* ಲಂಕಾ ವಿರುದ್ದದ ಸರಣಿಯ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ* ಫೆಬ್ರವರಿ 24ಕ್ಕೆ ಲಖನೌನಲ್ಲಿ ಮೊದಲ ಟಿ20 ಪಂದ್ಯ ಆರಂಭ* ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನ ಆತಿಥ್ಯ

ಮುಂಬೈ(ಫೆ.16): ಭಾರತ ಹಾಗೂ ಶ್ರೀಲಂಕಾ (India vs West Indies) ನಡುವಿನ ಕ್ರಿಕೆಟ್‌ ಸರಣಿಯ ವೇಳಾಪಟ್ಟಿಯಲ್ಲಿ ಬಿಸಿಸಿಐ (BCCI) ಬದಲಾವಣೆ ಮಾಡಿದೆ. ಮೊದಲು 3 ಪಂದ್ಯಗಳ ಟಿ20 ಸರಣಿ ನಡೆಯಲಿದ್ದು, ಆ ನಂತರ 2 ಪಂದ್ಯಗಳ ಟೆಸ್ಟ್‌ ಸರಣಿ ನಡೆಯಲಿದೆ. ಲಂಕಾ ತಂಡ ಆಸ್ಪ್ರೇಲಿಯಾದಲ್ಲಿ ಟಿ20 ಸರಣಿ ಮುಗಿಸಿ ಭಾರತಕ್ಕೆ ಆಗಮಿಸಲಿರುವ ಕಾರಣ, ಒಂದು ಬಯೋಬಬಲ್‌ನಿಂದ ಮತ್ತೊಂದು ಬಯೋಬಬಲ್‌ಗೆ ಪ್ರವೇಶಿಸಲು ಸುಲಭವಾಗಲಿದೆ ಎನ್ನುವ ಕಾರಣಕ್ಕೆ ಮೊದಲು ಟಿ20 ಸರಣಿ ಆಯೋಜಿಸುವಂತೆ ಶ್ರೀಲಂಕಾ ಕ್ರಿಕೆಟ್‌ ಮಂಡಳಿ (Sri Lanka Cricket) ಬಿಸಿಸಿಐಗೆ ಮನವಿ ಮಾಡಿತ್ತು.

ಫೆಬ್ರವರಿ 24ಕ್ಕೆ ಲಖನೌನಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದ್ದು, ಫೆಬ್ರವರಿ 26, 27ರಂದು ಧರ್ಮಶಾಲಾದಲ್ಲಿ ಕ್ರಮವಾಗಿ 2ನೇ ಹಾಗೂ 3ನೇ ಟಿ20 ನಡೆಯಲಿದೆ. ಮಾರ್ಚ್ 4-8ರ ವರೆಗೂ ಮೊಹಾಲಿಯಲ್ಲಿ ಮೊದಲ ಟೆಸ್ಟ್‌ ನಡೆಯಲಿದ್ದು, ಮಾರ್ಚ್‌ 12-16ರ ವರೆಗೂ ಬೆಂಗಳೂರಲ್ಲಿ 2ನೇ ಟೆಸ್ಟ್‌ ನಿಗದಿಯಾಗಿದೆ. ಈ ಪಂದ್ಯವು ಹಗಲು-ರಾತ್ರಿ ಮಾದರಿಯಲ್ಲಿ ನಡೆಯಲಿದೆ. ವಿರಾಟ್‌ ಕೊಹ್ಲಿಯ 100ನೇ ಟೆಸ್ಟ್‌ ಪಂದ್ಯಕ್ಕೆ ಮೊಹಾಲಿ ವೇದಿಕೆಯಾಗಲಿದೆ. ಈ ಮೊದಲು ವಿರಾಟ್ ಕೊಹ್ಲಿಯ 100ನೇ ಟೆಸ್ಟ್ ಪಂದ್ಯಕ್ಕೆ ಬೆಂಗಳೂರಿನ (Bengaluru) ಎಂ. ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವನ್ನು ವಹಿಸಲಿದೆ ಎಂದು ವರದಿಯಾಗಿತ್ತು. ಇದಾದ ಬಳಿಕ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆಗಳಾಗಿವೆ

ಶ್ರೀಲಂಕಾ ವಿರುದ್ದದ ಸರಣಿಗೆ ಇನ್ನೂ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಿಲ್ಲ. ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿ ಮುಕ್ತಾಯದ ಬೆನ್ನಲ್ಲೇ ವಿರಾಟ್ ಕೊಹ್ಲಿ ಭಾರತ ಟೆಸ್ಟ್‌ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು. ಇದೀಗ ಲಂಕಾ ವಿರುದ್ದದ ಟೆಸ್ಟ್ ಸರಣಿಗೂ ಮುನ್ನ ಬಿಸಿಸಿಐ ಆಯ್ಕೆ ಸಮಿತಿಯು ನೂತನ ಟೆಸ್ಟ್ ನಾಯಕನನ್ನು ಘೋಷಿಸುವ ಸಾಧ್ಯತೆಯಿದೆ. ಈಗಾಗಲೇ ಸೀಮಿತ ಓವರ್‌ಗಳ ತಂಡದ ನಾಯಕರಾಗಿ ಆಯ್ಕೆಯಾಗಿರುವ ರೋಹಿತ್ ಶರ್ಮಾ (Rohit Sharma) ಅವರಿಗೆ ಇದೀಗ ಟೆಸ್ಟ್ ತಂಡದ ನಾಯಕರಾಗಿಯೂ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಟಿ20: ಲಂಕಾ ವಿರುದ್ಧ ಆಸೀಸ್‌ಗೆ 3-0 ಜಯ

ಕ್ಯಾನ್‌ಬೆರಾ: ಶ್ರೀಲಂಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಆಸ್ಪ್ರೇಲಿಯಾ 6 ವಿಕೆಟ್‌ಗಳ ಗೆಲುವು ಸಾಧಿಸಿ 5 ಪಂದ್ಯಗಳ ಸರಣಿಯಲ್ಲಿ 3-0 ಮುನ್ನಡೆ ಪಡೆಯುವ ಮೂಲಕ ಸರಣಿ ವಶಪಡಿಸಿಕೊಂಡಿದೆ. ಲಂಕಾ 20 ಓವರಲ್ಲಿ 6 ವಿಕೆಟ್‌ ನಷ್ಟಕ್ಕೆ ಕೇವಲ 121 ರನ್‌ ಗಳಿಸಿತು. ನಾಯಕ ದಸುನ್‌ ಶಾನಕ 39 ರನ್‌ ಗಳಿಸಿದರು. ಆಸೀಸ್‌ ಪರ ಕೇನ್‌ ರಿಚರ್ಡ್‌ಸನ್‌ 3 ವಿಕೆಟ್‌ ಕಿತ್ತರು. ಆಸೀಸ್‌ 16.5 ಓವರಲ್ಲಿ 4 ವಿಕೆಟ್‌ಗೆ 124 ರನ್‌ ಗಳಿಸಿತು. ಮ್ಯಾಕ್ಸ್‌ವೆಲ್‌ 39, ಫಿಂಚ್‌ 35 ರನ್‌ ಗಳಿಸಿದರು.

ಕೊಹ್ಲಿಯನ್ನು ಅವರ ಪಾಡಿಗೆ ಬಿಡಿ: ರೋಹಿತ್‌

ಕೋಲ್ಕತಾ: ವಿರಾಟ್‌ ಕೊಹ್ಲಿಗೆ (Virat Kohli) ಒತ್ತಡಗಳನ್ನು ಹೇಗೆ ನಿಭಾಯಿಸಬೇಕು ಎಂಬುದು ತಿಳಿದಿದೆ. ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ ಎಂದು ಟೀಂ ಇಂಡಿಯಾ ಸೀಮಿತ ಓವರ್‌ ನಾಯಕ ರೋಹಿತ್‌ ಶರ್ಮಾ ಹೇಳಿದ್ದರೆ. 

Ind vs WI: ವಿಂಡೀಸ್‌ ಟಿ20 ಚಾಲೆಂಜ್‌ಗೆ ಟೀಂ ಇಂಡಿಯಾ ಸಜ್ಜು..!

ವೆಸ್ಟ್‌ಇಂಡೀಸ್‌ ವಿರುದ್ಧದ ಟಿ20 ಸರಣಿಗೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೊಹ್ಲಿಯ ಲಯದ ಕುರಿತಾದ ಚರ್ಚೆ ಮಾಧ್ಯಮದವರಿಂದಲೇ ಪ್ರಾರಂಭವಾಗಿದೆ. ನೀವು ಸಂಯಮ ಕಾಪಾಡಿದರೆ ಎಲ್ಲವೂ ಸರಿಯಾಗಲಿದೆ. ಆತ್ಮವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಹೇಳುವುದು ಸರಿಯಲ್ಲ. ದಶಕಕ್ಕೂ ಹೆಚ್ಚು ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಭಾಗವಾಗಿರುವ ಅವರಿಗೆ ಒತ್ತಡ ನಿಭಾಯಿಸಲು ಗೊತ್ತಿದೆ’ ಎಂದಿದ್ದಾರೆ.