ICC World Cup 2023 ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮುನ್ನ ಅದ್ಧೂರಿ ಸಮಾರಂಭ?
ವಿಶ್ವಕಪ್‌ಗೆ ಮುನ್ನಾ ದಿನ ಅಂದರೆ ಅ.4ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಈ ಮೊದಲು ವರದಿಯಾಗಿತ್ತು. ಆದರೆ ಬಿಸಿಸಿಐ ಸಮಾರಂಭ ಆಯೋಜಿಸಿರಲಿಲ್ಲ. ಅದರ ಬದಲಾಗಿ ಭಾರತ-ಪಾಕ್ ಪಂದ್ಯಕ್ಕೆ ಮುನ್ನ ಕಾರ್ಯಕ್ರಮ ನಡೆಸಲು ಬಿಸಿಸಿಐ ಸಿದ್ಧತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಅಹಮದಾಬಾದ್(ಅ.12): ಏಕದಿನ ವಿಶ್ವಕಪ್ ಆರಂಭಕ್ಕೂ ಮುನ್ನ ಉದ್ಘಾಟನಾ ಸಮಾರಂಭ ಆಯೋಜಿಸದೆ ಅಚ್ಚರಿ ಮೂಡಿಸಿದ್ದ ಬಿಸಿಸಿಐ, ಇದೀಗ ಅ.14ರಂದು ಅಹಮದಾಬಾದ್‌ನಲ್ಲೇ ನಡೆಯಲಿರುವ ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೂ ಮುನ್ನ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ವಿಶ್ವಕಪ್‌ಗೆ ಮುನ್ನಾ ದಿನ ಅಂದರೆ ಅ.4ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಈ ಮೊದಲು ವರದಿಯಾಗಿತ್ತು. ಆದರೆ ಬಿಸಿಸಿಐ ಸಮಾರಂಭ ಆಯೋಜಿಸಿರಲಿಲ್ಲ. ಅದರ ಬದಲಾಗಿ ಭಾರತ-ಪಾಕ್ ಪಂದ್ಯಕ್ಕೆ ಮುನ್ನ ಕಾರ್ಯಕ್ರಮ ನಡೆಸಲು ಬಿಸಿಸಿಐ ಸಿದ್ಧತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಸ್ಲೆಡ್ಜಿಂಗ್ ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಶಾಕ್, ನಗು ನಗುತ್ತಲೇ ಮಾತನಾಡಿ ತಬ್ಬಿಕೊಂಡ ಕೊಹ್ಲಿ-ನವೀನ್!
ಖ್ಯಾತ ಗಾಯಕ ಅರಿಜಿತ್ ಸಿಂಗ್ ಸೇರಿದಂತೆ ಪ್ರಮುಖ ಬಾಲಿವುಡ್ ತಾರೆಯರು ಪ್ರದರ್ಶನ ನೀಡಲಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್, ಹಿರಿಯ ನಟರಾದ ಅಮಿತಾಭ್ ಬಚ್ಚನ್, ರಜಿನಿಕಾಂತ್ ಸೇರಿದಂತೆ ಪ್ರಮುಖರು ಪಂದ್ಯ ವೀಕ್ಷಣೆಗೆ ಕ್ರೀಡಾಂಗಣಕ್ಕೆ ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಅಹಮದಾಬಾದ್ ತಲುಪಿದ ಬ್ಯಾಟರ್ ಶುಭ್‌ಮನ್ ಗಿಲ್
ಚೆನ್ನೈ: ಡೆಂಘಿ ಜ್ವರದಿಂದ ಚೇತರಿಸಿಕೊಳ್ಳುತ್ತಿರುವ ಭಾರತದ ತಾರಾ ಬ್ಯಾಟರ್ ಶುಭ್‌ಮನ್ ಗಿಲ್ ಬುಧವಾರ ಸಂಜೆ ಅಹಮದಾಬಾದ್ ತಲುಪಿದ್ದು, ತಂಡ ಕೂಡಿಕೊಳ್ಳಲಿದ್ದಾರೆ. ಅವರ ಆರೋಗ್ಯ ಸುಧಾರಿಸುತ್ತಿದ್ದು, ಪಾಕಿಸ್ತಾನ ವಿರುದ್ಧ ಅ.14ರಂದು ನಡೆಯಲಿರುವ ಪಂದ್ಯದಲ್ಲಿ ಆಡಿಸುವ ಬಗ್ಗೆ ಪಂದ್ಯದ ಹಿಂದಿನ ದಿನ ಭಾರತ ತಂಡದ ಆಡಳಿತ ನಿರ್ಧರಿಸಲಿದೆ ಎಂದು ತಿಳಿದುಬಂದಿದೆ.
ವಿಶ್ವಕಪ್‌ನಲ್ಲಿ ಭಾರತಕ್ಕೆ ಸತತ 2ನೇ ಗೆಲುವು, ರೋಹಿತ್ ಅಬ್ಬರಕ್ಕೆ ಶರಣಾದ ಆಫ್ಘಾನಿಸ್ತಾನ!
ಮೋದಿ ಸ್ಟೇಡಿಯಂಗೆ ಬಾಂಬ್ ಬೆದರಿಕೆ ಹಾಕಿದವನ ಬಂಧನ
ಅಹಮದಾಬಾದ್: ಏಕದಿನ ವಿಶ್ವಕಪ್‌ನ ಭಾರತ ಹಾಗೂ ಪಾಕಿಸ್ತಾನ ನಡುವೆ ಪಂದ್ಯ ನಡೆಯುವ ವೇಳೆ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕರಣ್ ಮಾವಿ ಎಂದು ಗುರುತಿಸಲಾಗಿದ್ದು, ಈತನನ್ನು ರಾಜ್‌ಕೋಟ್‌ನಲ್ಲಿ ಬಂಧಿಸಲಾಗಿದೆ. ಕರಣ್‌ನನ್ನು ಈ ಮೊದಲು 2018ರಲ್ಲಿ ಅತ್ಯಾಚಾರ ಹಾಗೂ ಇತರ ಕೆಲ ಪ್ರಕರಣಗಳಲ್ಲಿ ಬಂಧಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅ.14ರಂದು ಕ್ರೀಡಾಂಗಣದಲ್ಲಿ ಸ್ಫೋಟಗೊಳ್ಳಲಿದೆ ಹಾಗೂ ಎಲ್ಲರೂ ನಡುಗಲಿದ್ದಾರೆ ಎಂದು ಕರಣ್ ತನ್ನ ಮೊಬೈಲ್‌ನಿಂದ ಬಿಸಿಸಿಐಗೆ ಇಮೇಲ್ ಮೂಲಕ ಸಂದೇಶ ರವಾನಿಸಿದ್ದ ಎಂದು ಪೊಲೀಸ್ ಇಲಾಖೆ ತಿಳಿಸಿದೆ.