Asianet Suvarna News Asianet Suvarna News

Ind vs SA ಭಾರತಕ್ಕೆ ಸರಣಿ ಉಳಿಸಿಕೊಳ್ಳುವ ಒತ್ತಡ

* ಭಾರತ-ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಏಕದಿನ ಪಂದ್ಯಕ್ಕೆ ಕ್ಷಣಗಣನೆ
* ಶಿಖರ್ ಧವನ್ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ
* ದೀಪಕ್‌ ಚಹರ್‌ ಗಾಯಗೊಂಡು ಹೊರಬಿದ್ದಿರುವುದು ಟೀಂ ಇಂಡಿಯಾಗೆ ಆಘಾತ

India vs South Africa Do or Die match for Team India kvn
Author
First Published Oct 9, 2022, 11:42 AM IST | Last Updated Oct 9, 2022, 11:42 AM IST

ರಾಂಚಿ(ಅ.09): ಆಸ್ಪ್ರೇಲಿಯಾ ತಲುಪಿ ಟಿ20 ವಿಶ್ವಕಪ್‌ಗೆ ಕಠಿಣ ಅಭ್ಯಾಸ ಆರಂಭಿಸಿರುವ ಟೀಂ ಇಂಡಿಯಾ ಒಂದು ಕಡೆಯಾದರೆ, ಮತ್ತೊಂದೆಡೆ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಉಳಿಸಿಕೊಳ್ಳುವ ಒತ್ತಡದಲ್ಲಿ ಮತ್ತೊಂದು ಟೀಂ ಇಂಡಿಯಾ ಇದೆ. ಶಿಖರ್‌ ಧವನ್‌ ನೇತೃತ್ವದ ತಂಡ ತವರಿನಲ್ಲಿ ನಡೆಯುತ್ತಿರುವ ಸರಣಿಯ ಮೊದಲ ಪಂದ್ಯವನ್ನು ಸೋತಿದ್ದ ಕಾರಣ, 3 ಪಂದ್ಯಗಳ ಸರಣಿಯನ್ನು ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ, ಭಾನುವಾರದ ಪಂದ್ಯದಲ್ಲಿ ಗೆಲ್ಲಲೇಬೇಕಿದೆ.

ದೀಪಕ್‌ ಚಹರ್‌ ಗಾಯಗೊಂಡು ಹೊರಬಿದ್ದಿರುವ ಪರಿಣಾಮ, ಭಾರತಕ್ಕೆ ಆಯ್ಕೆ ಗೊಂದಲ ಶುರುವಾಗಿದೆ. ತಂಡದ ಬೌಲರ್‌ಗಳಿಂದ ಸುಧಾರಿತ ಪ್ರದರ್ಶನ ಅಗತ್ಯವಿದ್ದು, ಬ್ಯಾಟರ್‌ಗಳು ತಮ್ಮ ಆಟದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕಿದೆ. ಪ್ರಮುಖವಾಗಿ ಟಿ20 ವಿಶ್ವಕಪ್‌ನ ಮೀಸಲು ಪಡೆಯಲ್ಲಿರುವ ಶ್ರೇಯಸ್‌ ಅಯ್ಯರ್‌ ಸ್ಥಿರ ಪ್ರದರ್ಶನ ತೋರಬೇಕಿದೆ. ಕಳೆದ ಪಂದ್ಯದಲ್ಲಿ ಮಿಂಚಿದ್ದ ಸಂಜು ಸ್ಯಾಮ್ಸನ್‌ ಮತ್ತೊಂದು ದೊಡ್ಡ ಇನ್ನಿಂಗ್‌್ಸನ ನಿರೀಕ್ಷೆಯಲ್ಲಿದ್ದಾರೆ.

ದಕ್ಷಿಣ ಆಫ್ರಿಕಾಗೆ ಇದು ಮಹತ್ವದ ಸರಣಿ ಎನಿಸಿದೆ. 2023ರ ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲು ಸೂಪರ್‌ ಲೀಗ್‌ ಅಂಕಗಳನ್ನು ಸಂಪಾದಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ದ.ಆಫ್ರಿಕಾ ಗೆಲುವಿಗೆ ಸಕಲ ಪ್ರಯತ್ನ ನಡೆಸಲಿದೆ.

Ind vs SA: ದೀಪಕ್ ಚಹರ್ ಬದಲಿಗೆ ಟೀಂ ಇಂಡಿಯಾ ಕೂಡಿಕೊಂಡ ವಾಷಿಂಗ್ಟನ್‌ ಸುಂದರ್..!

ಚಹರ್ ಬದಲು ವಾಷಿಂಗ್ಟನ್‌

ಗಾಯಗೊಂಡು ಸರಣಿಯಿಂದ ಹೊರಬಿದ್ದ ವೇಗಿ ದೀಪಕ್ ಬದಲಿಗೆ ಆಲ್ರೌಂಡರ್ ವಾಷಿಂಗ್ಟನ್‌ ಸುಂದರ್ ಭಾರತ ಕ್ರಿಕೆಟ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.  ವಾಷಿಂಗ್ಟನ್‌ ಈ ಫೆಬ್ರವರಿಯಲ್ಲಿ ಕೊನೆ ಬಾರಿಗೆ ಏಕದಿನ ಪಂದ್ಯವನ್ನಾಡಿದರು.

ಸಂಭವನೀಯರ ಪಟ್ಟಿ

ಭಾರತ: ಶಿಖರ್ ಧವನ್‌(ನಾಯಕ), ಶುಭ್‌ಮನ್‌ ಗಿಲ್‌, ಋುತುರಾಜ್‌ ಗಾಯಕ್ವಾಡ್‌, ಇಶಾನ್‌ ಕಿಶನ್‌, ಶ್ರೇಯಸ್‌ ಅಯ್ಯರ್, ಸಂಜು ಸ್ಯಾಮ್ಸನ್‌, ಶಾರ್ದೂಲ್‌ ಠಾಕೂರ್, ರವಿ ಬಿಷ್ಣೋಯ್‌/ಶಾಬಾಜ್‌ ಅಹಮದ್, ಆವೇಶ್‌ ಖಾನ್, ಕುಲ್ದೀಪ್‌ ಯಾದವ್, ಮೊಹಮ್ಮದ್ ಸಿರಾಜ್‌.

ದ.ಆಫ್ರಿಕಾ: ಕ್ವಿಂಟನ್ ಡಿ ಕಾಕ್‌, ಡೇವಿಡ್ ಮಲಾನ್‌, ತೆಂಬಾ ಬವುಮಾ(ನಾಯಕ), ಏಯ್ಡನ್‌ ಮಾರ್ಕ್ರಮ್‌, ಹೆನ್ರಿಚ್ ಕ್ಲಾಸೆನ್‌, ಡೇವಿಡ್ ಮಿಲ್ಲರ್‌, ವೇಯ್ನ್‌ ಪಾರ್ನೆಲ್‌/ಆಂಡಿಲೆ ಫೆಲುಕ್ವಾಯೋ, ಕೇಶವ್ ಮಹಾರಾಜ್‌, ಕಗಿಸೋ ರಬಾಡ, ತಬ್ರಿಜ್‌ ಶಮ್ಸಿ, ಲುಂಗಿ ಎನ್‌ಗಿಡಿ

ಪಂದ್ಯ: ಮಧ್ಯಾಹ್ನ 1.30ಕ್ಕೆ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

Latest Videos
Follow Us:
Download App:
  • android
  • ios