ಕರಾಚಿ(ಮೇ.16): ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಕೇವಲ ಉಭಯ ದೇಶ ಮಾತ್ರವಲ್ಲ ವಿಶ್ವದ ಗಮನ ಸೆಳೆಯುತ್ತದೆ. ಪಂದ್ಯದ ರೋಚಕತೆ, ವೈರತ್ವ, ಸ್ಲೆಡ್ಜಿಂಗ್, ವಾಕ್ಸಮರ ಸೇರಿದಂತೆ ಹಲವು ಪ್ರಸಂಗಗಳು ಅಭಿಮಾನಿಗಳ ಮನದಲ್ಲಿ ಹಚ್ಚ ಹಸುರಾಗಿ ನಿಂತಿದೆ. 2010ರ ಏಷ್ಯಾಕಪ್ ಟೂರ್ನಿ ಫೈನಲ್ ಪಂದ್ಯದಲ್ಲಿ ಭಾರತ ಪಾಕಿಸ್ತಾನ ಮುಖಾಮುಖಿಯಾಗಿತ್ತು. ಪಂದ್ಯ ಕುತೂಹಲ ತಲುಪುತ್ತಿದ್ದಂತೆ ಸ್ಲೆಡ್ಜಿಂಗ್ ಹೆಚ್ಚಾಯಿತು. ಸ್ಲೆಡ್ಜಿಂಗ್ ಹಾಗೂ ಪಂದ್ಯದ ನಂತರದ ಕತೆಯನ್ನು ಶೋಯೆಬ್ ಅಕ್ತರ್ ವಿವರಿಸಿದ್ದಾರೆ. 

ಧೋನಿ, ಕೊಹ್ಲಿಗಿಂತ ಸೌರವ್ ಗಂಗೂಲಿ ನಾಯಕತ್ವವೇ ಬೆಸ್ಟ್; ನೆಹ್ರಾ ಹೇಳಿದ್ರು ಕಾರಣ

ಕ್ರೀಸ್‌ನಲ್ಲಿದ್ದ ಹರ್ಭಜನ್ ಸಿಂಗ್ ಹಾಗೂ ಪಾಕಿಸ್ತಾನ ವೇಗಿ ಶೋಯೆಬ್ ಅಕ್ತರ್ ನಡುವೆ ಸ್ಲೆಡ್ಜಿಂಗ್ ಆರಂಭಗೊಂಡಿತ್ತು. ಅತ್ತ ಪಾಕಿಸ್ತಾನ ಆಟಗಾರರು, ಭಾರತೀಯ ಬ್ಯಾಟ್ಸ್‌ಮನ್‌ಗಳ ಕೆಣಕಿ ವಿಕೆಟ್ ಕಬಳಿಸಲು ಮುಂದಾಗಿದ್ದುರ. ಹೀಗಾಗಿ ಸ್ಲೆಡ್ಜಿಂಗ್ ತುಸು ಹೆಚ್ಚಾಗಿತ್ತು. ಅಂತಿಮ 47ನೇ ಓವರ್ ಮಾಡಿದ ಶೋಯಿಬ್ ಅಕ್ತರ್ ಹಾಗೂ ಹರ್ಭಜನ್ ನಡುವೆ ಮಾತಿನ ಚಕಮಕಿ ನಡೆಯಿತು.  ಅಕ್ತರ್ ಎಸೆತದಲ್ಲಿ ಹರ್ಭಜನ್ ಭರ್ಜರಿ ಸಿಕ್ಸರ್ ಸಿಡಿಸಿದ್ದರು.

ವಿದೇಶಿ ಆಟಗಾರರಿಲ್ಲದೆ IPL ಆಯೋಜನೆಗೆ CSK ವಿರೋಧ!

ಇದರಿಂದ ಕೋಪಗೊಂಡ ಅಕ್ತರ್ ಸತತ 2 ಬೌನ್ಸರ್ ಹಾಕಿ, ಹರ್ಭಜನ್‌ಗೆ ಈ ಎಸೆತಕ್ಕೂ ಸಿಕ್ಸರ್ ಸಿಡಿಸು, ಬೀಸಿದಾಗ ಸಿಕ್ಸರ್ ಹೋಯಿತೆಂದು ಖುಷಿಪಡಬೇಡ ಎಂದಿದ್ದರು. ಇತ್ತ ಕೆಣಕಿದರೆ ಸುಮ್ಮನೆ ಕೂರುವ ಜಾಯಮಾನ ಹರ್ಭಜನ್ ಸಿಂಗ್‌ಗೆ ಮೊದಲಿನಿಂದಲೇ ಇಲ್ಲ. ಭಜ್ಜಿ ಕೂಡ ಮಾತಿನಿಂದಲೇ ತಿರುಗೇಟು ನೀಡಿದರು. ಬಳಿಕ ನೇರವಾಗಿ ಅಕ್ತರ್ ಬಳಿ ಯುದ್ದಕ್ಕೆ ತೆರಳುವಂತೆ ಹೋಗಿದ್ದರು. ಅಷ್ಟರಲ್ಲೇ ಅಂಪೈರ್ ಸಮಾಧಾನ ಮಾಡಿ ತಾತ್ಕಾಲಿಕ ಬ್ರೇಕ್ ಹಾಕಿದರು.

ಅಕ್ತರ್ ಓವರ್ ಮುಗಿಸಿದರೂ ಜಗಳ ಮುಂದುವರಿದಿತ್ತು. ಭಾರತ 6 ವಿಕೆಟ್ ಕಳೆದುಕೊಂಡಿತ್ತು 49ನೇ ಓವರ್‌ನಲ್ಲಿ ಬೌನ್ಸರ್ ಮೂಲಕ ಕಂಟ್ರೋಲ್ ಮಾಡಿದ ಅಕ್ತರ್, ಭಜ್ಜಿ ಜೊತೆ ಎಗರಾಡಿದರು.  . ಭಾರತದ ಗೆಲುವಿಗೆ ಅಂತಿಮ 2 ಎಸೆತದಲ್ಲಿ 3 ರನ್ ಬೇಕಿತ್ತು ಈ ವೇಳೆ ಮೊಹಮ್ಮದ್ ಅಮೀರ್ ಎಸೆತದಲ್ಲಿ ಹರ್ಭಜನ್ ಸಿಂಗ್ ಭರ್ಜರಿ ಸಿಕ್ಸರ್ ಸಿಡಿಸಿ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು. ಭಜ್ಜಿ ಅಕ್ತರ್‌ನತ್ತ ಮುಖಮಾಡಿ ಕಿರುಚಾಡಿದ್ದಾರೆ. ಇದು ಪಂಜಾಬ್ ತಾಖತ್ತು ಎಂದಿದ್ದಾರೆ.

ಒಂದೆಡೆ ಸೋಲು, ಮತ್ತೊಂದೆಡೆ ಹರ್ಭಜನ್ ಸಿಂಗ್ ಮಾತಿನಿಂದ ಕೋಪಗೊಂಡಿದ್ದ ಶೋಯೆಬ್ ಅಕ್ತರ್, ಪಂದ್ಯದ ಬಳಿಕ ಹರ್ಭಜನ್ ಸಿಂಗ್ ಹುಡುಕಿಕೊಂಡು ಹೊಟೆಲ್ ರೂಂನತ್ತ ತೆರಳಿದ್ದರು. ಭಜ್ಜಿ ಜೊತೆ ಜಗಳವಾಡಲು ನಿರ್ಧರಿಸಿದ್ದರು. ತನ್ನೆಲ್ಲಾ ಕೋಪವನ್ನು ತೀರಿಸಿಕೊಳ್ಳಲು ಅಕ್ತರ್ ಸಜ್ಜಾಗಿದ್ದರು. ಆದರೆ ಹರ್ಭಜನ್ ಸಿಂಗ್ ಸಿಗಲೇ ಇಲ್ಲ. ಹುಡುಕಾಡಿದರೂ ಭಜ್ಜಿ ಸಿಗಲಿಲ್ಲ ಎಂದು ಶೋಯೆಬ್ ಅಕ್ತರ್ ಹಳೇ ಘಟನೆ ನೆನಪಿಸಿದ್ದಾರೆ.