ಟೀಂ ಇಂಡಿಯಾ ವಿರುದ್ದದ ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್, ಮಾಜಿ ಕ್ರಿಕೆಟಿಗ ಎಂ ಎಸ್ ಧೋನಿಯನ್ನು ನೆನಪಿಸಿಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಸಿಡ್ನಿ(ಡಿ.07): ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಕೆಲವು ತಿಂಗಳುಗಳೇ ಕಳೆದರೂ, ಮೈದಾನದಲ್ಲಿ ಅವರ ಚಾಣಾಕ್ಷ ವಿಕೆಟ್‌ ಕೀಪಿಂಗ್‌ ನೆನಪು ಮಾತ್ರ ಹಲವರಲ್ಲಿ ಅಚ್ಚಳಿಯದೇ ಉಳಿದಿದೆ. ಇದಕ್ಕೆ ಮತ್ತೊಂದು ನಿದರ್ಶನವೆಂಬಂತೆ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಹಾಗೂ ಹಂಗಾಮಿ ನಾಯಕ ಮ್ಯಾಥ್ಯೂ ವೇಡ್ ಟೀಂ ಇಂಡಿಯಾ ದಿಗ್ಗಜ ವಿಕೆಟ್‌ ಕೀಪರ್‌ ಧೋನಿಯನ್ನು ನೆನಪಿಸಿಕೊಂಡಿದ್ದಾರೆ.

ಹೌದು, ಈ ಘಟನೆ ನಡೆದಿದ್ದು, ಪಂದ್ಯದ 9ನೇ ಓವರ್‌ನಲ್ಲಿ ಶಿಖರ್ ಧವನ್ ಅವರನ್ನು ಸ್ಟಂಪೌಟ್‌ ಮಾಡಲು ಮ್ಯಾಥ್ಯೂ ವೇಡ್ ವಿಫಲವಾದಾಗ ಆಸೀಸ್‌ ಹಂಗಾಮಿ ನಾಯಕ ಧೋನಿಯನ್ನು ನೆನಪಿಸಿಕೊಂಡಿದ್ದಾರೆ. ಆಸೀಸ್‌ ಸ್ಪಿನ್ನರ್ ಸ್ವೆಪ್ಸನ್‌ ಆಫ್‌ಸೈಡ್‌ನ ಆಚೆಗೆ ವೈಡ್ ಎಸೆದ ಚೆಂಡನ್ನು ಧವನ್‌ ಕಟ್‌ ಮಾಡಲು ವಿಫಲವಾದರು. ಆದರೆ ಸ್ಟಂಪೌಟ್ ಮಾಡುವ ಅವಕಾಶವನ್ನು ಕೈಚೆಲ್ಲಿದರು. 2016ರಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ವೇಳೆ ಧೋನಿ ಇದೇ ರೀತಿಯ ಸಂದರ್ಭದಲ್ಲಿ ಬಾಂಗ್ಲದೇಶದ ಬ್ಯಾಟ್ಸ್‌ಮನ್‌ ಶಬ್ಬೀರ್ ರೆಹಮಾನ್ ಅವರನ್ನು ಸ್ಟಂಪೌಟ್ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಈ ಯುಗದ ಶ್ರೇಷ್ಠ ಬ್ಯಾಟ್ಸ್‌ಮನ್ & ಬೌಲರ್‌ಗಳನ್ನು ಹೆಸರಿಸಿದ ಬ್ರಿಯಾನ್ ಲಾರಾ..!

ಈ ವೇಳೆ ನಾನು ಧೋನಿಯಲ್ಲ, ಧೋನಿಯಷ್ಟು ಚುರುಕು ಇಲ್ಲ ಎಂದು ಧವನ್‌ಗೆ ಹೇಳಿದ ಮಾತು ಮೈಕ್‌ಸ್ಟಂಪ್‌ನಲ್ಲಿ ಸ್ಪಷ್ಟವಾಗಿ ಕೇಳಿಸಿದೆ. ಅದಕ್ಕೆ ಪ್ರತಿಯಾಗಿ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಅದು ಹೌದು ಎಂದು ನಗುತ್ತಲೆ ತಲೆಯಾಡಿಸಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Scroll to load tweet…

ಇದಕ್ಕೂ ಮೊದಲು 2ನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡವು ಟೀಂ ಇಂಡಿಯಾಗೆ 195 ರನ್‌ಗಳ ಗುರಿ ನೀಡಿತ್ತು. ಧವನ್ ಆಕರ್ಷಕ ಅರ್ಧಶತಕ ಹಾಗೂ ನಾಯಕ ವಿರಾಟ್ ಕೊಹ್ಲಿ ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಇನ್ನು ಎರಡು ಎಸೆಯಗಳು ಬಾಕಿ ಇರುವಂತೆಯೇ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದೆ. ಇದರೊಂದಿಗೆ 3 ಪಂದ್ಯಗಳ ಟಿ20 ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ.