ಸಿಡ್ನಿ(ಮಾ.04): ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತಕ್ಕೆ 2009ರ ವಿಶ್ವ ಚಾಂಪಿಯನ್‌ ಇಂಗ್ಲೆಂಡ್‌ ಎದುರಾಗಲಿದೆ. 2018ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲೂ ಉಭಯ ತಂಡಗಳು ಎದುರಾಗಿದ್ದವು. ಭಾರತವನ್ನು ಸೋಲಿಸಿ, ಇಂಗ್ಲೆಂಡ್‌ ಫೈನಲ್‌ ಪ್ರವೇಶಿಸಿತ್ತು.

ಮಹಿಳಾ ಟಿ20 ವಿಶ್ವಕಪ್: ಸೆಮೀಸ್ ಪ್ರವೇಶಿಸಿರುವ ಆಸೀಸ್‌ಗೆ ಬಿಗ್ ಶಾಕ್, ಸ್ಟಾರ್ ಆಟಗಾರ್ತಿ ಔಟ್..!

ಮಂಗಳವಾರ ಗುಂಪು ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು, ಸೆಮೀಸ್‌ ವೇಳಾಪಟ್ಟಿ ಅಂತಿಮಗೊಂಡಿತು. ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್‌ಇಂಡೀಸ್‌ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾದ ಕಾರಣ, ಉಭಯ ತಂಡಗಳು ತಲಾ ಒಂದು ಅಂಕ ಹಂಚಿಕೊಂಡವು. ದ.ಆಫ್ರಿಕಾ 7 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಇಂಗ್ಲೆಂಡ್‌ 2ನೇ ಸ್ಥಾನಕ್ಕಿಳಿಯಿತು. ಮಾರ್ಚ್‌ 5ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಮಾರ್ಚ್‌ 8ರಂದು ಫೈನಲ್ ಪಂದ್ಯ ಜರುಗಲಿದೆ.

ಮಹಿಳಾ ಟಿ20 ವಿಶ್ವಕಪ್‌: ಕಿವೀಸ್ ಮಣಿಸಿ ಆಸೀಸ್‌ ಸೆಮಿಫೈನಲ್‌ಗೆ

‘ಎ’ ಗುಂಪಿನಲ್ಲಿ ಸತತ 4 ಗೆಲುವುಗಳೊಂದಿಗೆ ಅಗ್ರಸ್ಥಾನ ಪಡೆದ ಭಾರತ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಲು ಎದುರು ನೋಡುತ್ತಿದೆ. 2ನೇ ಸೆಮಿಫೈನಲ್‌ನಲ್ಲಿ 4 ಬಾರಿ ಚಾಂಪಿಯನ್‌ ಆಸ್ಪ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಎರಡೂ ಸೆಮಿಫೈನಲ್‌ ಪಂದ್ಯಗಳು ಗುರುವಾರ ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ನಡೆಯಲಿವೆ.

ಸೆಮಿಫೈನಲ್‌ ವೇಳಾಪಟ್ಟಿ

ಮೊದಲ ಸೆಮಿಫೈನಲ್‌

ಭಾರತ vs ಇಂಗ್ಲೆಂಡ್‌

ಸಮಯ: ಬೆಳಗ್ಗೆ 9.30ಕ್ಕೆ

ಎರಡನೇ ಸೆಮಿಫೈನಲ್‌

ಆಸ್ಪ್ರೇಲಿಯಾ vs ದ.ಆಫ್ರಿಕಾ

ಸಮಯ: ಮಧ್ಯಾಹ್ನ 1.30ಕ್ಕೆ