ಟೀಂ ಇಂಡಿಯಾ 165ಕ್ಕೆ ಆಲೌಟ್, ಬೃಹತ್ ಮೊತ್ತದತ್ತ ಕಿವೀಸ್
ನ್ಯೂಜಿಲೆಂಡ್ ತಂಡವು ಎರಡನೇ ದಿನದಾಟದಲ್ಲಿ ಭಾರತ ವಿರುದ್ಧ ಮೇಲುಗೈ ಸಾಧಿಸುವ ಮುನ್ಸೂಚನೆ ನೀಡಿದೆ. ವಿಲಿಯಮ್ಸನ್-ಟೇಲರ್ ಜತೆಯಾಟ ಪ್ರಮುಖ ಪಾತ್ರವಹಿಸಲಿದೆ. ಈ ಕುರಿತಾದ ವಿವರ ಇಲ್ಲಿದೆ.
ವೆಲ್ಲಿಂಗ್ಟನ್(ಫೆ.22): ಎರಡನೇ ದಿನದಾಟದ ಆರಂಭದಲ್ಲಿ ಟಿಮ್ ಸೌಥಿ ಮಾರಕ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ ಕೇವಲ 165 ರನ್‌ಗಳಿಗೆ ಸರ್ವಪತನ ಕಂಡಿದೆ. ಇನ್ನು ಮೊದಲ ಇನಿಂಗ್ಸ್ ಆರಂಭಿಸಿರುವ ನ್ಯೂಜಿಲೆಂಡ್ ಚಹಾ ವಿರಾಮದ ವೇಳೆಗೆ 2 ವಿಕೆಟ್ ಕಳೆದುಕೊಂಡು 116 ರನ್ ಬಾರಿಸಿದೆ.
ಮೊದಲ ದಿನದಾಟದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 122 ರನ್ ಬಾರಿಸಿದ್ದ ಭಾರತ, ಎರಡನೇ ದಿನದಾಟದಾರಂಭದಲ್ಲೇ ನಾಟಕೀಯ ಕುಸಿತ ಕಂಡಿತು. ರಹಾನೆ(45) ತಮ್ಮ ಖಾತೆಗೆ 7 ರನ್ ಸೇರಿಸಿ ವಿಕೆಟ್ ಒಪ್ಪಿಸಿದರೆ, ಪಂತ್(19) ಬೇಗನೇ ವಿಕೆಟ್ ಒಪ್ಪಿಸಿದರು. ಪಂತ್ ವಿಕೆಟ್ ಒಪ್ಪಿಸಿದ ಮರು ಎಸೆತದಲ್ಲೇ ರವಿಚಂದ್ರನ್ ಅಶ್ವಿನ್ ಕೂಡಾ ವಿಕೆಟ್ ಒಪ್ಪಿಸಿ ಬಂದ ದಾರಿಯಲ್ಲೇ ಹಿಂತಿರುಗಿದರು. ಇನ್ನು ಕೊನೆಯಲ್ಲಿ ಮೊಹಮ್ಮದ್ ಶಮಿ(21) ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ನೆರವಾದರು.
ಮೊದಲ ದಿನ ಮಳೆಯಾಟ, ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳ ಪರದಾಟ..!
ಬೃಹತ್ ಮೊತ್ತದತ್ತ ಕಿವೀಸ್ : ಭಾರತವನ್ನು ಅಲ್ಪ ಮೊತ್ತಕ್ಕೆ ಆಲೌಟ್ ಮಾಡಿದ ನ್ಯೂಜಿಲೆಂಡ್ ಆರಂಭದಲ್ಲೇ ಟಾಮ್ ಲಾಥಮ್ ವಿಕೆಟ್ ಕಳೆದುಕೊಂಡಿತು. ಇಶಾಂತ್ ಶರ್ಮಾ ಬೌಲಿಂಗ್‌ನಲ್ಲಿ ಲಾಥಮ್ 11 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಸಾಕಷ್ಟು ಎಚ್ಚರಿಕೆಯ ಆಟವಾಡುತ್ತಿದ್ದ ಟಾಮ್ ಬ್ಲಂಡೆಲ್(30) ಅವರಿಗೂ ಇಶಾಂತ್ ಪೆವಿಲಿಯನ್ ಹಾದಿ ತೋರಿಸಿದರು. ಆ ಬಳಿಕ ಜತೆಯಾಗಿರುವ ನಾಯಕ ಕೇನ್ ವಿಲಿಯಮ್ಸನ್(46) ಹಾಗೂ ನೂರನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ರಾಸ್ ಟೇಲರ್(22) ಮೂರನೇ ವಿಕೆಟ್‌ಗೆ 43 ರನ್‌ಗಳ ಜತೆಯಾಟವಾಡುತ್ತಿದ್ದಾರೆ.