ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ನಲ್ಲಿ ಭಾರತ ಗೆಲ್ಲಲು ಹಲವು ಸವಾಲುಗಳಿವೆ. 300ಕ್ಕೂ ಹೆಚ್ಚು ರನ್‌ಗಳನ್ನು ಚೇಸ್ ಮಾಡುವುದು ಕಠಿಣ, ಬೌಲರ್‌ಗಳು ಮಿಂಚಬೇಕು, ಮತ್ತು ಸ್ಪಿನ್ನರ್‌ಗಳು ಪಿಚ್‌ನ ಲಾಭ ಪಡೆಯಬೇಕು.

ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದೆ. ಪಂದ್ಯದ ನಾಲ್ಕನೇ ದಿನ ನಿರ್ಣಾಯಕವಾಗಲಿದೆ. ಈ ದಿನ ಯಾರು ಗೆಲ್ಲುತ್ತಾರೆ ಅಥವಾ ಪಂದ್ಯ ಡ್ರಾ ಕಡೆ ವಾಲಲಿದೆಯೇ ಎನ್ನುವುದರ ಕುರಿತಂತೆ ಸ್ಪಷ್ಟ ಮಾಹಿತಿ ಹೊರಬೀಳಲಿದೆ. ಭಾರತದ ಗೆಲುವು, ಇಂಗ್ಲೆಂಡ್‌ನ ಗೆಲುವು ಮತ್ತು ಡ್ರಾ ಹೀಗೆ ಮೂರೂ ಫಲಿತಾಂಶಗಳು ಹೊರಬೀಳುವ ಸಾಧ್ಯತೆಯಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 387 ರನ್‌ಗಳಿಗೆ ಆಲೌಟ್ ಆಯಿತು, ಭಾರತ ಕೂಡ 387 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 1 ರನ್ ಗಳಿಸಿದೆ. ಟೀಂ ಇಂಡಿಯಾ ಗೆಲ್ಲಬೇಕಾದರೆ ಲಾರ್ಡ್ಸ್‌ನಲ್ಲಿ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಲಾರ್ಡ್ಸ್‌ನಲ್ಲಿ 300 ರನ್ ಚೇಸ್ ಮಾಡುವುದು ಸುಲಭವಲ್ಲ

ಭಾರತೀಯ ತಂಡ ಲಾರ್ಡ್ಸ್‌ನಲ್ಲಿ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಬೇಕಿದೆ. ಇಲ್ಲಿ ಕಳೆದ 41 ವರ್ಷಗಳಿಂದ 300 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳನ್ನು ಚೇಸ್ ಮಾಡಿಲ್ಲ. ಹಾಗಾಗಿ ಭಾರತೀಯ ಬೌಲರ್‌ಗಳು ಇಂಗ್ಲೆಂಡ್‌ನ್ನು 300 ರನ್‌ಗಳ ಒಳಗೆ ಆಲೌಟ್ ಮಾಡಬೇಕು. ಇಲ್ಲಿ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಅತಿ ದೊಡ್ಡ ಚೇಸ್ ದಕ್ಷಿಣ ಆಫ್ರಿಕಾ ಮಾಡಿದೆ. ಕಳೆದ ತಿಂಗಳು WTC ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 282 ರನ್‌ಗಳನ್ನು ಚೇಸ್ ಮಾಡಿ ಗೆದ್ದಿತ್ತು. ಇದು ಭಾರತೀಯ ತಂಡದ ನೆನಪಿನಲ್ಲಿರಬೇಕು.

ಹೊಸ ಚೆಂಡಿನಿಂದ ಬುಮ್ರಾ-ಸಿರಾಜ್ ಉತ್ತಮ ಆರಂಭ ನೀಡಬೇಕು

ಜಸ್ಪ್ರೀತ್ ಬುಮ್ರಾ ಈಗ ವಿಶ್ವದ ಅತ್ಯಂತ ಅಪಾಯಕಾರಿ ವೇಗದ ಬೌಲರ್. ಲಾರ್ಡ್ಸ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಅವರು 5 ವಿಕೆಟ್ ಪಡೆದಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲೂ ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಮೊಹಮ್ಮದ್ ಸಿರಾಜ್ ಕೂಡ ಅವರಿಗೆ ಸಾಥ್ ನೀಡಬೇಕು. ಇಬ್ಬರೂ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಹೊಸ ಚೆಂಡಿನ ಲಾಭವನ್ನು ಅವರು ಪಡೆಯಬಹುದು. ನಾಲ್ಕನೇ ದಿನದ ಮೊದಲ ಸೆಷನ್‌ನಲ್ಲಿ 2-3 ವಿಕೆಟ್ ಪಡೆದರೆ ಪಂದ್ಯದ ತಿರುವು ಬದಲಾಗಬಹುದು.

ನಾಲ್ಕನೇ ದಿನ ಸ್ಪಿನ್ ಬೌಲರ್‌ಗಳು ಮಿಂಚಬೇಕು

ಮೂರು ದಿನಗಳ ಆಟದಲ್ಲಿ ಲಾರ್ಡ್ಸ್ ಪಿಚ್ ಸಂಪೂರ್ಣವಾಗಿ ಒಣಗಿದೆ ಎಂದು ಸ್ಪಷ್ಟವಾಗಿದೆ. ವೇಗದ ಬೌಲರ್‌ಗಳ ಬೂಟುಗಳಿಂದ ಪಿಚ್‌ನಲ್ಲಿ ರಫ್ ಕೂಡ ಆಗಿದೆ. ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಇದರ ಲಾಭ ಪಡೆಯಬೇಕು. ಇಬ್ಬರೂ ಉತ್ತಮ ಅನುಭವ ಹೊಂದಿದ್ದಾರೆ. ವಿಶೇಷವಾಗಿ ಜಡೇಜಾ ದೀರ್ಘಕಾಲದಿಂದ ಭಾರತಕ್ಕಾಗಿ ಆಡುತ್ತಿದ್ದಾರೆ ಮತ್ತು ಅನೇಕ ಸಂದರ್ಭಗಳಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದಾರೆ. ರಫ್‌ನ್ನು ಗುರಿಯಾಗಿಸಿಕೊಂಡು ಬೌಲಿಂಗ್ ಮಾಡಿದರೆ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ಕಷ್ಟವಾಗುತ್ತದೆ ಮತ್ತು ತಂಡ 270 ರಿಂದ 280 ರನ್‌ಗಳ ನಡುವೆ ಆಲೌಟ್ ಆಗಬಹುದು.

ಸದ್ಯ ಆತಿಥೇಯ ಇಂಗ್ಲೆಂಡ್ ತಂಡವು ಮೂರನೇ ದಿನದಾಟದಂತ್ಯದ ವೇಳೆಗೆ ಎರಡನೇ ಇನ್ನಿಂಗ್‌ನಲ್ಲಿ ಒಂದು ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ ಎರಡು ರನ್ ಗಳಿಸಿದೆ. ಭಾರತ ತಂಡವು ಎಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಇದಕ್ಕೂ ಮೊದಲು ಲೀಡ್ಸ್‌ನ ಹೆಡಂಗ್ಲೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಗೆಲುವು ಸಾಧಿಸಿತ್ತು. ಲಾರ್ಡ್ಸ್‌ ಟೆಸ್ಟ್‌ ಪಂದ್ಯವು ಸರಣಿ ಗೆಲ್ಲುವ ನಿಟ್ಟಿನಲ್ಲಿ ನಿರ್ಣಾಯಕವೆನಿಸಲಿದೆ. ಹೀಗಾಗಿ ಶತಾಯಗತಾಯ ಐತಿಹಾಸಿಕ ಲಾರ್ಡ್ಸ್ ಟೆಸ್ಟ್ ಪಂದ್ಯವನ್ನು ಗೆಲ್ಲಲು ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸುತ್ತಿವೆ.