ಮಾ.22ಕ್ಕೆ ಆರಂಭಗೊಂಡ ಐಪಿಎಲ್‌ ಲೀಗ್‌ ಹಂತದ ಪಂದ್ಯಗಳು ಭಾನುವಾರ ಮುಕ್ತಾಯಗೊಂಡಿತು. ಅಂಕಪಟ್ಟಿಯಲ್ಲಿ 20 ಅಂಕದೊಂದಿಗೆ ಅಗ್ರಸ್ಥಾನ ಪಡೆದ ಕೋಲ್ಕತಾ ನೈಟ್‌ ರೈಡರ್ಸ್‌ ಹಾಗೂ 2ನೇ ಸ್ಥಾನ ಪಡೆದ ಸನ್‌ರೈಸರ್ಸ್‌ ಹೈದರಾಬಾದ್‌(17 ಅಂಕ) ತಂಡಗಳು ಮಂಗಳವಾರ(ಮೇ 21) ಅಹಮದಾಬಾದ್‌ನಲ್ಲಿ ಕ್ವಾಲಿಫೈಯರ್‌-1ರಲ್ಲಿ ಸೆಣಸಾಡಲಿವೆ. ಗೆದ್ದ ತಂಡ ನೇರವಾಗಿ ಫೈನಲ್‌ ಪ್ರವೇಶಿಸಲಿದೆ.

ಅಹಮದಾಬಾದ್‌: 17ನೇ ಆವೃತ್ತಿ ಐಪಿಎಲ್‌ನ ಪ್ಲೇ-ಆಫ್‌ ವೇಳಾಪಟ್ಟಿ ಅಂತಿಮಗೊಂಡಿದ್ದು, ಚೊಚ್ಚಲ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಆರ್‌ಸಿಬಿ ಎಲಿಮಿನೇಟರ್‌ ಪಂದ್ಯದಲ್ಲಿ ಬುಧವಾರ ಮಾಜಿ ಚಾಂಪಿಯನ್‌ ರಾಜಸ್ಥಾನ ರಾಯಲ್ಸ್‌ ವಿರುದ್ಧ ಸೆಣಸಾಡಲಿದೆ.

ಮಾ.22ಕ್ಕೆ ಆರಂಭಗೊಂಡ ಐಪಿಎಲ್‌ ಲೀಗ್‌ ಹಂತದ ಪಂದ್ಯಗಳು ಭಾನುವಾರ ಮುಕ್ತಾಯಗೊಂಡಿತು. ಅಂಕಪಟ್ಟಿಯಲ್ಲಿ 20 ಅಂಕದೊಂದಿಗೆ ಅಗ್ರಸ್ಥಾನ ಪಡೆದ ಕೋಲ್ಕತಾ ನೈಟ್‌ ರೈಡರ್ಸ್‌ ಹಾಗೂ 2ನೇ ಸ್ಥಾನ ಪಡೆದ ಸನ್‌ರೈಸರ್ಸ್‌ ಹೈದರಾಬಾದ್‌(17 ಅಂಕ) ತಂಡಗಳು ಮಂಗಳವಾರ(ಮೇ 21) ಅಹಮದಾಬಾದ್‌ನಲ್ಲಿ ಕ್ವಾಲಿಫೈಯರ್‌-1ರಲ್ಲಿ ಸೆಣಸಾಡಲಿವೆ. ಗೆದ್ದ ತಂಡ ನೇರವಾಗಿ ಫೈನಲ್‌ ಪ್ರವೇಶಿಸಲಿದೆ.

IPL 2024: ಇಂದು ಫೈನಲ್‌ ಟಿಕೆಟ್‌ಗೆ ಕೆಕೆಆರ್‌-ಸನ್‌ರೈಸರ್ಸ್‌ ಬಿಗ್ ಫೈಟ್‌

ಮತ್ತೊಂದೆಡೆ ಗುಂಪಿನಲ್ಲಿ 3ನೇ ಸ್ಥಾನ ಪಡೆದ ರಾಜಸ್ಥಾನ ರಾಯಲ್ಸ್‌(17 ಅಂಕ) ಹಾಗೂ 14 ಅಂಕದೊಂದಿಗೆ 4ನೇ ಸ್ಥಾನಿಯಾದ ಆರ್‌ಸಿಬಿ ಮೇ 22ರಂದು ಎಲಿಮಿನೇಟರ್‌ನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೂ ಅಹಮದಾಬಾದ್ ಆತಿಥ್ಯ ವಹಿಸಲಿದೆ.

ಈ ಪಂದ್ಯದಲ್ಲಿ ಗೆದ್ದ ತಂಡ ಕ್ವಾಲಿಫೈಯರ್‌-2ಕ್ಕೆ ಪ್ರವೇಶಿಸಲಿದ್ದು, ಕ್ವಾಲಿಫೈರ್‌-1ರಲ್ಲಿ ಸೋತ ತಂಡದ ವಿರುದ್ಧ ಶುಕ್ರವಾರ ಚೆನ್ನೈ ಕ್ರೀಡಾಂಗಣದಲ್ಲಿ ಸೆಣಸಾಡಲಿದೆ. ಅದರಲ್ಲಿ ಗೆದ್ದ ತಂಡ ಫೈನಲ್‌ ಪ್ರವೇಶಿಸಲಿದೆ. ಫೈನಲ್‌ ಪಂದ್ಯ ಮೇ 26ಕ್ಕೆ ಚೆನ್ನೈನಲ್ಲಿ ನಿಗದಿಯಾಗಿದೆ.

ಐಪಿಎಲ್‌ ಪ್ಲೇ-ಆಫ್‌ ವೇಳಾಪಟ್ಟಿ

ಪಂದ್ಯ ತಂಡಗಳು ದಿನಾಂಕ ಸ್ಥಳ

ಕ್ವಾಲಿಫೈರ್‌-1 ಕೆಕೆಆರ್‌-ಹೈದ್ರಾಬಾದ್‌ ಮೇ 21 ಅಹಮದಾಬಾದ್

ಎಲಿಮಿನೇಟರ್‌ ಆರ್‌ಸಿಬಿ-ರಾಜಸ್ಥಾನ ಮೇ 22 ಅಹಮದಾಬಾದ್‌

ಕ್ವಾಲಿಫೈರ್‌-2 ಕ್ವಾಲಿಫೈರ್‌-1ರಲ್ಲಿ ಗೆದ್ದ ತಂಡ-ಎಲಿಮಿನೇಟರ್‌ ಸೋತ ತಂಡ ಮೇ 24 ಚೆನ್ನೈ

ಫೈನಲ್‌ ಕ್ವಾಲಿಫೈರ್‌-1ರಲ್ಲಿ ಗೆದ್ದ ತಂಡ-ಕ್ವಾಲಿಫೈರ್‌-2ರಲ್ಲಿ ಗೆದ್ದ ತಂಡ ಮೇ 26 ಚೆನ್ನೈ