Asianet Suvarna News Asianet Suvarna News

Rohit Sharma Vs Virat Kohli : ಎಲ್ಲಾ ಸಮಸ್ಯೆಗೆ ಕಾರಣ ಕೊಹ್ಲಿಯ ಅಹಂಕಾರ ಎಂದ ಫ್ಯಾನ್ಸ್!

ಗಾಯದ ಕಾರಣದಿಂದಾಗಿ ಟೆಸ್ಟ್ ಸರಣಿಯಿಂದ ಹೊರಬಿದ್ದ ರೋಹಿತ್ ಶರ್ಮ
ಕುಟುಂಬದ ಜೊತೆ ಕಾಲ ಕಳೆಯವ ಕಾರಣ ಏಕದಿನ ಸರಣಿ ಆಡಲ್ಲ ಅಂದ್ರು ಕೊಹ್ಲಿ
ವಿರಾಟ್ ಕೊಹ್ಲಿ ವರ್ತನೆಗೆ ಗರಂ ಆದ್ರು ಕ್ರಿಕೆಟ್ ಫ್ಯಾನ್ಸ್

angry Fans reations TO virat Kohli may skip ODI series vs south africa SAN
Author
Bengaluru, First Published Dec 14, 2021, 5:30 PM IST

ಬೆಂಗಳೂರು (ಡಿ. 14): ಭಾರತ ತಂಡದ ದಕ್ಷಿಣ ಆಫ್ರಿಕಾ (South Africa) ಪ್ರವಾಸದ ಸರಣಿ ಟೀಂ ಇಂಡಿಯಾದ (Team India) ಸಿದ್ಧತೆಗಿಂತ ಹೆಚ್ಚಾಗಿ, ನಾಯಕತ್ವದ ವಿವಾದಗಳಿಂದಾಗಿ ಸುದ್ದಿಯಲ್ಲಿದೆ. ಏಕದಿನ ತಂಡದ ನಾಯಕ ಸ್ಥಾನದಿಂದ ತಮ್ಮನ್ನು ವಜಾ ಮಾಡಿದ ರೀತಿಗೆ ಬೇಸರವಾಗಿದ್ದಂತೆ ಕಾಣುತ್ತಿರುವ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli), ಕೌಟುಂಬಿಕ ಕಾರಣ ನೀಡಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯುವ ತೀರ್ಮಾನ ಮಾಡಲಿದ್ದಾರೆ ಎಂದು ವರದಿಯಾಗಿದೆ. ಇನ್ನೊಂದೆಡೆ ಗಾಯದ ಸಮಸ್ಯೆ ಎದುರಿಸಿರುವ ಏಕದಿನ ತಂಡದ ನಾಯಕ ರೋಹಿತ್ ಶರ್ಮ (Rohit Sharma) ಟೆಸ್ಟ್ ತಂಡದಿಂದ ಹೊರಬಿದ್ದಿದ್ದು, ಅವರ ಬದಲಿಯಾಗಿ ಪ್ರಿಯಾಂಕ್ ಪಾಂಚಾಲ್ ರನ್ನು (Priyank Panchal) ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಇದನ್ನು ಗಮನಿಸುತ್ತಿರುವ ಕ್ರಿಕೆಟ್ ಫ್ಯಾನ್ಸ್, ಟೆಸ್ಟ್ ತಂಡದಲ್ಲಿ ರೋಹಿತ್ ಶರ್ಮ ಹಾಗೂ ಏಕದಿನ ತಂಡದಲ್ಲಿ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಗೆ ಹೊರಗುಳಿದಿದ್ದು ಸರಿ, ಆದರೆ, ನಾಯಕತ್ವ ವಿವಾದ ಬೇರೆ-ಬೇರೆ ರೂಪ ಪಡೆದುಕೊಂಡಿರುವ ಹಂತದಲ್ಲಿ ಇವರು ಮಾಡಿರುವ ನಿರ್ಧಾರ ತಂಡದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ಅನುಮಾನ ಮೂಡಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತಾಗಿ ಮಾತನಾಡಿರುವ ಟೀಂ ಇಂಡಿಯಾ ಮಾಜಿ ನಾಯಕ  ಮೊಹಮದ್ ಅಜರುದ್ದೀನ್ (Mohammad Azharuddin), ಯಾವ ಕ್ರಿಕೆಟರ್ ಗೂ ಬ್ರೇಕ್ ತೆಗೆದುಕೊಳ್ಳುವುದು ಬೇಡ ಎಂದು ಹೇಳುವುದಿಲ್ಲ. ಆದರೆ, ಈ ಪ್ರಕರಣದಲ್ಲಿ ಬ್ರೇಕ್ ತೆಗೆದುಕೊಳ್ಳುತ್ತಿರುವ ಟೈಮಿಂಗ್ ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ ಎಂದಿದ್ದಾರೆ.

Virat Kohli vs Rohit Sharma: ಒಂಡೇ ಕ್ಯಾಪ್ಟನ್ ಟೆಸ್ಟ್ ಸರಣಿಗಿಲ್ಲ, ಟೆಸ್ಟ್ ಕ್ಯಾಪ್ಟನ್ ಏಕದಿನ ಸರಣಿಗೆ ಇಲ್ಲ!
ವಿರಾಟ್ ಹಾಗೂ ರೋಹಿತ್ ಶರ್ಮ ನಡುವೆ ನಡೆದಿರುವ ವಿವಾದದ ಬಗ್ಗೆ ಕೆಲ ಟಿಪ್ಪಣಿಗಳನ್ನು ನೀಡಿರುವ ಅಜರುದ್ದೀನ್, ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಇರಬಹುದು ಎನ್ನುವ ಚರ್ಚೆಯೇ ಸಂಪೂರ್ಣವಾಗಿ ತಪ್ಪು. ಯಾವ ಪ್ಲೇಯರ್ ಕೂಡ ಇನ್ನೊಬ್ಬ ಪ್ಲೇಯರ್ ಕ್ಯಾಪ್ಟನ್ ಆಗಿರುವ ಮಾದರಿಗೆ ನಿವೃತ್ತಿ ಪ್ರಕಟಿಸಿಲ್ಲ ಎಂದಿದ್ದಾರೆ.


ರೋಹಿತ್ ಶರ್ಮ ತಮ್ಮ ನಿರ್ಧಾರ ಘೋಷಣೆ ಮಾಡಿದ ಬೆನ್ನಲ್ಲಿಯೇ ವಿರಾಟ್ ಕೊಹ್ಲಿ ಕೂಡ ತಾವು ಏಕದಿನ ಸರಣಿ ಆಡುವುದಿಲ್ಲ ಎಂದು ಹೇಳಿದ್ದು ಕ್ರಿಕೆಟ್ ಅಭಿಮಾನಿಗಳನ್ನು ಕೆರಳಿದೆ. "ವಿರಾಟ್ ಕೊಹ್ಲಿ ತಮ್ಮ ನಿಬಿಡ ಕ್ರಿಕಟ್ ವೇಳಾಪಟ್ಟಿಯಿಂದ ವಿಶ್ರಾಂತಿ ತೆಗೆದುಕೊಂಡು, ಈ ಸಮಯವನ್ನು ತಮ್ಮ ಅಹಂಕಾರದ ಜೊತೆ ಕಳೆಯುವ ನಿರ್ಧಾರ ಮಾಡಿದ್ದಾರೆ ಇದನ್ನು ನೋಡಲು ಬಹಳ ಖುಷಿಯಾಗುತ್ತದೆ. ಬೇರೆ ಯಾವುದೇ ಫೀಲ್ಡ್ ನಲ್ಲಿರುವ ವ್ಯಕ್ತಿಗಳಿಗೆ ಕೊಹ್ಲಿ ಆದರ್ಶ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.


ಟಿ20 ಹಾಗೂ ಏಕದಿನ ಮಾದರಿಯಲ್ಲಿ ಆಡುತ್ತಿಲ್ಲ ಎಂದಾದ ಮೇಲೆ ಬ್ರೇಕ್ ತೆಗೆದುಕೊಳ್ಳುತ್ತೇನೆ ಎಂದೆಲ್ಲಾ ಹೇಳುವುದೇಕೆ? ಪ್ರತಿ ಬಾರಿ ಟಿ20 ಅಥವಾ ಏಕದಿನ ಸರಣಿ ಬಂದಾಗ ವಿರಾಟ್ ಕೊಹ್ಲಿ ಬ್ರೇಕ್ ತೆಗೆದುಕೊಳ್ಳುತ್ತಾರೆ. ದೊಡ್ಡ ಸರಣಿಗಿಂತ ಕುಟುಂಬದ ಜೊತೆ ಕಾಲ ಕಳೆಯುವುದೇ ಹೆಚ್ಚಾಯಿತೇ? ಹಾಗಿದ್ದ ಮೇಲೆ ನಿವೃತ್ತಿ ತೆಗೆದುಕೊಂಡು ಕೇವಲ ಟೆಸ್ಟ್ ಕ್ರಿಕೆಟ್ ನಲ್ಲಿ ಮಾತ್ರವೇ ಆಡಬಾರದೇಕೆ ಎಂದು ಸೋಮ್ಯಾ ಛಾಬ್ರಾ ಎನ್ನುವ ಅಭಿಮಾನಿ ಪ್ರಶ್ನಿಸಿದ್ದಾನೆ.


ರೋಹಿತ್ ಶರ್ಮ ಟೆಸ್ಟ್ ಸರಣಿ ಆಡೋದಿಲ್ಲ, ಕೊಹ್ಲಿ ಏಕದಿನ ಸರಣಿ ಆಡೋದಿಲ್ಲ. ಇದು  "ನಾವು ಅವರ ಮದುವೆಗೆ ಹೋಗಿಲ್ಲ ಅಂದ್ರೆ, ಅವರು ನಮ್ಮ ಮನೆ ಮದುವೆಗೆ ಬರಲ್ಲ" ಅನ್ನೋ ಸಾಲನ್ನು ನನಗೆ ನೆನಪಿಸ್ತಾ ಇದೆ ಎಂದು ಮನೋಜ್ ಪಾರೀಕ್ ಎನ್ನುವ ಅಭಿಮಾನಿ ಬರೆದಿದ್ದಾನೆ.

 

 

ಮಗಳ ಜನ್ಮದಿನದ ಕಾರಣಕ್ಕೆ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಗೆ ತಾವು ಅಲಭ್ಯ ಎಂದು ವಿರಾಟ್ ಕೊಹ್ಲಿ ಹೇಳುತ್ತಿರುವುದು ನನಗೆ ಬಹಳ ನಿರಾಸೆ ಉಂಟು ಮಾಡಿದೆ. ಇದು ನಿಜವೇ ಆಗಿದ್ದ್ಲಿ ಕೊಹ್ಲಿಯನ್ನು ನಾನೆಂದೂ ಡಿಫೆಂಡ್ ಮಾಡಿಕೊಳ್ಳುವುದಿಲ್ಲ. ಇದು ವೃತ್ತಿಪರ ಆಟಗಾರನ ಲಕ್ಷಣವಲ್ಲ. ಒಂದು ವಿಚಾರವಂತೂ ಸ್ಪಷ್ಟವಾಗಿದೆ ಇದೆಲ್ಲದಕ್ಕೂ ಬೇರೆಯದೇ ಕಾರಣವಿದೆ ಎಂದು ಪಾಲಕ್ ಸಿಂಗ್ ಎನ್ನುವ ವ್ಯಕ್ತಿ ಟ್ವೀಟ್ ಮಾಡಿದ್ದಾರೆ.

Follow Us:
Download App:
  • android
  • ios