ಅರ್ಧಶತಕ ಬಾರಿಸಿದ ಮಯಾಂಕ್ ಅಗರ್‌ವಾಲ್

ಮಯಾಂಕ್ ಅಗರ್‌ವಾಲ್ ಕಿವೀಸ್ ನೆಲದಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ್ದಾರೆ. ಅಗತ್ಯ ಸಂದರ್ಭದಲ್ಲಿ ಅರ್ಧಶತಕ ಬಾರಿಸುವ ಮೂಲಕ ಮಯಾಂಕ್ ತಂಡಕ್ಕೆ ನೆರವಾಗಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.. 

India vs New Zealand 1st Test Mayank Agarwal Hits Fifty

ವೆಲ್ಲಿಂಗ್ಟನ್(ಫೆ.23): ಕನ್ನಡಿಗ ಮಯಾಂಕ್ ಅಗರ್‌ವಾಲ್ ಆಕರ್ಷಕ ಅರ್ಧಶತಕ ಪೂರೈಸಿದ್ದಾರೆ. 75 ಎಸೆತಗಳಲ್ಲಿ ಮಯಾಂಕ್ 6 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 51 ರನ್ ಬಾರಿಸಿದ್ದಾರೆ.

ಮೊದಲ ಇನಿಂಗ್ಸ್‌ನಲ್ಲಿ ಕೇವಲ 34 ರನ್‌ಗಳಿಗೆ ವಿಕೆಟ್ ಒಪ್ಪಿಸಿದ್ದ ಮಯಾಂಕ್, ಎರಡನೇ ಪಂದ್ಯದಲ್ಲಿ ಕೊನೆಗೂ ಅರ್ಧಶತಕ ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೃಥ್ವಿ ಶಾ ಬೇಗನೇ ವಿಕೆಟ್ ಒಪ್ಪಿಸಿದ್ದರಿಂದ ಚೇತೇಶ್ವರ್ ಪೂಜಾರ ಜತೆ ಮಯಾಂಕ್ ಎಚ್ಚರಿಕೆಯ ಬ್ಯಾಟಿಂಗ್ ನಡೆಸುತ್ತಿದ್ದಾರೆ, ಆರಂಭದಲ್ಲಿ ಮಂದಗತಿಯ ಬ್ಯಾಟಿಂಗ್ ಮಾಡುತ್ತಿದ್ದ ಮಯಾಂಕ್, ಪಿಚ್‌ಗೆ ಹೊಂದಿಕೊಳ್ಳುತ್ತಿದ್ದಂತೆ ಲೀಲಾಜಾಲವಾಗಿ ರನ್‌ ಗಳಿಸಲಾರಂಭಿಸಿದ್ದಾರೆ. ಈ ಅರ್ಧಶತಕವನ್ನು ಶತಕವನ್ನಾಗಿ ಬದಲಾಯಿಸುತ್ತಾರ ಎನ್ನುವುದನ್ನು ಕಾದು ನೋಡಬೇಕಿದೆ.

ಚಹಾ ವಿರಾಮದ ವೇಳೆಗೆ ಭಾರತ 2 ವಿಕೆಟ್ ಕಳೆದುಕೊಂಡು 78 ರನ್ ಬಾರಿಸಿದ್ದು, ಇನ್ನೂ 105 ರನ್‌ಗಳ ಹಿನ್ನಡೆಯಲ್ಲಿದೆ. ಪೂಜಾರ 81 ಎಸೆತಗಳಲ್ಲಿ 11 ರನ್‌ಗಳಿಸಿ ಟ್ರೆಂಟ್ ಬೌಲ್ಟ್‌ಗೆ ಎರಡನೇ ಬಲಿಯಾಗಿದ್ದಾರೆ. 

183 ರನ್‌ಗಳ ಮುನ್ನಡೆ ಪಡೆದ ಕಿವೀಸ್:
ಎರಡನೇ ದಿನದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 216 ರನ್ ಬಾರಿಸಿದ್ದ ನ್ಯೂಜಿಲೆಂಡ್ ಮೂರನೇ ದಿನ ತನ್ನ ಖಾತೆಗೆ 9 ರನ್ ಸೇರಿಸುವಷ್ಟರಲ್ಲಿ ವ್ಯಾಟ್ಲಿಂಗ್ ಹಾಗೂ ಸೌಥಿ ವಿಕೆಟ್ ಕಳೆದುಕೊಂಡಿತು. ಆ ಬಳಿಕ ಗ್ರಾಂಡ್‌ಹೋಮ್(43) ಹಾಗೂ ಕೈಲ್ ಜಾಮಿಸನ್(44) ಹಾಗೂ ಟ್ರೆಂಟ್ ಬೌಲ್ಟ್(38) ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ಮೊತ್ತವನ್ನು 340ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ನ್ಯೂಜಿಲೆಂಡ್ 183 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಪಡೆದಿದೆ.

Latest Videos
Follow Us:
Download App:
  • android
  • ios