Breaking: ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಪ್ರಕಟ, ದುಬೈನಲ್ಲಿ ಇಂಡಿಯಾ-ಪಾಕ್‌ ಮ್ಯಾಚ್‌ ಡೇಟ್‌ ಫಿಕ್ಸ್!

9ನೇ ಆವೃತ್ತಿಯ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿಯನ್ನು ಐಸಿಸಿ ಪ್ರಕಟ ಮಾಡಿದೆ. ಒಟ್ಟು 19 ದಿನಗಳ ಕಾಲ ಟೂರ್ನಿ ನಡೆಯಲಿದೆ.

India vs Pakistan Cricket on 23 February in Dubai ICC announces Champions Trophy 2025 schedule san

ಬೆಂಗಳೂರು (ಡಿ.24): 2027ರವರೆಗೂ ಭಾರತ ಹಾಗೂ ಪಾಕಿಸ್ತಾನ ತಂಡಗಳು ಪರಸ್ಪರ ತಮ್ಮ ತವರು ಮೈದಾನಗಳಲ್ಲಿ ಕಾದಾಟ ನಡೆಸುವುದಿಲ್ಲ ಎಂದು ಐಸಿಸಿ ಖಚಿತಪಡಿಸಿ ನಾಲ್ಕು ದಿನಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ 2025ರ ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿಯನ್ನು ಪ್ರಕಟ ಮಾಡಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್‌ ಚಾಂಪಿಯನ್ಸ್‌ ಟ್ರೋಫಿ ಕಾದಾಟ ಫೆಬ್ರವರಿ 23ರ ಭಾನುವಾರದಂದು ದುಬೈನಲ್ಲಿ ನಡೆಯಲಿದೆ. ಪಾಕಿಸ್ತಾನವನ್ನು ಹೊರತುಪಡಿಸಿ, ಭಾರತದ ಗುಂಪಿನಲ್ಲಿರುವ ಇತರ ಎರಡು ತಂಡಗಳು ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್. ಭಾರತವು ಫೆಬ್ರವರಿ 20 ರಂದು ಬಾಂಗ್ಲಾದೇಶವನ್ನು ಮತ್ತು ಮಾರ್ಚ್ 2 ರಂದು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಈ ಎರಡು ಪಂದ್ಯಗಳು ದುಬೈನಲ್ಲೂ ನಡೆಯಲಿದೆ. ಹಾಲಿ ಚಾಂಪಿಯನ್‌ ಹಾಗೂ ಆತಿಥೇಯ ರಾಷ್ಟ್ರ ಪಾಕಿಸ್ತಾನ ತಂಡ ಫೆಬ್ರವರಿ 19 ರಂದು ನ್ಯೂಜಿಲೆಂಡ್‌ ವಿರುದ್ಧ ಕರಾಚಿಯಲ್ಲಿ ಆಡುವ ಮೂಲಕ ಅಭಿಯಾನ ಆರಂಭ ಮಾಡಲಿದೆ. ಪಾಕಿಸ್ತಾನ ತಂಡದ ಅಂತಿಮ ಗ್ರೂಪ್‌ ಸ್ಟೇಜ್‌ ಮ್ಯಾಚ್‌ ಬಾಂಗ್ಲಾದೇಶದ ವಿರುದ್ಧ ಫೆಬ್ರವರಿ 27 ರಂದು ರಾವಲ್ಪಿಂಡಿಯಲ್ಲಿ ನಿಗದಿಯಾಗಿದೆ.

ಎರಡು ಸೆಮಿಫೈನಲ್‌ ಪಂದ್ಯಗಳು ಮಾರ್ಚ್‌ 4 ಹಾಗೂ ಮಾರ್ಚ್‌ 5 ರಂದು ನಿಗದಿಯಾಗಿದ್ದು, ಮಾರ್ಚ್‌ 9 ರಂದು ಫೈನಲ್‌ ಪಂದ್ಯ ನಡೆಯಲಿದೆ. ಫೈನಲ್‌ ಪಂದ್ಯಕ್ಕೆ ಮೀಸಲು ದಿನ ಕೂಡ ಇದೆ. ಭಾರತ ಅರ್ಹತೆ ಪಡೆಯಲಿ ಅಥವಾ ಪಡೆಯದೇ ಇರಲಿ ಮೊದಲ ಸೆಮಿಫೈನಲ್‌ನಲ್ಲಿ ಯುಎಇಯಲ್ಲಿ ನಡೆಯಲಿದೆ. ಫೈನಲ್‌ ಪಂದ್ಯ ಲಾಹೋರ್‌ನಲ್ಲಿ ನಿಗದಿಯಾಗಿದೆ. ಹಾಗೇನಾದರೂ ಭಾರತ ಫೈನಲ್‌ಗೆ ಬಂದಲ್ಲಿ ಈ ಪಂದ್ಯವನ್ನು ಯುಎಇಯಲ್ಲಿ ನಡೆಸುವ ಅವಕಾಶವನ್ನೂ ಇರಿಸಿಕೊಳ್ಳಲಾಗಿದೆ.

ಚಿಕ್ಕ ಶಾರ್ಟ್ಸ್‌ನಲ್ಲಿ ಮಾಸ್ಟರ್‌ ಆನಂದ್‌ ಹೆಂಡ್ತಿ ರೀಲ್ಸ್‌, 'ಡಿವೋರ್ಸ್‌ ಪಕ್ಕಾ' ವದಂತಿಗೆ ಫುಲ್‌ಸ್ಟಾಪ್‌ ಹಾಕಿದ ಯಶಸ್ವಿನಿ!

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಯುಎಇಯ ಹಿರಿಯ ಸಚಿವ ಮತ್ತು ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಮುಖ್ಯಸ್ಥ ಶೇಖ್ ನಹ್ಯಾನ್ ಅಲ್ ಮುಬಾರಕ್ ಅವರನ್ನು ಪಾಕಿಸ್ತಾನದಲ್ಲಿ ಭೇಟಿಯಾದ ನಂತರ ಭಾರತದ ಪಂದ್ಯಗಳನ್ನು ಯುಎಇಯಲ್ಲಿ ಇರಿಸುವ ನಿರ್ಧಾರ ಮಾಡಲಾಯಿತು. ಪಿಸಿಬಿ ಯುಎಇಯನ್ನು ಚಾಂಪಿಯನ್ಸ್ ಟ್ರೋಫಿಗೆ ತಟಸ್ಥ ಸ್ಥಳವಾಗಿ ಆಯ್ಕೆ ಮಾಡಿದೆ ಎಂದು ಪಿಸಿಬಿ ವಕ್ತಾರ ಅಮೀರ್ ಮಿರ್ ಸಭೆಯ ನಂತರ ತಿಳಿಸಿದ್ದರು.

Digital Arrest: 18 ದಿನದ ಅಂತರದಲ್ಲಿ 11.8 ಕೋಟಿ ರೂಪಾಯಿ ಕಳೆದುಕೊಂಡ ಬೆಂಗಳೂರು ಟೆಕ್ಕಿ!

ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ 

ಎ ಗುಂಪು: ಪಾಕಿಸ್ತಾನ, ಬಾಂಗ್ಲಾದೇಶ, ಭಾರತ, ನ್ಯೂಜಿಲೆಂಡ್‌; ಬಿ ಗುಂಪು: ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ
 
ದಿನಾಂಕ ಪಂದ್ಯ ಸ್ಥಳ
ಫೆ.19 ಪಾಕಿಸ್ತಾನ-ನ್ಯೂಜಿಲೆಂಡ್‌ ಕರಾಚಿ
ಫೆ.20 ಬಾಂಗ್ಲಾದೇಶ-ಭಾರತ ದುಬೈ
ಫೆ.21 ಅಫ್ಘಾನಿಸ್ತಾನ-ದಕ್ಷಿಣ ಆಫ್ರಿಕಾ ಕರಾಚಿ
ಫೆ.22 ಆಸ್ಟ್ರೇಲಿಯಾ-ಇಂಗ್ಲೆಂಡ್‌ ಲಾಹೋರ್‌
ಫೆ.23 ಪಾಕಿಸ್ತಾನ-ಭಾರತ ದುಬೈ
ಫೆ.24 ಬಾಂಗ್ಲಾದೇಶ-ನ್ಯೂಜಿಲೆಂಡ್‌ ರಾವಲ್ಪಿಂಡಿ
ಫೆ.25 ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ರಾವಲ್ಪಿಂಡಿ
ಫೆ.26 ಅಫ್ಘಾನಿಸ್ತಾನ-ಇಂಗ್ಲೆಂಡ್‌ ಲಾಹೋರ್‌
ಫೆ.27 ಪಾಕಿಸ್ತಾನ-ಬಾಂಗ್ಲಾದೇಶ ರಾವಲ್ಪಿಂಡಿ
ಫೆ.28 ಅಫ್ಘಾನಿಸ್ತಾನ-ಆಸ್ಟ್ರೇಲಿಯಾ ಲಾಹೋರ್‌
ಮಾ.1 ದಕ್ಷಿಣ ಆಫ್ರಿಕಾ-ಇಂಗ್ಲೆಂಡ್‌ ಕರಾಚಿ
ಮಾ.2 ನ್ಯೂಜಿಲೆಂಡ್‌-ಭಾರತ ದುಬೈ
ಮಾ.4 ಮೊದಲ ಸೆಮಿಫೈನಲ್‌ ದುಬೈ
ಮಾ.5 2ನೇ ಸೆಮಿಫೈನಲ್‌ ಲಾಹೋರ್‌
ಮಾ.9 ಫೈನಲ್‌ ಲಾಹೋರ್‌ (ಭಾರತ ಅರ್ಹತೆ ಪಡೆದರೆ ದುಬೈ)
ಮಾ.10 ಮೀಸಲು ದಿನ  

ಭಾರತದ ಎಲ್ಲಾ ಪಂದ್ಯಗಳು ಮಧ್ಯಾಹ್ನ 2.30ಕ್ಕೆ ಆರಂಭವಾಗಲಿದ್ದು, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ನೇರಪ್ರಸಾರ ಇರಲಿದೆ.

Latest Videos
Follow Us:
Download App:
  • android
  • ios