ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾಗೆ ಡೆಬ್ಯೂ ಮಾಡಿದ ವೈಭವ್ ಸೂರ್ಯವಂಶಿ 2 ಭರ್ಜರಿ ಸಿಕ್ಸರ್ ಸಿಡಿಸಿ ಅಭಿಮಾನಿಗಳ ಸಂಭ್ರಮ ಡಬಲ್ ಮಾಡಿದ್ದರು. ಆದರೆ ವೈಭವ್ ಸೂರ್ಯವಂಶಿ ಅಬ್ಬರ ಕೇವಲ 2 ಸಿಕ್ಸರ್‌ಗೆ ಸೀಮಿತವಾಯಿತು.
ಮ್ಯಾಂಚೆಸ್ಟರ್ (ಜು.04) ಅಭಿಮಾನಿಗಳ ಕೂಗು, ಮಾಜಿ ಕ್ರಿಕೆಟಿಗರ ಒತ್ತಡಗಳ ನಡುವೆ ಕೊನೆಗೂ ವೈಭವ್ ಸೂರ್ಯವಂಶಿ ಟೀಂ ಇಂಡಿಯಾ ಪದಾರ್ಪಣೆ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಲಾಗಿತ್ತು. ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಸಿಕ್ಸರ್ ಮೂಲಕ ಅಬ್ಬರಿಸಿ ತಮ್ಮ ಬ್ಯಾಟಿಂಗ್ ಅಬ್ಬರ ಅಂತಾರಾಷ್ಟ್ರೀಯ ಪಂದ್ಯದಲ್ಲೂ ಸಾಬೀತು ಪಡಿಸಿದ್ದರು. ಆದರೆ ವೈಭವ್ ಅಬ್ಬರ ಕೇವಲ 2 ಸಿಕ್ಸರ್‌ಗೆ ಸೀಮಿತವಾಯಿತು.
14 ರನ್ ಸಿಡಿಸಿ ವೈಭವ್ ಸೂರ್ಯವಂಶಿ ಔಟ್
ವೈಭವ್ ಸೂರ್ಯವಂಶಿ ಜೋಫ್ರಾ ಆರ್ಚರ್ ಎಸೆತದಲ್ಲಿ ಸಿಕ್ಸರ್ ಸಿಡಿಸಿದರು. ಬಳಿಕ ಜೋಶ್ ಟಾಂಗ್ ಎಸೆತದಲ್ಲೂ ಎರಡನೇ ಸಿಕ್ಸರ್ ಸಿಡಿಸಿದರು. ಆದರೆ ವೈಭವ್ ಸೂರ್ಯವಂಶಿ ವಿಲ್ ಜ್ಯಾಕ್ಸ್ ಎಸೆತದಲ್ಲಿ ಔಟಾದರು. ವೈಭವ್ ಸೂರ್ಯವಂಶಿ 10 ಎಸೆತದಲ್ಲಿ 2 ಸಿಕ್ಸರ್ ಮೂಲಕ 14 ರನ್ ಸಿಡಿಸಿದರು.
ಸ್ಟಂಪ್ ಔಟ್ ಆದ ಸೂರ್ಯವಂಶಿ
ವೈಭವ್ ಸೂರ್ಯವಂಶಿ ಸ್ಫೋಟಕ ಆಟಗಾರ, ಆದರೆ ವಿಲ್ ಜ್ಯಾಕ್ಸ್ ಎಸೆತದಲ್ಲಿ ಸ್ಟಂಪ್ ಔಟ್ ಆಗುವ ಮೂಲಕ ನಿರಾಸೆ ಅನುಭವಿಸಿದರು. ಟೀಂ ಇಂಡಿಯಾ ಪರ ಮೊದಲ ಪಂದ್ಯದಲ್ಲೇ ಹಾಫ್ ಸೆಂಚುರಿ ಮೇಲೆ ಕಣ್ಣಿಟ್ಟಿದ್ದರು. ಹೀಗಾಗಿ ಪ್ರತಿ ಬಾಲ್ ಆ್ಯಟಾಕ್ ಮಾಡಲು ಹೋಗಿ ಸ್ಟಂಪ್ ಔಟ್ ಆಗಿದ್ದಾರೆ.
ವೈಭವ್ ಆರಂಭಿಕ ಪಂದ್ಯಗಳು
ಇತ್ತೀಚೆಗೆ ವೈಭವ್ ಸೂರ್ಯವಂಶಿ ಭಾರತ ಎ ತಂಡದ ಪರ ತ್ರಿಕೋರಣ ಸರಣಿ ಆಡಿದ್ದರು. ಆರಂಭಿಕ ಪಂದ್ಯಗಳಲ್ಲಿ ವೈಭವ್ ಸೂರ್ಯವಂಶಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆದರೆ ಟೂರ್ನಿ ರೋಚಕ ಘಟ್ಟ ತಲುಪುತ್ತಿದ್ದಂತೆ ವೈಭವ್ ಸೂರ್ಯವಂಶಿ ಅಬ್ಬರಕ್ಕೆ ಭಾರತ ತ್ರಿಕೋನ ಸರಣಿಯನ್ನು ಭಾರಿ ಅಂತರದಿಂದ ಗೆದ್ದುಕೊಂಡಿತ್ತು.


