಾ, ಜ.15ರಂದು 3ನೇ ಪಂದ್ಯಕ್ಕೆ ತಿರುವನಂತಪುರ ಆತಿಥ್ಯ ನೀಡಲಿದೆ.

ಟಿ20 ತಂಡ: ಹಾರ್ದಿಕ್‌ ಪಾಂಡ್ಯ(ನಾಯಕ), ಇಶಾನ್‌ ಕಿಶನ್, ಋುತುರಾಜ್‌ ಗಾಯಕ್ವಾಡ್, ಶುಭ್‌ಮನ್ ಗಿಲ್‌, ಸೂರ್ಯಕುಮಾರ್‌ ಯಾದವ್, ದೀಪಕ್‌ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್‌, ವಾಷಿಂಗ್ಟನ್‌ ಸುಂದರ್, ಯುಜುವೇಂದ್ರ ಚಹಲ್‌, ಅಕ್ಷರ್‌ ಪಟೇಲ್, ಅಶ್‌ರ್‍ದೀಪ್‌ ಸಿಂಗ್, ಹರ್ಷಲ್‌ ಪಟೇಲ್, ಉಮ್ರಾನ್‌ ಮಲಿಕ್, ಶಿವಂ ಮಾವಿ, ಮುಕೇಶ್‌ ಕುಮಾರ್.

ಏಕದಿನ ತಂಡ: ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್ ಗಿಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್, ಶ್ರೇಯಸ್‌ ಅಯ್ಯರ್, ಕೆ ಎಲ್ ರಾಹುಲ್‌, ಇಶಾನ್‌ ಕಿಶನ್, ಹಾರ್ದಿಕ್‌ ಪಾಂಡ್ಯ, ವಾಷಿಂಗ್ಟನ್‌ ಸುಂದರ್, ಯುಜುವೇಂದ್ರ ಚಹಲ್‌, ಕುಲ್ದೀಪ್‌ ಯಾದವ್, ಅಕ್ಷರ್‌ ಪಟೇಲ್, ಮೊಹಮ್ಮದ್ ಶಮಿ, ಸಿರಾಜ್‌, ಉಮ್ರಾನ್‌, ಅಶ್‌ರ್‍ದೀಪ್‌.

ಕ್ರೀಡಾಂಗಣಕ್ಕೆ ಬಾರದ ಜನ: 2ನೇ ಟೆಸ್ಟ್‌ಗೆ ಉಚಿತ ಪ್ರವೇಶ ಘೋಷಿಸಿದ ಪಾಕ್‌ ಕ್ರಿಕೆಟ್‌!

ಕರಾಚಿ: ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯ ಬಳಿಕ ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ ವೀಕ್ಷಣೆಗೂ ಬೆರಳೆಣಿಕೆಯಷ್ಟುಪ್ರೇಕ್ಷಕರು ಆಗಮಿಸಿದ ಹಿನ್ನೆಲೆಯಲ್ಲಿ ಸೋಮವಾರದಿಂದ ಆರಂಭಗೊಳ್ಳಲಿರುವ ನ್ಯೂಜಿಲೆಂಡ್‌ ವಿರುದ್ಧದ 2ನೇ ಟೆಸ್ಟ್‌ಗೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಉಚಿತ ಪ್ರವೇಶ ಕಲ್ಪಿಸಿದೆ. 

Ind vs SL: ಲಂಕಾ ಎದುರಿನ ಸರಣಿಗೆ ಬಲಿಷ್ಠ ಭಾರತ ತಂಡ ಪ್ರಕಟ, ಟಿ20 ತಂಡಕ್ಕೆ ಹಾರ್ದಿಕ್‌ ಪಾಂಡ್ಯ ನಾಯಕ..!

ಹೀಗಾದರೂ ಕ್ರೀಡಾಂಗಣಕ್ಕೆ ಪ್ರೇಕ್ಷಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಉಚಿತ ಪ್ರವೇಶ ಮಾತ್ರವಲ್ಲದೆ ನಗರದ ಪ್ರಮುಖ ಸ್ಥಳಗಳಿಂದ ಕ್ರೀಡಾಂಗಣಕ್ಕೆ ಉಚಿತ ಬಸ್‌ ವ್ಯವಸ್ಥೆ ಸಹ ಮಾಡಿರುವುದಾಗಿ ಪಿಸಿಬಿ ಹೇಳಿದೆ. ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್‌ ನಡುವಿನ ಮೊದಲ ಟೆಸ್ಟ್‌ ಡ್ರಾನಲ್ಲಿ ಅಂತ್ಯಗೊಂಡಿತ್ತು.

ಸಂತೋಷ್‌ ಟ್ರೋಫಿ: ರಾಜ್ಯಕ್ಕೆ ಮೊದಲ ಸೋಲು

ನವದೆಹಲಿ: 2022-23ರ ಸಂತೋಷ್‌ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಮೊದಲ ಸೋಲು ಕಂಡಿದೆ. ಶನಿವಾರ ದೆಹಲಿ ವಿರುದ್ಧ ನಡೆದ ಗುಂಪು-1ರ 5ನೇ ಹಾಗೂ ಅಂತಿಮ ಪಂದ್ಯದಲ್ಲಿ 0-1 ಗೋಲಿನ ಸೋಲು ಅನುಭವಿಸಿತು. 77ನೇ ನಿಮಿಷದಲ್ಲಿ ಗೌರವ್‌ ರಾವತ್‌ ಬಾರಿಸಿದ ಗೋಲು ಕರ್ನಾಟಕದ ಸೋಲಿಗೆ ಕಾರಣವಾಯಿತು. 

Ind vs SL: ಲಂಕಾ ಎದುರಿನ ಸರಣಿಗೆ ಬಲಿಷ್ಠ ಭಾರತ ತಂಡ ಪ್ರಕಟ, ಟಿ20 ತಂಡಕ್ಕೆ ಹಾರ್ದಿಕ್‌ ಪಾಂಡ್ಯ ನಾಯಕ..!

ಗುಂಪು ಹಂತದಲ್ಲಿ ಆಡಿದ 5 ಪಂದ್ಯಗಳಲ್ಲಿ 4 ಜಯ, 1 ಸೋಲಿನೊಂದಿಗೆ 12 ಅಂಕ ಪಡೆದ ಕರ್ನಾಟಕ 2ನೇ ಸ್ಥಾನಕ್ಕೆ ಕುಸಿದಿದೆ. 4 ಗೆಲುವು, 1 ಡ್ರಾನೊಂದಿಗೆ 13 ಅಂಕ ಪಡೆದ ದೆಹಲಿ ಮೊದಲ ಸ್ಥಾನಕ್ಕೇರಿದ್ದು, ಪ್ರಧಾನ ಸುತ್ತಿಗೆ ಪ್ರವೇಶ ಖಚಿತಪಡಿಸಿಕೊಂಡಿದೆ. 6 ಗುಂಪುಗಳಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು, ಸರ್ವಿಸಸ್‌ ಹಾಗೂ ರೈಲ್ವೇಸ್‌ಗೆ ಪ್ರಧಾನ ಸುತ್ತಿಗೆ ನೇರ ಪ್ರವೇಶ ದೊರೆಯಲಿದೆ. ಇನ್ನುಳಿದ 2 ಸ್ಥಾನಗಳು 6 ಗುಂಪುಗಳಲ್ಲಿ 2ನೇ ಸ್ಥಾನ ಪಡೆದ ತಂಡಗಳ ಪೈಕಿ ಅಗ್ರ 2 ತಂಡಗಳಿಗೆ ಸಿಗಲಿವೆ. ಕರ್ನಾಟಕ ಪ್ರಧಾನ ಸುತ್ತಿಗೇರುವ ಸಾಧ್ಯತೆ ಹೆಚ್ಚಿದೆ.

ಫಿಡೆ ವಿಶ್ವ ಬ್ಲಿಟ್‌್ಜ ಚೆಸ್‌: ಭಾರತದ ಕೊನೆರುಗೆ ಬೆಳ್ಳಿ

ಆಲ್ಮೆಟಿ(ಕಜಕಸ್ತಾನ): ಭಾರತದ ತಾರಾ ಚೆಸ್‌ ಆಟಗಾರ್ತಿ ಕೊನೆರು ಹಂಪಿ ಫಿಡೆ ವಿಶ್ವ ಬ್ಲಿಟ್‌್ಜ ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಮಹಿಳಾ ವಿಭಾಗದಲ್ಲಿ ಶುಕ್ರವಾರ 17 ಹಾಗೂ ಕೊನೆ ಸುತ್ತಿನಲ್ಲಿ ಚೀನಾದ ಝೊಂಗ್ಯಿ ತಾನ್‌ರನ್ನು ಸೋಲಿಸಿದ ಕೊನೆರು 12.5 ಅಂಕಗಳೊಂದಿಗೆ 2ನೇ ಸ್ಥಾನ ಪಡೆದರು. ಕಜಸ್ತಾನದ ಬಿಬಿಸಾರ ಬಲಾಬಯೆವಾ(13 ಅಂಕ) ಚಿನ್ನದ ಪದಕ ಜಯಿಸಿದರು.