ಅಹಮದಾಬಾದ್‌(ಫೆ.21): ನವೀಕರಣದ ಬಳಿಕ ವಿಶ್ವದ ಅತಿದೊಡ್ಡ ಕ್ರಿಕೆಟ್‌ ಕ್ರೀಡಾಂಗಣ ಎನ್ನುವ ಹಿರಿಮೆ ಗಳಿಸಿರುವ ಮೊಟೇರಾ ಕ್ರೀಡಾಂಗಣದ ಸೊಬಗಿಗೆ ಕ್ರಿಕೆಟಿಗರು ಮನಸೋತಿದ್ದಾರೆ. 

ಹಾಲಿ , ಮಾಜಿ ಕ್ರಿಕೆಟಿಗರು, ಕ್ರಿಕೆಟ್‌ ಆಡಳಿತಗಾರರು, ಅನೇಕ ಕ್ರಿಕೆಟ್‌ ಮಂಡಳಿಗಳ ಅಧಿಕಾರಿಗಳು ಮೊಟೇರಾ ಕ್ರೀಡಾಂಗಣದ ಬಗ್ಗೆ ಟ್ವೀಟರ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕ್ರೀಡಾಂಗಣದೊಳಗಿರುವ ಸೌಲಭ್ಯಗಳು ವಿಶ್ವ ಶ್ರೇಷ್ಠ ಗುಣಮಟ್ಟದ್ದಾಗಿದೆ ಎಂದು ಭಾರತ ತಂಡದ ಆಟಗಾರರು ಸಾಮಾಜಿಕ ತಾಣಗಳಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಕ್ರೀಡಾಂಗಣದ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿವೆ.

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೂರನೇ ಟೆಸ್ಟ್‌ ಪಂದ್ಯವು ಫೆಬ್ರವರಿ 24ರಿಂದ ಆರಂಭವಾಗಲಿದ್ದು, ಈ ಅಂತಾರಾಷ್ಟ್ರೀಯ ಪಂದ್ಯಕ್ಕೆ ಮೊಟೇರಾ ಕ್ರೀಡಾಂಗಣ ಆತಿಥ್ಯವನ್ನು ವಹಿಸಲಿದೆ. ಈ ಮೈದಾನದಲ್ಲಿ ಒಂದು ಲಕ್ಷದ ಹತ್ತು ಸಾವಿರ ಮಂದಿ ಏಕಕಾಲದಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸಬಹುದಾಗಿದೆ. 

INDvsENG 3ನೇ ಟೆಸ್ಟ್‌ ಟಿಕೆಟ್‌ ಸೋಲ್ಡೌಟ್‌: ಸೌರವ್‌ ಗಂಗೂಲಿ

ಇಂಗ್ಲೆಂಡ್‌ ವಿರುದ್ದದ 4 ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಎರಡು ಟೆಸ್ಟ್ ಹಾಗೂ 5 ಪಂದ್ಯಗಳ ಟಿ20 ಸರಣಿಗೆ ಮೊಟೇರಾ ಕ್ರೀಡಾಂಗಣ ಆತಿಥ್ಯವನ್ನು ವಹಿಸಲಿದ್ದು, ವಿಶ್ವದರ್ಜೆಯ ಈ ಬೃಹತ್ ಕ್ರೀಡಾಂಗಣಕ್ಕೆ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ, ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌, ಇಂಗ್ಲೆಂಡ್‌ ಕ್ರಿಕೆಟಿಗರಾದ ಸ್ಟುವರ್ಟ್ ಬ್ರಾಡ್‌, ಬೆನ್ ಸ್ಟೋಕ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.