ಭಾರತ-ನ್ಯೂಜಿಲೆಂಡ್ ತಂಡಕ್ಕೆ ಮಳೆ ಅಡ್ಡಿಸ್ಕೈ ಸ್ಟೇಡಿಯಂ ನಡೆಯಲಿರುವ ಪಂದ್ಯ

ವೆಲ್ಲಿಂಗ್ಟನ್(ನ.18): ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯಕ್ಕೆ ಇಲ್ಲಿನ ಸ್ಕೈ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ಇದೀಗ ಉಭಯ ತಂಡಗಳು ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲು ಸಜ್ಜಾಗಿದ್ದು, ಈ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿದ್ದಾನೆ. ಮೈದಾನ ಒದ್ದೆಯಾಗಿರುವುದರಿಂದಾಗಿ ಟಾಸ್ ಕೂಡಾ ತಡವಾಗಲಿದೆ.

ಹೌದು, ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೊದಲ ಟಿ20 ಪಂದ್ಯದ ಟಾಸ್ ಇಂದು ಬೆಳಗ್ಗೆ 11.30 ಕ್ಕೆ ನಡೆಯಬೇಕಿತ್ತು. ಆದರೆ ಕೆಲ ಕಾಲ ತುಂತುರು ಮಳೆ ಹಾಗೂ ಮತ್ತೆ ಕೆಲ ಸಮಯ ಜೋರಾಗಿ ಮಳೆ ಸುರಿದಿದ್ದರಿಂದಾಗಿ ವೆಲ್ಲಿಂಗ್ಟನ್‌ ಸ್ಕೈ ಮೈದಾನವು ಕೊಂಚ ಒದ್ದೆಯಾಗಿದೆ. ಹೀಗಾಗಿ ಟಾಸ್ ಕೂಡಾ ತಡವಾಗಿ ನಡೆಯಲಿದೆ. 

Scroll to load tweet…

ಟಿ20 ವಿಶ್ವಕಪ್‌ ಮುಕ್ತಾಯಗೊಂಡಿದ್ದು, 2024ರಲ್ಲಿ ನಡೆಯುವ ಮುಂದಿನ ಟಿ20 ವಿಶ್ವಕಪ್‌ನತ್ತ ಎಲ್ಲರ ಚಿತ್ತ ನೆಟ್ಟಿದೆ. ಈ ನಡುವೆ 2023ರ ಏಕದಿನ ವಿಶ್ವಕಪ್‌ಗೂ ತಂಡಗಳು ಸಿದ್ಧತೆ ನಡೆಸಲಿವೆ.ಕಳೆದ ವಾರ ಮುಕ್ತಾಯಗೊಂಡ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು 3 ಪಂದ್ಯಗಳ ಟಿ20 ಸರಣಿಯಲ್ಲಿ ಶುಭಾರಂಭ ಮಾಡಲು ಎದುರು ನೋಡುತ್ತಿವೆ.

Ind vs NZ ಇಂದಿನಿಂದ ಭಾರತ vs ಕಿವೀಸ್ ಟಿ20 ಸೆಣಸಾಟ..!

ಪಿಚ್‌ ರಿಪೋರ್ಚ್‌

ನ್ಯೂಜಿಲೆಂಡ್‌ನ ಬಹುತೇಕ ಕ್ರೀಡಾಂಗಣಗಳು ಟಿ20ಯಲ್ಲಿ ದೊಡ್ಡ ಮೊತ್ತಕ್ಕೆ ಸಾಕ್ಷಿಯಾಗುತ್ತವೆಯಾದರೂ, ವೆಲ್ಲಿಂಗ್ಟನ್‌ನಲ್ಲಿ ಅಂತಹ ಟ್ರೆಂಡ್‌ ಇಲ್ಲ. ಇಲ್ಲಿ ಮೊದಲ ಇನ್ನಿಂಗ್‌್ಸನ ಸರಾಸರಿ ಮೊತ್ತ 162 ರನ್‌. ಕಳೆದ 20 ತಿಂಗಳಲ್ಲಿ ಇಲ್ಲಿ ಅಂ.ರಾ.ಟಿ20 ಪಂದ್ಯ ನಡೆದಿಲ್ಲ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಇಶಾನ್ ಕಿಶನ್‌, ಶುಭ್‌ಮನ್ ಗಿಲ್‌, ಶ್ರೇಯಸ್‌ ಅಯ್ಯರ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್‌, ಹಾರ್ದಿಕ್‌ ಪಾಂಡ್ಯ(ನಾಯಕ), ಹರ್ಷಲ್‌ ಪಟೇಲ್, ಭುವನೇಶ್ವರ್‌ ಕುಮಾರ್, ಅಶ್‌ರ್‍ದೀಪ್‌ ಸಿಂಗ್, ಯುಜುವೇಂದ್ರ ಚಹಲ್‌.

ನ್ಯೂಜಿಲೆಂಡ್‌: ಫಿನ್‌ ಆ್ಯಲೆನ್‌, ಡೆವೊನ್ ಕಾನ್‌ವೇ, ಕೇನ್ ವಿಲಿಯಮ್ಸನ್‌(ನಾಯಕ), ಗ್ಲೆನ್ ಫಿಲಿಫ್ಸ್‌, ಡೇರಲ್ ಮಿಚೆಲ್‌, ಜೇಮ್ಸ್ ನೀಶಮ್‌, ಮಿಚೆಲ್ ಸ್ಯಾಂಟ್ನರ್‌, ಟಿಮ್‌ ಸೌಥಿ, ಇಶ್‌ ಸೋಧಿ, ಆ್ಯಡಂ ಮಿಲ್ನೆ, ಲಾಕಿ ಫಗ್ರ್ಯೂಸನ್‌.

ಪಂದ್ಯ: ಮಧ್ಯಾಹ್ನ 12ಕ್ಕೆ, 
ನೇರ ಪ್ರಸಾರ: ಡಿಡಿ ಸ್ಪೋರ್ಟ್ಸ್