ಟೀಂ ಇಂಡಿಯಾ ಟಾಪ್ ಆರ್ಡರ್ ಬ್ಯಾಟರ್‌ಗಳ ಫಾರ್ಮ್ ಹೇಗಿದೆ? ಇಲ್ಲಿದೆ ಇಂಟ್ರೆಸ್ಟಿಂಗ್ ಅಂಕಿ-ಅಂಶ
ಬೆಂಗಳೂರು: ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಪಾಲಿಗೆ ಮುಂದಿನ ಎರಡು ತಿಂಗಳು ಅಗ್ನಿ ಪರೀಕ್ಷೆ ಎದುರಿಸುವ ಸಮಯ. ಟೀಂ ಇಂಡಿಯಾ ಮುಂಬರುವ ಏಷ್ಯಾಕಪ್ ಹಾಗೂ ತವರಿನಲ್ಲೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ. ಹೀಗಿರುವಾಗಲೇ ಕಳೆದೆರಡು ವರ್ಷಗಳಲ್ಲಿ ಟೀಂ ಇಂಡಿಯಾ ಬ್ಯಾಟರ್‌ಗಳ ಫಾರ್ಮ್ ಹೇಗಿದೆ ಎನ್ನುವುದನ್ನು ನೋಡೋಣ ಬನ್ನಿ.
1. ರೋಹಿತ್ ಶರ್ಮಾ:
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಕಳೆದ ಎರಡು ವರ್ಷಗಳಲ್ಲಿ ಟೀಂ ಇಂಡಿಯಾ ಪರ 17 ಏಕದಿನ ಪಂದ್ಯಗಳನ್ನಾಡಿ 45.14ರ ಬ್ಯಾಟಿಂಗ್ ಸರಾಸರಿಯಲ್ಲಿ 632 ರನ್ ಬಾರಿಸಿದ್ದಾರೆ. ಇದರಲ್ಲಿ ಒಂದು ಆಕರ್ಷಕ ಶತಕ ಕೂಡಾ ಸೇರಿದೆ.
2. ಶುಭ್‌ಮನ್ ಗಿಲ್
ರೋಹಿತ್ ಶರ್ಮಾ ಜತೆಗಾರ ಶುಭ್‌ಮನ್ ಗಿಲ್ ಸದ್ಯ ಅದ್ಭುತ ಫಾರ್ಮ್‌ನಲ್ಲಿದ್ದು, 24 ಏಕದಿನ ಪಂದ್ಯಗಳನ್ನಾಡಿ 69.40 ಸರಾಸರಿಯಲ್ಲಿ 1388 ರನ್ ಸಿಡಿಸಿದ್ದಾರೆ.
3. ವಿರಾಟ್ ಕೊಹ್ಲಿ:
ಟೀಂ ಇಂಡಿಯಾ ರನ್ ಮಷೀನ್, 3ನೇ ಕ್ರಮಾಂಕದಲ್ಲಿ ಅತ್ಯಂತ ನಂಬಿಗಸ್ಥ ಬ್ಯಾಟರ್ ವಿರಾಟ್ ಕೊಹ್ಲಿ, ಕಳೆದೆರಡು ವರ್ಷಗಳಲ್ಲಿ 21 ಏಕದಿನ ಪಂದ್ಯಗಳನ್ನಾಡಿ 38.36ರ ಬ್ಯಾಟಿಂಗ್ ಸರಾಸರಿಯಲ್ಲಿ 729 ರನ್ ಬಾರಿಸಿದ್ದಾರೆ.
4. ಶ್ರೇಯಸ್ ಅಯ್ಯರ್:
ಏಷ್ಯಾಕಪ್ ಟೂರ್ನಿಗೂ ಮುನ್ನ ಶ್ರೇಯಸ್ ಅಯ್ಯರ್ ಸಂಪೂರ್ಣ ಫಿಟ್ ಆಗಿದ್ದು, ತಂಡದ ಬಲ ಹೆಚ್ಚುವಂತೆ ಮಾಡಿದೆ. ಶ್ರೇಯಸ್ ಅಯ್ಯರ್ ಕಳೆದೆರಡು ವರ್ಷಗಳಲ್ಲಿ 20 ಏಕದಿನ ಪಂದ್ಯಗಳನ್ನಾಡಿ 51.12ರ ಬ್ಯಾಟಿಂಗ್ ಸರಾಸರಿಯಲ್ಲಿ 818 ರನ್ ಬಾರಿಸಿದ್ದಾರೆ.
5. ಇಶಾನ್ ಕಿಶನ್:
ಯುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್, ಅಗ್ರಕ್ರಮಾಂಕದ ಆರಂಭಿಕ ಬ್ಯಾಟರ್ ಆಗಿ ಗಮನಾರ್ಹ ಪ್ರದರ್ಶನ ತೋರಿದ್ದಾರೆ. ಕಿಶನ್ ಕೇವಲ 15 ಏಕದಿನ ಪಂದ್ಯಗಳನ್ನಾಡಿ 48.76ರ ಬ್ಯಾಟಿಂಗ್ ಸರಾಸರಿಯಲ್ಲಿ 634 ರನ್ ಬಾರಿಸಿದ್ದಾರೆ.
6. ಹಾರ್ದಿಕ್ ಪಾಂಡ್ಯ:
ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಟೀಂ ಇಂಡಿಯಾ ಪರ 14 ಏಕದಿನ ಪಂದ್ಯಗಳನ್ನಾಡಿ 34.54ರ ಬ್ಯಾಟಿಂಗ್ ಸರಾಸರಿಯಲ್ಲಿ 380 ರನ್ ಬಾರಿಸಿದ್ದಾರೆ.
7. ರವೀಂದ್ರ ಜಡೇಜಾ:
ಎಡಗೈ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಕಳೆದೆರಡು ವರ್ಷಗಳಲ್ಲಿ ಕೇವಲ 9 ಏಕದಿನ ಪಂದ್ಯಗಳನ್ನಾಡಿ 37.25ರ ಬ್ಯಾಟಿಂಗ್ ಸರಾಸರಿಯಲ್ಲಿ ಕೇವಲ 149 ರನ್ ಬಾರಿಸಿದ್ದಾರೆ.
8. ಅಕ್ಷರ್ ಪಟೇಲ್:
ಯುವ ಎಡಗೈ ಆಲ್ರೌಂಡರ್ ಅಕ್ಷರ್ ಪಟೇಲ್, ಕಳೆದೆರಡು ವರ್ಷಗಳಿಂದ ಟೀಂ ಇಂಡಿಯಾ ಪರ ಬ್ಯಾಟಿಂಗ್&ಬೌಲಿಂಗ್‌ನಲ್ಲಿ ಮಿಂಚಿದ್ದಾರೆ. ಅಕ್ಷರ್ ಪಟೇಲ್ ಭಾರತ ಪರ 14 ಏಕದಿನ ಪಂದ್ಯಗಳನ್ನಾಡಿ 29ರ ಸರಾಸರಿಯಲ್ಲಿ 232 ರನ್ ಬಾರಿಸಿದ್ದಾರೆ.