ಇಂದೋರ್[ನ.14]: ಭಾರತ-ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ದುಕೊಂಡಿದೆ. ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದು, ಎರಡು ಪಂದ್ಯಗಳ ಟೆಸ್ಟ್ ಚಾಂಪಿಯನ್’ಶಿಪ್’ನ ಮೊದಲ ಪಂದ್ಯಕ್ಕೆ ಇಂದೋರ್’ನ ಹೋಲ್ಕರ್ ಮೈದಾನ ಆತಿಥ್ಯ ವಹಿಸಿದೆ.

ಬಾಂಗ್ಲಾದೇಶ ತಂಡವನ್ನು ಮೊಮಿನುಲ್ ಹಕ್ ಮುನ್ನಡೆಸಲಿದ್ದು, ಭಾರತಕ್ಕೆ ಕಠಿಣ ಪ್ರತಿರೋಧ ನೀಡುವ ನಿರೀಕ್ಷೆಯಲ್ಲಿದೆ. ಭಾರತ ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಆಡಿದ್ದ ಶಹಬಾಜ್ ನದೀಮ್ ಅವರನ್ನು ಕೈಬಿಟ್ಟು, ಇಶಾಂತ್ ಶರ್ಮಾಗೆ ಮಣೆ ಹಾಕಲಾಗಿದೆ.

ಗಂಗೂಲಿ BCCI ಅಧಿಕಾರವಧಿ ವಿಸ್ತರಿಸಲು ಆಗ್ರಹಿಸಿದ ಗಂಭೀರ್!

ಆರಂಭಿಕರಾಗಿ ಮಯಾಂಕ್ ಅಗರ್ ವಾಲ್, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ವೃದ್ದಿಮಾನ್ ಸಾಹ, ಆರ್. ಅಶ್ವಿನ್, ಉಮೇಶ್ ಯಾದವ್, ಮೊಹಮ್ಮದ್ ಶಮಿ ಹಾಗೂ ಇಶಾಂತ್ ಶರ್ಮಾ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.

ತಂಡಗಳು ಹೀಗಿವೆ:

ಭಾರತ:

ಬಾಂಗ್ಲಾದೇಶ: