ಹೈದರಾಬಾದ್(ಡಿ.05): ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿ ಡಿಸೆಂಬರ್ 6 ರಿಂದ ಆರಂಭಗೊಳ್ಳುತ್ತಿದೆ. ಹೈದರಾಬಾದ್‌ನಲ್ಲಿ ನಡೆಯಲಿರುವ ಮೊದಲ ಪಂದ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.  ಟಿ20 ವಿಶ್ವಕಪ್ ದೃಷ್ಟಿಯಿಂದ ಈ ಸರಣಿ ಭಾರತದ ಪಾಲಿಗೆ ಮಹತ್ವದ್ದಾಗಿದೆ. ಹೀಗಾಗಿ ಮೊದಲ ಟಿ20  ಪಂದ್ಯದಲ್ಲಿ ಸ್ಥಾನ ಪಡೆಯುವ ಕ್ರಿಕೆಟಿಗರು ಯಾರು ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಇದನ್ನೂ ಓದಿ: ಇನ್ನೊಂದೇ ಸಿಕ್ಸರ್, ಅಪರೂಪದ ದಾಖಲೆ ಬರೆಯಲು ರೋಹಿತ್ ರೆಡಿ.

ಬಾಂಗ್ಲಾ ವಿರುದ್ಧದ ಸರಣಿ ಬಳಿಕ ಮತ್ತೊಂದು ದಾಖಲೆ ನಿರ್ಮಿಸಲು ರೆಡಿಯಾಗಿರುವ ಟೀಂ ಇಂಡಿಯಾ ಮೊದಲ ಪಂದ್ಯಕ್ಕಾಗಿ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಲಿದೆ. ಭಾರತ ಹಾಗೂ ವಿಂಡೀಸ್ ಸಂಭವನೀಯ ತಂಡದ ವಿವರ ಇಲ್ಲಿದೆ.

ಇದನ್ನೂ ಓದಿ: ಕೆರಿಬಿಯನ್ನರನ್ನು ಹಣಿಯಲು ಟೀಂ ಇಂಡಿಯಾ ರೆಡಿ.

ಭಾರತ ಸಂಭವನೀಯ ತಂಡ:
ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್, ವಾಶಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ದೀಪಕ್ ಚಹಾರ್, ಮೊಹಮ್ಮದ್ ಶಮಿ

ವೆಸ್ಟ್  ಇಂಡೀಸ್ ಸಂಭವನೀಯ ತಂಡ:
ಇವಿನ್ ಲಿವಿಸ್, ಲಿಂಡ್ಲ್ ಸಿಮೋನ್ಸ್, ಶಿಮ್ರೊನ್ ಹೆಟ್ಮೆಯರ್, ಕೀರನ್ ಪೊಲಾರ್ಡ್, ಬ್ರಾಂಡನ್ ಕಿಂಗ್, ನಿಕೋಲಸ್ ಪೂರನ್, ಜೇಸನ್ ಹೋಲ್ಡರ್, ಕಿಮೊ ಪೌಲ್, ಫ್ಯಾಬಿಯನ್ ಅಲೆನ್, ಶೆಲ್ಡನ್ ಕಾಟ್ರೆಲ್, ಅಲ್ಜಾರಿ ಜೋಸೆಪ್