Asianet Suvarna News Asianet Suvarna News

ಸ್ಲೆಡ್ಜಿಂಗ್ ನಿರಿಕ್ಷಿಸಿದ್ದ ಅಭಿಮಾನಿಗಳಿಗೆ ಶಾಕ್, ನಗು ನಗುತ್ತಲೇ ಮಾತನಾಡಿ ತಬ್ಬಿಕೊಂಡ ಕೊಹ್ಲಿ-ನವೀನ್!

ಐಪಿಎಲ್ ಟೂರ್ನಿಯಲ್ಲಿ ಆಫ್ಘಾನ್ ವೇಗಿ ನವೀನ್ ಉಲ್ ಹಕ್ ಹಾಗೂ ವಿರಾಟ್ ಕೊಹ್ಲಿ ನಡುವಿನ ಕಿತ್ತಾಟ ಭಾರಿ ಸದ್ದು ಮಾಡಿತ್ತು. ಇದೇ ಸ್ಲೆಡ್ಜಿಂಗ್ ವಿಶ್ವಕಪ್‌ನಲ್ಲೂ ಇರಲಿದೆ ಎಂದುಕೊಂಡ ಅಭಿಮಾನಿಗಳಿಗೆ ಅಚ್ಚರಿಯಾಗಿದೆ. ಕಾರಣ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಗು ನಗುತ್ತಲೇ ಮಾತನಾಡಿದ್ದಾರೆ. ಇಷ್ಟೇ ಅಲ್ಲ ತಬ್ಬಿಕೊಂಡು ಶುಭಾಶಯ ವಿನಿಮಯ ಮಾಡಿದ್ದಾರೆ. 

ICC World cup Virat kohli and Naveen Ul haq ends 5 month old sledging in IND vs AFG Match ckm
Author
First Published Oct 11, 2023, 10:38 PM IST

ದೆಹಲಿ(ಅ.11) ಭಾರತ ಹಾಗೂ ಆಫ್ಘಾನಿಸ್ತಾನ ವಿಶ್ವಕಪ್ ಲೀಗ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಡುವೆ ಸ್ಲೆಡ್ಜಿಂಗ್ ಕುರಿತು ಅಭಿಮಾನಿಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡಿತ್ತು. ಇತ್ತ ಅಭಿಮಾನಿಗಳು ಪಂದ್ಯದ ವೇಳೆ ನವೀನ್ ಮೈದಾನಕ್ಕಿಳಿಯುತ್ತಿದ್ದಂತೆ ಕೊಹ್ಲಿ , ಕೊಹ್ಲಿ ಘೋಷಣೆ ಕೂಗಿ ಉರಿಸುವ ಪ್ರಯತ್ನ ಮಾಡಿದ್ದರು. ಆದರೆ ಭಾರಿ ಸ್ಲೆಡ್ಜಿಂಗ್ ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಅಚ್ಚರಿಯಾಗಿದೆ. ಕಾರಣ ವಿರಾಟ್ ಕೊಹ್ಲಿ, ನವೀನ್ ಜೊತೆ ನಗು ನಗುತ್ತಲೇ ಮಾತನಾಡಿದ್ದಾರೆ. ಇನ್ನು ನವೀನ್ ತಬ್ಬಿಕೊಂಡು ಶುಭಾಶಯ ವಿನಿಮಯ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಭಾರತ ಹಾಗೂ ಆಫ್ಘಾನಿಸ್ತಾನ ಪಂದ್ಯದಲ್ಲಿ ರೋಹಿತ್ ಶರ್ಮಾ ಸೆಂಚುರಿ, ಭಾರತದ ಗೆಲುವಿಗಿಂತ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಡುವಿನ ಆತ್ಮೀಯತೆ ಸಂಚಲನ ಸೃಷ್ಟಿಸಿದೆ. ಐಪಿಎಲ್ ಟೂರ್ನಿಲ್ಲಿ ತಾರಕಕ್ಕೇರಿದ್ದ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಡುವಿನ ಸ್ಲೆಡ್ಜಿಂಗ್ ಟೂರ್ನಿ ಮುಗಿದರೂ ಸಾಮಾಜಿಕ ಮಾಧ್ಯಮದ ಮೂಲಕ ಮುಂದುವರಿದಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಇವರಿಬ್ಬರ ನಡುವೆ ಹಳೇ ಕಿತ್ತಾಟ ಮುಂದುವರಿಯಲಿದೆ ಅನ್ನೋ ಚರ್ಚೆ ಜೋರಾಗಿತ್ತು.

ವಿಶ್ವಕಪ್‌ನಲ್ಲಿ ಭಾರತಕ್ಕೆ ಸತತ 2ನೇ ಗೆಲುವು, ರೋಹಿತ್ ಅಬ್ಬರಕ್ಕೆ ಶರಣಾದ ಆಫ್ಘಾನಿಸ್ತಾನ!

ಆದರೆ ಪಂದ್ಯದ ನಡುವೆ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಗು ನಗುತ್ತಲೇ ಮಾತನಾಡಿದ್ದಾರೆ. ಇತ್ತ ನವೀನ್ ತಬ್ಬಿಕೊಂಡ ಕೊಹ್ಲಿ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಕೊಹ್ಲಿ-ನವೀನ್ ಸ್ಲೆಡ್ಜಿಂಗ್‌ಗಾಗಿ ಕಾದು ಕುಳಿತಿದ್ದ ಅಭಿಮಾನಿಗಳು ನಿರಾಸೆಯಾಗಿದೆ. ಈ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 

ಜಂಟ್ಲಮೆನ್ ಗೇಮ್‌ನಲ್ಲಿ ಎಲ್ಲಕ್ಕಿಂತ ಮುಖ್ಯ ಕ್ರೀಡಾಸ್ಪೂರ್ತಿ. ತದ್ವಿರುದ್ದವಾಗಿದ್ದ ಕ್ರಿಕೆಟಿಗರು ಇದೀಗ ನಗುನಗುತ್ತಲೇ ಮಾತನಾಡಿ 5 ತಿಂಗಳ ಹಳೇ ಕಿತ್ತಾಟಕ್ಕೆ ಅಂತ್ಯ ಹಾಡಿದ್ದಾರೆ. ಟ್ವಿಟರ್ ಸೇರಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಡೆಯನ್ನು ಹೊಗಳಿದ್ದಾರೆ. 

ಆಫ್ಘಾನಿಸ್ತಾನ ನೀಡಿದ 273 ರನ್ ಟಾರ್ಗೆಟ್ ಚೇಸ್ ಮಾಡಿದ ಟೀಂ ಇಂಡಿಯಾ 35 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ರೋಹಿತ್ ಶರ್ಮಾ ಸ್ಫೋಟಕ ಸೆಂಚುರಿಯಿಂದ ಭಾರತ ಸುಲಭವಾಗಿ ಗುರಿ ತಲುಪಿತು.

Follow Us:
Download App:
  • android
  • ios