Asianet Suvarna News Asianet Suvarna News

Virat Kohli Rohit Sharma Rift: ಕೊಹ್ಲಿ - ರೋಹಿತ್ ಮನಸ್ತಾಪ ಸ್ಪೋಟ..?

* ಭಾರತ ಕ್ರಿಕೆಟ್‌ ತಂಡದಲ್ಲಿ ಯಾವುದೂ ಸರಿಯಿಲ್ಲ ಎನ್ನುವ ಅನುಮಾನ?

* ಕೊಹ್ಲಿ-ರೋಹಿತ್ ಮನಸ್ತಾಪದ ನಡುವೆ ಬಡವಾಗುತ್ತಾ ಟೀಂ ಇಂಡಿಯಾ?

* ಒಬ್ಬರ ನಾಯಕತ್ವದ ಅಡಿಯಲ್ಲಿ ಆಡಲು ಮತ್ತೊಬ್ಬರು ಹಿಂದೇಟು?

India tour of South Africa  Indian Cricket captains Virat Kohli Rohit Sharma wont play together for now kvn
Author
Bengaluru, First Published Dec 15, 2021, 8:45 AM IST

ಮುಂಬೈ(ಡಿ.15): ಭಾರತ ಕ್ರಿಕೆಟ್‌ ತಂಡದಲ್ಲಿ (Indian Cricket Team) ನಾಯಕತ್ವಕ್ಕಾಗಿ ನಡೆಯುತ್ತಿರುವ ತಿಕ್ಕಾಟ ತಾರಕಕ್ಕೇರಿದೆ. ರೋಹಿತ್‌ ಶರ್ಮಾ (Rohit Sharma) ಹಾಗೂ ವಿರಾಟ್‌ ಕೊಹ್ಲಿ (Virat Kohli) ಸದ್ಯಕ್ಕೆ ಒಟ್ಟಿಗೆ ಆಡಲು ಒಪ್ಪುತ್ತಿಲ್ಲ ಎನ್ನುವ ಸುದ್ದಿಗಳು ಹರಿದಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ರೋಹಿತ್‌ ಶರ್ಮಾ ಗಾಯದ ಕಾರಣ ನೀಡಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಿಂದ ಹೊರಬಿದ್ದರೆ, ವಿರಾಟ್‌ ಕೊಹ್ಲಿ ಏಕದಿನ ಸರಣಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಟೆಸ್ಟ್‌ನಲ್ಲಿ ಭಾರತವನ್ನು ಕೊಹ್ಲಿ ಮುನ್ನಡೆಸಲಿದ್ದು, ಏಕದಿನ ಸರಣಿ ವೇಳೆಗೆ ರೋಹಿತ್‌ ಫಿಟ್‌ ಆಗುವ ನಿರೀಕ್ಷೆ ಇದ್ದು, ಅವರೇ ತಂಡ ಮುನ್ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಭಾರತ ಏಕದಿನ ತಂಡದ ನಾಯಕತ್ವವನ್ನು ಕಳೆದುಕೊಂಡ ಬಳಿಕ ವಿರಾಟ್‌ ಕೊಹ್ಲಿ, ಬಿಸಿಸಿಐ (BCCI) ಹಾಗೂ ರೋಹಿತ್‌ ಶರ್ಮಾ ಮೇಲೆ ಸಿಟ್ಟು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ (Sourav Ganguly) ಮನವಿ ಮಾಡಿದರೂ ಕೊಹ್ಲಿ ಟಿ20 ನಾಯಕನಾಗಿ ಮುಂದುವರಿಯಲು ಒಪ್ಪಿರಲಿಲ್ಲ. ಸೀಮಿತ ಓವರ್‌ ತಂಡಗಳಿಗೆ ಇಬ್ಬರು ನಾಯಕರಿರಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಬಿಸಿಸಿಐ, ಕೊಹ್ಲಿಗೆ ಏಕದಿನ ನಾಯಕತ್ವವನ್ನು ಬಿಡುವಂತೆ ಸೂಚಿಸಿತ್ತು ಎನ್ನಲಾಗಿದ್ದು, ಅವರು ಒಪ್ಪದಿದ್ದಾಗ ಬಿಸಿಸಿಐ, ನಾಯಕತ್ವದಿಂದ ಕಿತ್ತುಹಾಕಿತು ಎಂದು ಸುದ್ದಿಯಾಗಿತ್ತು.

ಈ ಬೆಳವಣಿಗೆ ಕೊಹ್ಲಿಗೆ ಆಘಾತ ನೀಡಿದ್ದು, ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗಿದೆ. ಬಿಸಿಸಿಐ ಮುಂಬೈನಲ್ಲಿ ವ್ಯವಸ್ಥೆ ಮಾಡಿರುವ ಬಯೋಬಬಲ್‌ನೊಳಕ್ಕೆ ಪ್ರವೇಶಿಸುವುದಕ್ಕೂ ಕೊಹ್ಲಿ ವಿಳಂಬ ಮಾಡಿದರು. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ನಡುವಿನ ಮನಸ್ತಾಪದಿಂದಾಗಿ ಟೀಂ ಇಂಡಿಯಾಗೆ ಹಿನ್ನೆಡೆಯಾಗುತ್ತಾ ಎನ್ನುವ ಅನುಮಾನ ಕಾಡಲಾರಂಭಿಸಿದೆ.

ಮಗಳ ಬರ್ತ್‌ ಡೇ ಕಾರಣ ನೀಡಿ ಕೊಹ್ಲಿ ಏಕದಿನಕ್ಕೆ ಗೈರು?

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಿಂದ ವಿರಾಟ್‌ ಕೊಹ್ಲಿ ಹಿಂದೆ ಸರಿದಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೊಹ್ಲಿ ತಮ್ಮ ಪುತ್ರಿ ವಾಮಿಕಾ (Vamika) ಅವರ ಮೊದಲ ಹುಟ್ಟುಹಬ್ಬ ಆಚರಣೆಗಾಗಿ ಟೆಸ್ಟ್‌ ಸರಣಿಯ ಬಳಿಕ ತಂಡವನ್ನು ತೊರೆಯಲಿದ್ದು, ಏಕದಿನ ಸರಣಿಗೆ ಗೈರಾಗಲಿದ್ದಾರೆ. ಅವರು ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳಲು ನಿರ್ಧರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಜ.11ಕ್ಕೆ ವಾಮಿಕಾ ಮೊದಲ ಹುಟ್ಟುಹಬ್ಬವಿದ್ದು, ಜ.11ರಿಂದಲೇ ದ.ಆಫ್ರಿಕಾ ವಿರುದ್ಧ 3ನೇ ಟೆಸ್ಟ್‌ ಆರಂಭವಾಗಲಿದೆ. ಆದರೆ ಅದು ಕೊಹ್ಲಿಯ 100ನೇ ಟೆಸ್ಟ್‌ ಆಗಲಿರುವ ಕಾರಣ ಆ ಪಂದ್ಯ ಆಡಿದ ಬಳಿಕ ಕುಟುಂಬದೊಂದಿಗೆ ತೆರಳಲಿದ್ದಾರೆ ಎಂದು ಗೊತ್ತಾಗಿದೆ.

Rohit Sharma Vs Virat Kohli : ಎಲ್ಲಾ ಸಮಸ್ಯೆಗೆ ಕಾರಣ ಕೊಹ್ಲಿಯ ಅಹಂಕಾರ ಎಂದ ಫ್ಯಾನ್ಸ್!

ದ.ಆಫ್ರಿಕಾದಿಂದ ವಾಪಸಾದ ಬಳಿಕ ಭಾರತ ತಂಡದ ಶ್ರೀಲಂಕಾ, ಅಫ್ಘಾನಿಸ್ತಾನ ವಿರುದ್ಧ ತವರಿನಲ್ಲಿ ಸರಣಿಗಳನ್ನು ಆಡಲಿದೆ. ಬಳಿಕ ಐಪಿಎಲ್‌ (IPL) ನಡೆಯಲಿದೆ. ಹೀಗಾಗಿ 3-4 ತಿಂಗಳು ಮತ್ತೆ ಬಯೋಬಬಲ್‌ನಲ್ಲಿ ಇರಬೇಕಾಗುತ್ತದೆ ಎನ್ನುವ ಕಾರಣದಿಂದ ಕೊಹ್ಲಿ, ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ವಿಶ್ರಾಂತಿ ಕೇಳಲಿದ್ದಾರೆ ಎಂದು ವರದಿಯಾಗಿದೆ.

ಟೈಮಿಂಗ್‌ ಸರಿಯಿಲ್ಲ

ವಿರಾಟ್ ಕೊಹ್ಲಿ ಏಕದಿನ ಸರಣಿಯಲ್ಲಿ ಆಡುವುದಿಲ್ಲ ಎಂದು ಬಿಸಿಸಿಐಗೆ ತಿಳಿಸಿದ್ದಾರೆ ಎನ್ನಲಾಗುತ್ತಿದೆ. ರೋಹಿತ್‌ ಟೆಸ್ಟ್‌ ಸರಣಿಯಿಂದ ಹೊರಬಿದ್ದಿದ್ದಾರೆ. ಸರಣಿಯಿಂದ ಹೊರಗುಳಿಯುವುದು ತಪ್ಪಲ್ಲ. ಆದರೆ ಟೈಮಿಂಗ್‌ ಸರಿಯಿರಬೇಕು. ಈ ಬೆಳವಣಿಗೆ ಇಬ್ಬರ ನಡುವೆ ಮನಸ್ತಾಪವಿದೆ ಎನ್ನುವ ಸುದ್ದಿಗೆ ಪುಷ್ಠಿ ನೀಡುತ್ತದೆ ಎಂದು ಟೀಂ ಇಂಡಿಯಾ ಮಾಜಿ ನಾಯಕ  ಮೊಹಮದ್‌ ಅಜರುದ್ದೀನ್‌ ಅಭಿಪ್ರಾಯಪಟ್ಟಿದ್ದಾರೆ.
 

Follow Us:
Download App:
  • android
  • ios