ಭಾರತ vs ಕಿವೀಸ್ ಮಹಿಳಾ ಏಕದಿನ ಸರಣಿ ಇಂದು ಶುರು; ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ
ಭಾರತ ಹಾಗೂ ನ್ಯೂಜಿಲೆಂಡ್ ಮಹಿಳಾ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಹರ್ಮನ್‌ಪ್ರೀತ್ ಕೌರ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.
ಅಹಮದಾಬಾದ್: ಭಾರತ ಹಾಗೂ ನ್ಯೂಜಿಲೆಂಡ್ ಮಹಿಳಾ ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿ ಗುರುವಾರದಿಂದ ಆರಂಭಗೊಂಡಿದ್ದು, ಕಿವೀಸ್ ಎದುರು ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಎಲ್ಲಾ ಪಂದ್ಯಗಳು ಎಲ್ಲಾ ಪಂದ್ಯಗಳು ಅಹಮದಾಬಾದ್‌ನ ನರೇಂದ್ರ ಕ್ರೀಡಾಂಗಣ ದಲ್ಲಿ ನಡೆಯಲಿವೆ.
ಇತ್ತೀಚೆಗಷ್ಟೇ ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ತೋರಿ ಗುಂಪು ಹಂತದಲ್ಲೇ ಹೊರಬಿದ್ದಿದ್ದ ಭಾರತ ತಂಡ, ತವರಿನ ಏಕದಿನ ಸರಣಿಯಲ್ಲಿ ಸುಧಾರಿತ ಆಟವಾಡುವ ನಿರೀಕ್ಷೆಯಲ್ಲಿದೆ. ಪ್ರಮುಖವಾಗಿ ಹರ್ಮನ್ ಪ್ರೀತ್ ಕೌರ್ ನಾಯಕತ್ವದ ವಿಚಾರದಲ್ಲಿ ಈ ಸರಣಿ ಮಹತ್ವದ್ದು ಎನಿಸಿಕೊಂಡಿದೆ. 35 ವರ್ಷದ ಕೌರ್ ತಮ್ಮ ತಮ್ಮ ನಾಯಕತ್ವ ಉಳಿಸಿಕೊಳ್ಳಬೇಕಿದ್ದರೆ ಈ ಸರಣಿಯಲ್ಲಿ ಭಾರತ ಅಭೂತಪೂರ್ವ ಪ್ರದರ್ಶನ ತೋರಬೇಕಾದ ಅಗತ್ಯವಿದೆ.
12ನೇ ತರಗತಿ ಪರೀಕ್ಷೆಗಾಗಿ ಕಿವೀಸ್ ಸರಣಿಗೆ ರಿಚಾ ಘೋಷ್ ಚಕ್ಕರ್!
ಭಾರತ ತಂಡದಲ್ಲಿ ಹಿರಿಯರ ಜೊತೆ ಕೆಲ ಹೊಸ ಆಟಗಾರ್ತಿಯರೂ ಇದ್ದು, ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವ ಕಾತರದಲ್ಲಿದ್ದಾರೆ. ಅನುಭವಿ ಲೆಗ್‌ಸ್ಪಿನ್ನರ್ ಆಶಾ ಶೋಭನಾ ಅವರಿಗೆ ಗಾಯದ ಸಮಸ್ಯೆಯಿಂದಾಗಿ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇನ್ನು ಬೌಲಿಂಗ್ ಆಲ್ರೌಂಡರ್ ಪೂಜಾ ವಸ್ತ್ರಾಕರ್‌ಗೆ ವಿಶ್ರಾಂತಿ ನೀಡಲಾಗಿದೆ.
ಭಾರತ ಮಹಿಳಾ ಕ್ರಿಕೆಟ್ ತಂಡ:
ಹರ್ಮನ್‌ಪ್ರೀತ್ ಕೌರ್(ನಾಯಕಿ), ಸ್ಮೃತಿ ಮಂಧನಾ(ಉಪನಾಯಕಿ), ಶಫಾಲಿ ವರ್ಮಾ, ಹೇಮಲತಾ, ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗ್ಸ್, ಯಸ್ತಿಕಾ ಭಾಟಿಯಾ, ಉಮಾ ಚೆಟ್ರಿ, ಸಯಾಲಿ, ಅರುಂಧತಿ, ರೇಣುಕಾ ಸಿಂಗ್, ತೇಜಲ್, ಸೈಮಾ, ಪ್ರಿಯಾ ಮಿಶ್ರಾ, ರಾಧಾ ಯಾದವ್, ಶ್ರೇಯಾಂಕ ಪಾಟೀಲ್.
ಪಂದ್ಯ: ಮಧ್ಯಾಹ್ನ 1.30ಕ್ಕೆ
ನೇರಪ್ರಸಾರ: ಜಿಯೋ ಸಿನಿಮಾ, ಸ್ಪೋರ್ಟ್ಸ್ 18.
ಲಿಸ್ಟ್ ಎ: ನ್ಯೂಜಿಲೆಂಡ್‌ನ ಚಾಡ್ ಅತಿವೇಗದ ದ್ವಿಶತಕ
ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನ ಚಾಡ್ ಬೋವ್ ಲಿಸ್ಟ್ ಕ್ರಿಕೆಟ್‌ನಲ್ಲಿ ಅತಿವೇಗದ ದ್ವಿಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. ಕ್ಯಾಂಟರ್‌ಬರಿ ತಂಡದ ಚಾಡ್ ಅವರು ಫೋರ್ಡ್ ಟ್ರೋಫಿ 50 ಓವರ್ ಮಾದರಿ ಕ್ರಿಕೆಟ್‌ನಲ್ಲಿ ಒಟಾಗೊ ವಿರುದ್ಧ 103 ಎಸೆತದಲ್ಲಿ 200 ರನ್ ಪೂರ್ಣ ಗೊಳಿಸಿದರು. ಈ ಮೂಲಕ ಭಾರತದ ಜಗದೀಶನ್ ಹಾಗೂ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ದಾಖಲೆ ಮುರಿದರು.
ಐಸಿಸಿ ಟೆಸ್ಟ್ ರ್‍ಯಾಂಕಿಂಗ್: ವಿರಾಟ್ ಕೊಹ್ಲಿ ಹಿಂದಿಕ್ಕಿದ ರಿಷಭ್ ಪಂತ್
ಜಗದೀಶನ್ 2022ರಲ್ಲಿ ವಿಜಯ್ ಹಜಾರೆ ಟೂರ್ನಿಯಲ್ಲಿ ಅರುಣಾಚಲ ಪ್ರದೇಶ ವಿರುದ್ದ, ಹೆಡ್ 2021 -22ರ ಮಾರ್ಷ್ ಕಪ್‌ನಲ್ಲಿ ಕ್ವಿನ್ಸ್‌ಲೆಂಡ್ ವಿರುದ್ಧ ದಕ್ಷಿಣ ಆಸ್ಟ್ರೇಲಿಯಾ ಪರ 114 ಎಸೆತಗಳನ್ನು ಎದುರಿಸಿ ದ್ವಿಶತಕ ಬಾರಿಸಿದ್ದರು.