ಐಸಿಸಿ ಟೂರ್ನಿ ಫೈನಲ್‌ನಲ್ಲಿ 3ನೇ ಬಾರಿಗೆ ಮುಖಾಮುಖಿ ಭಾರತ ಹಾಗೂ ಆಸೀಸ್ ಐಸಿಸಿ ಟೂರ್ನಿಗಳ ಫೈನಲ್‌ನಲ್ಲಿ 3ನೇ ಬಾರಿ ಮುಖಾಮುಖಿಯಾಗುತ್ತಿವೆ. 2003ರ ಏಕದಿನ ವಿಶ್ವಕಪ್ ಹಾಗೂ 2023ರ ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಈ ಎರಡು ತಂಡಗಳು ಸೆಣಸಿದ್ದವು. 2ಬಾರಿಯೂ ಭಾರತ ಸೋತಿತ್ತು.

ಅಹಮದಾಬಾದ್‌(ನ.19): ಕಳೆದ 3 ವಿಶ್ವಕಪ್‌ಗಳಲ್ಲಿ ಆತಿಥ್ಯ ವಹಿಸಿದ ರಾಷ್ಟ್ರಗಳೇ ಚಾಂಪಿಯನ್ ಆಗಿವೆ. 2011ರಲ್ಲಿ ಭಾರತ, 2015ರಲ್ಲಿ ಆಸ್ಟ್ರೇಲಿಯಾ, 2019ರಲ್ಲಿ ಇಂಗ್ಲೆಂಡ್ ಪ್ರಶಸ್ತಿ ಎತ್ತಿಹಿಡಿದಿದ್ದವು. ಈ ಸಲ ಭಾರತ ಮತ್ತೆ ಟ್ರೋಫಿ ಮೇಲೆ ಕಣ್ಣಿಟ್ಟಿದೆ.

ಐಸಿಸಿ ಟೂರ್ನಿ ಫೈನಲ್‌ನಲ್ಲಿ 3ನೇ ಬಾರಿಗೆ ಮುಖಾಮುಖಿ ಭಾರತ ಹಾಗೂ ಆಸೀಸ್ ಐಸಿಸಿ ಟೂರ್ನಿಗಳ ಫೈನಲ್‌ನಲ್ಲಿ 3ನೇ ಬಾರಿ ಮುಖಾಮುಖಿಯಾಗುತ್ತಿವೆ. 2003ರ ಏಕದಿನ ವಿಶ್ವಕಪ್ ಹಾಗೂ 2023ರ ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಈ ಎರಡು ತಂಡಗಳು ಸೆಣಸಿದ್ದವು. 2ಬಾರಿಯೂ ಭಾರತ ಸೋತಿತ್ತು.

ಭಾರತಕ್ಕೆ 12ನೇ, ಆಸೀಸ್‌ಗೆ ಇದು 13ನೇ ಐಸಿಸಿ ಫೈನಲ್

ಈ ಪಂದ್ಯ ಭಾರತಕ್ಕೆ 12ನೇ ಐಸಿಸಿ ಫೈನಲ್.ಏಕದಿನ ವಿಶ್ವಕಪ್‌ನಲ್ಲಿ1983, 2011ರಲ್ಲಿ ಗೆದ್ದಿರುವ ಭಾರತ, 2003ರ ಫೈನಲ್‌ನಲ್ಲಿ ಸೋತಿತ್ತು. ಟಿ20 ವಿಶ್ವಕಪ್‌ನಲ್ಲಿ 2007ರಲ್ಲಿ ಚಾಂಪಿಯನ್, 2014ರಲ್ಲಿ ರನ್ನರ್-ಅಪ್. ಚಾಂಪಿಯನ್ಸ್ ಟ್ರೋಫಿಯಲ್ಲಿ 2002, 2003ರಲ್ಲಿ ಪ್ರಶಸ್ತಿ ಗೆದ್ದು, 2000, 2017ರಲ್ಲಿ 2ನೇ ಸ್ಥಾನಿ ಯಾಗಿತ್ತು. ಇನ್ನು ವಿಶ್ವಟೆಸ್ಟ್ ಚಾಂಪಿಯನ್‌ಶಿಪ್‌ನ 2 ಆವೃತ್ತಿಗಳಲ್ಲೂ ಭಾರತ ರನ್ನರ್- ಅಪ್ ಆಗಿದೆ. 

ಇಂದು ಭಾರತ vs ಆಸ್ಟ್ರೇಲಿಯಾ ಮೆಗಾ ಫೈನಲ್ ಫೈಟ್..! ಟ್ರೋಫಿಗಾಗಿ ಮದಗಜಗಳ ಕಾಳಗ

ಅತ್ತ ಆಸೀಸ್ ಪಾಲಿಗೆ ಈ ಬಾರಿಯದ್ದು 13ನೇ ಫೈನಲ್. ಏಕದಿನ ವಿಶ್ವಕಪ್‌ನಲ್ಲಿ 1987, 1999, 2003, 2007, 2015ರಲ್ಲಿ ಟ್ರೋಫಿ ಗೆದ್ದಿದ್ದು, 1975, 1996ರಲ್ಲಿ ರನ್ನರ್-ಅಪ್ ಆಗಿತ್ತು. ಟಿ20 ವಿಶ್ವಕಪ್‌ನಲ್ಲಿ 2010ರ ಫೈನಲ್‌ನಲ್ಲಿ ಸೋತಿದ್ದ ಆಸೀಸ್, 2021ರಲ್ಲಿ ಪ್ರಶಸ್ತಿ ಗೆದ್ದಿತ್ತು. 2006, 2009ರ ಚಾಂಪಿಯನ್ಸ್ ಟ್ರೋಫಿ ಗೆದ್ದಿರುವ ಆಸೀಸ್, 2023ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಆಗಿದೆ.

ಪ್ರಧಾನಿ ನರೇಂದ್ರ ಮೋದಿ ಭಾಗಿ: ಫೈನಲ್ ಪಂದ್ಯಕ್ಕೆ ಪ್ರಧಾನಿ ಮೋದಿ ಸಾಕ್ಷಿಯಾಗಲಿದ್ದು, ಕೆಲ ಹೊತ್ತು ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲಿದ್ದಾರೆ. ಆಸ್ಟ್ರೇಲಿಯಾದ ಉಪ ಪ್ರಧಾನಿ ರಿಚರ್ಡ್ ಮಾರ್ಲ್ಸ್ ಕೂಡ ಫೈನಲ್ ವೀಕ್ಷಣೆಗೆ ಆಗಮಿಸಿದ್ದಾರೆ. ಸದ್ಗರು ಸೇರಿ ಅನೇಕ ಗಣ್ಯರು ಕ್ರೀಡಾಂಗಣದಲ್ಲಿ ಉಪಸ್ಥಿತರಿರಲಿದ್ದಾರೆ.

ಇಂದು ಭಾರತ vs ಆಸ್ಟ್ರೇಲಿಯಾ ಮೆಗಾ ಫೈನಲ್ ಫೈಟ್..! ಟ್ರೋಫಿಗಾಗಿ ಮದಗಜಗಳ ಕಾಳಗ

ತಂಡಗಳ ಫೈನಲ್ ಹಾದಿ ಹೀಗಿದೆ:

ಭಾರತ ಈ ಬಾರಿ ಆರಂಭದಲ್ಲೇ ಅಬ್ಬರಿಸಲು ಶುರು ಮಾಡಿ ಆಡಿರುವ 10 ಪಂದ್ಯಗಳಲ್ಲೂ ಗೆದ್ದು ಫೈನಲ್ ತಲುಪಿದೆ. ಲೀಗ್ ಹಂತದಲ್ಲಿ ಅಗ್ರಸ್ಥಾನಿಯಾಗಿದ್ದ ಭಾರತ ಸೆಮಿಫೈನಲ್‌ನಲ್ಲಿ ಕಳೆದೆರಡು ಬಾರಿ ರನ್ನರ್-ಅಪ್ ನ್ಯೂಜಿಲೆಂಡನ್ನು ಸೋಲಿಸಿತು. ಅತ್ತ ಆಸೀಸ್ ಪಯಣವೇ ರೋಚಕ. ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ ಭಾರತ, ದ.ಆಫ್ರಿಕಾಕ್ಕೆ ಶರಣಾಗಿದ್ದರೂ ಕುಗ್ಗದ ಆಸೀಸ್ ಬಳಿಕ ಸತತ 8 ಪಂದ್ಯ ಗೆದ್ದು ಪ್ರಶಸ್ತಿ ಸುತ್ತು ತಲುಪಿದೆ. ಸೆಮೀಸ್‌ನಲ್ಲಿ ತಂಡ ದ.ಆಫ್ರಿಕಾವನ್ನು ಸೋಲಿಸಿತು.