ಕಟಕ್(ಡಿ.20): ವೆಸ್ಟ್ ಇಂಡೀಸ್ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯಕ್ಕಾಗಿ ಭವನೇಶ್ವರ ಆಗಮಿಸಿದ ಟೀಂ ಇಂಡಿಯಾಗೆ ಅದ್ಧೂರಿ ಸ್ವಾಗತ ನೀಡಲಾಗಿದೆ. ಏಕದಿನ ಪಂದ್ಯಕ್ಕಾಗಿ ಹೊಟೆಲ್‌ಗೆ ಆಗಮಿಸಿದ ಟೀಂ ಇಂಡಿಯಾದ ಸಂಪ್ರದಾಯಿಕ ಸ್ವಾಗತ ಕೋರಲಾಯಿತು. ಹಾಡು ಹಾಗೂ ಒಡಿಶಾ ಸಂಪ್ರಾದಾಯಿಕ ಕುಣಿತವೂ ಮೇಳಸಿತ್ತು.

ಇದನ್ನೂ ಓದಿ; ದೀಪಕ್ ಚಹಾರ್ ಇಂಜುರಿ; ಟೀಂ ಇಂಡಿಯಾ ಸೇರಿಕೊಂಡ RCB ವೇಗಿ!.

ಶಾಲು ಹಾಗೂ ತಿಲಕವಿಟ್ಟ ಟೀಂ ಇಂಡಿಯಾ ಕ್ರಿಕೆಟಿಗನ್ನು ಬರಮಾಡಿಕೊಳ್ಳಲಾಯಿತು. ಅದ್ಧೂರಿ ಸ್ವಾಗತ ಸ್ವೀಕರಿಸಿದ ಟೀಂ ಇಂಡಿಯಾ ಕ್ರಿಕೆಟಿಗರೇ ಅಚ್ಚರಿಗೆ ಒಳಗಾದರು. ಬಾಲಿವುಡ್ ಹಾಡು ಹಾಗೂ ಡ್ಯಾನ್ಸ್ ಮೂಲಕ ಸ್ವಾಗತ ಇದೀಗ ಅಭಿಮಾನಿಗಳ ಗಮನಸೆಳೆದಿದೆ.

 

ಇದನ್ನೂ ಓದಿ; 2ನೇ ಏಕದಿನದಲ್ಲಿ ಭಾರತಕ್ಕೆ ಭರ್ಜರಿ ಗೆಲುವು; ಸರಣಿ ಸಮಬಲ!

ವೆಸ್ಟ್ ಇಂಡೀಸ್ ವಿರುದ್ಧದ 3 ಏಕದಿನ ಪಂದ್ಯದ ಸರಣಿ ಇದೀಗ 1-1 ಅಂತರದಲ್ಲಿ ಸಮಬಲಗೊಂಡಿದೆ. ಹೀಗಾಗಿ ಡಿ.22ರಂದು ನಡೆಯಲಿರುವ ಅಂತಿಮ ಏಕದಿನ ಪಂದ್ಯ ಫೈನಲ್ ಸ್ವರೂಪ ಪಡೆದಿದೆ. ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿತ್ತು. ಆದರೆ 2ನೇ ಪಂದ್ಯದಲ್ಲಿ 107 ರನ್ ಗೆಲುವು ಸಾಧಿಸೋ ಮೂಲಕ ಸರಣಿಯನ್ನು 1-1 ಅಂತರದಲ್ಲಿ ಸಮಬಲ ಮಾಡಿಕೊಂಡಿತು.