ಜೂ.9ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಪಂದ್ಯದ ಟಿಕೆಟ್‌ಗಳು ಅಸಲಿ ಮೌಲ್ಯಕ್ಕಿಂತ 5ರಿಂದ 10 ಪಟ್ಟು ಹೆಚ್ಚು ಮೊತ್ತಕ್ಕೆ ಮಾರಾಟವಾಗುತ್ತಿವೆ. ಪಂದ್ಯದ ಟಿಕೆಟ್‌ಗಳನ್ನು ಮುಂಚಿತವಾಗಿಯೇ ಖರೀದಿಸಿದ್ದವರು ಅನಧಿಕೃತ ಟಿಕೆಟ್‌ ಮಾರಾಟ ವೆಬ್‌ಸೈಟ್‌ಗಳಲ್ಲಿ ಟಿಕೆಟ್‌ ಮಾರಾಟಕ್ಕಿಟ್ಟಿದ್ದಾರೆ.

ನವದೆಹಲಿ: ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ನಡುವಿನ ಐಸಿಸಿ ಟಿ20 ವಿಶ್ವಕಪ್‌ ಪಂದ್ಯಕ್ಕೆ ಇನ್ನು 2 ವಾರಕ್ಕಿಂತ ಕಡಿಮೆ ಸಮಯ ಉಳಿದಿದೆ. ಈಗಾಗಲೇ ಐಸಿಸಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪಂದ್ಯದ ಬಹುತೇಕ ಟಿಕೆಟ್‌ಗಳನ್ನು ಮಾರಾಟ ಮಾಡಿದ್ದರೂ, ಕಾಳಸಂತೆಯಲ್ಲಿ ಹಾಗೂ ಥರ್ಡ್‌ ಪಾರ್ಟಿ ವೆಬ್‌ಸೈಟ್‌ (ಅನಿಧಿಕೃತ)ಗಳಲ್ಲಿ ಟಿಕೆಟ್‌ಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ.

ಜೂ.9ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಪಂದ್ಯದ ಟಿಕೆಟ್‌ಗಳು ಅಸಲಿ ಮೌಲ್ಯಕ್ಕಿಂತ 5ರಿಂದ 10 ಪಟ್ಟು ಹೆಚ್ಚು ಮೊತ್ತಕ್ಕೆ ಮಾರಾಟವಾಗುತ್ತಿವೆ. ಪಂದ್ಯದ ಟಿಕೆಟ್‌ಗಳನ್ನು ಮುಂಚಿತವಾಗಿಯೇ ಖರೀದಿಸಿದ್ದವರು ಅನಧಿಕೃತ ಟಿಕೆಟ್‌ ಮಾರಾಟ ವೆಬ್‌ಸೈಟ್‌ಗಳಲ್ಲಿ ಟಿಕೆಟ್‌ ಮಾರಾಟಕ್ಕಿಟ್ಟಿದ್ದಾರೆ. 

IPL 2024 ಆರ್‌ಸಿಬಿ vs ರಾಜಸ್ಥಾನ ಎಲಿಮಿನೇಟರ್‌ಗೆ ವೇದಿಕೆ ಫಿಕ್ಸ್..!

15,000ರಿಂದ 20,000 ರು. ಮೌಲ್ಯದ ಟಿಕೆಟ್‌ಗಳು ಕನಿಷ್ಠ 1.1 ಲಕ್ಷ ರು.ಗೆ ಮಾರಾಟವಾಗುತ್ತಿವೆ. ಐಸಿಸಿ ಅಧಿಕೃತ ವೆಬ್‌ಸೈಟ್‌ನಲ್ಲಿ 2000-2750 ಅಮೆರಿಕನ್‌ ಡಾಲರ್‌ (ಅಂದಾಜು 1.6 ಲಕ್ಷ ರು.-2.29 ಲಕ್ಷ ರು.) ಮೌಲ್ಯದ ಕೆಲವೇ ಕೆಲವು ಟಿಕೆಟ್‌ಗಳಷ್ಟೇ ಲಭ್ಯವಿದ್ದು, ಈ ಟಿಕೆಟ್‌ಗಳಿಗೆ ಅನಧಿಕೃತ ವೆಬ್‌ಸೈಟ್‌ಗಳಲ್ಲಿ 8.6 ಲಕ್ಷ ರು. ಬೆಲೆ ನಿಗದಿಪಡಿಸಲಾಗಿದೆ.

ಬೇಸ್‌ಬಾಲ್‌ ಟಿಕೆಟ್‌ಗಿಂತ ದುಬಾರಿ!

ಅಮೆರಿಕದ ಅತ್ಯಂತ ಜನಪ್ರಿಯ ಕ್ರೀಡೆಯಾದ ಬೇಸ್‌ಬಾಲ್‌ನ ನ್ಯೂಯಾರ್ಕ್‌ ಯ್ಯಾನ್ಕೀಸ್‌-ಬೋಸ್ಟನ್‌ ರೆಡ್‌ ಸಾಕ್ಸ್ ತಂಡಗಳ ನಡುವಿನ ಪಂದ್ಯ ಭಾರತ-ಪಾಕ್‌ ಪಂದ್ಯದಷ್ಟೇ ಮಹತ್ವ ಪಡೆದಿದೆ. ಈ ಬದ್ಧವೈರಿಗಳ ನಡುವಿನ ಪಂದ್ಯದ ಟಿಕೆಟ್‌ನ ಗರಿಷ್ಠ ಮೊತ್ತಕ್ಕಿಂತ ಭಾರತ-ಪಾಕ್‌ ಪಂದ್ಯದ ಟಿಕೆಟ್‌ನ ಕನಿಷ್ಠ ಮೊತ್ತ ಹೆಚ್ಚು. ಯಾನ್ಕೀಸ್‌ ಹಾಗೂ ರೆಡ್‌ ಸಾಕ್ಸ್‌ ನಡುವೆ ಜೂ.15ರಂದು ಪಂದ್ಯವಿದ್ದು, ಈ ಪಂದ್ಯದ ಟಿಕೆಟ್‌ನ ಗರಿಷ್ಠ ಬೆಲೆ 1028 ಅಮೆರಿಕನ್‌ ಡಾಲರ್‌ (ಅಂದಾಜು 1.07 ಲಕ್ಷ ರು.) ಆದರೆ, ಭಾರತ-ಪಾಕ್‌ ಪಂದ್ಯದ ಟಿಕೆಟ್‌ನ ಕನಿಷ್ಠ ದರವೇ 1.1 ಲಕ್ಷ ರು. ಇದೆ.

RCB ಗೆಲುವಿಗೆ ಧೋನಿ ಮುಗಿಲೆತ್ತರದ ಸಿಕ್ಸರ್ ಕಾರಣ..! ಚೆನ್ನೈ ಗಾಯದ ಮೇಲೆ ಉಪ್ಪು ಸುರಿದ ಡಿಕೆ

ಮೇ 25ರಂದು ಭಾರತದ ಮೊದಲ ಬ್ಯಾಚ್‌ ಅಮೆರಿಕಕ್ಕೆ

ನವದೆಹಲಿ: ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಮೇ 25ರಂದು ಭಾರತ ತಂಡದ ಮೊದಲ ಬ್ಯಾಚ್‌ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದೆ. ಐಪಿಎಲ್‌ ಪ್ಲೇ-ಆಫ್‌ಗೇರದ ತಂಡಗಳಲ್ಲಿದ್ದ ಆಟಗಾರರು ಮೊದಲ ಬ್ಯಾಚ್‌ನಲ್ಲಿ ಪ್ರಯಾಣಿಸಲಿದ್ದಾರೆ. 

ನಾಯಕ ರೋಹಿತ್‌ ಶರ್ಮಾ, ಹಾರ್ದಿಕ್‌ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್‌ ಯಾದವ್, ರಿಷಭ್ ಪಂತ್‌, ಅಕ್ಷರ್‌ ಪಟೇಲ್, ಅರ್ಶ್‌ದೀಪ್ ಸಿಂಗ್‌ ಹಾಗೂ ಕೋಚ್‌ಗಳಾದ ರಾಹುಲ್‌ ದ್ರಾವಿಡ್‌, ಪರಾಸ್‌ ಮ್ಹಾಂಬ್ರೆ, ವಿಕ್ರಮ್‌ ರಾಥೋಡ್‌ ಸೇರಿ ಇನ್ನುಳಿದ ಸಹಾಯಕ ಸಿಬ್ಬಂದಿ ಮೇ 25ರಂದೇ ಅಮೆರಿಕಕ್ಕೆ ತೆರಳಲಿದ್ದಾರೆ. ಮೇ 25ರಂದೇ ಅಮೆರಿಕಕ್ಕೆ ತೆರಳಲಿದ್ದಾರೆ. 

ಐಪಿಎಲ್‌ ಪ್ಲೇ-ಆಫ್‌ನಲ್ಲಿ ಆಡುವ ತಂಡಗಳಲ್ಲಿರುವ ಉಳಿದ ಆಟಗಾರರು ಟೂರ್ನಿ ಕೊನೆಗೊಂಡ ಬಳಿಕ ಅಂದರೆ ಮೇ 27ರಂದು ಅಮೆರಿಕಕ್ಕೆ ವಿಮಾನ ಹತ್ತಲಿದ್ದಾರೆ. ಭಾರತ ಜೂ.1ರಂದು ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯವಾಡಲಿದ್ದು, ಜೂ.5ರಂದು ಐರ್ಲೆಂಡ್‌ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.