ಇಂಗ್ಲೆಂಡ್ ವಿರುದ್ದದ 2ನೇ ಏಕದಿನ ಪಂದ್ಯ ಆರಂಭಕ್ಕೆ ಕೆಲ ಗಂಟೆ ಇರುವಾಗ ಐಸಿಸಿ ಮಹತ್ವದ ಕ್ರಮ ಕೈಗೊಂಡಿದೆ. ಭಾರತದ ವೇಗಿ ಕಳೆದ ಪಂದ್ಯದಲ್ಲಿ 2 ವಿಕೆಟ್ ಕಬಳಿಸಿದ ಗುರ್ನೂರ್ ಬ್ರಾರ್ ವಿರುದ್ಧ ಐಸಿಸಿ ಕ್ರಮ ಕೈಗೊಂಡಿದೆ.
ಕಾರ್ಡಿಫ್ (ಜು.16) ಇಂಗ್ಲೆಂಡ್ ವಿರುದ್ದದ 2ನೇ ಏಕದಿನ ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಯುವ ವೇಗಿ ಗುರ್ನೂರ್ ಬ್ರಾರ್ ವಿರುದ್ದ ಐಸಿಸಿ ಮಹತ್ವದ ಕ್ರಮ ಕೈಗೊಂಡಿದೆ. ನಿಯಮ ಉಲ್ಲಂಘಿಸಿದ ಗುರ್ನೂರ್ ಬಾರ್ ವಿರುದ್ದ ಐಸಿಸಿ ಕ್ರಮ ತೆಗೆದುಕೊಂಡಿದೆ. ಗುರ್ನೂರ್ ಬ್ರಾರ್ ಐಸಿಸಿ ಕೋಡ್ ಆಫ್ ಕಂಡಕ್ಟ್ ಆರ್ಟಿಕಲ್ 2.9 ನಿಯಮ ಉಲ್ಲಂಘಿಸಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಎರಡನೇ ಏಕದಿನ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳ ಮೊದಲು ಕ್ರಮ ಕೈಗೊಂಡಿದ್ದು, ವೇಗಿಗೆ ಹಿನ್ನಡೆಯಾಗಿದೆ.
ಗುರ್ನೂರ್ ನಿಯಮ ಉಲ್ಲಂಘನೆ ಘಟನೆ ಏನು?
ಮೊದಲ ಏಕದಿನ ಪಂದ್ಯದ 8ನೇ ಓವರ್‌ನಲ್ಲಿ ಗುರ್ನೂರ್ ಬ್ರಾರ್ ಚೆಂಡನ್ನು ಕ್ರೀಸ್‌ನಲ್ಲಿದ್ದ ಇಂಗ್ಲೆಂಡ್ ಬ್ಯಾಟರ್ ಕಡೆ ಎಸೆದಿದ್ದರು.ಇದು ಐಸಿಸಿ ನಿಯಮ ಉಲ್ಲಂಘನೆಯಾಗಿದೆ. ಬ್ಯಾಟರ್ ಕಡೆ ಅಥವಾ ಕ್ರಿಕೆಟಿಗನ ಕಡೆ ಬಾಲ್ ಅಥವಾ ಯಾವುದೇ ವಸ್ತುಗಳನ್ನು ಎಸೆದರೂ ನಿಯಮ ಉಲ್ಲಂಘನೆಯಾಗಿದೆ.ಆಕ್ರೋಶದಲ್ಲಿ ಗುರ್ನೂರ್ ಬಾರ್ ಚೆಂಡು ಎಸೆದಿದ್ದರು. ಇದರ ಪರಿಣಾಮ ಐಸಿಸಿ ಇದೀಗ ಡಿಮೆರಿಟ್ ಪಾಯಿಂಟ್ಸ್ ನೀಡಿದೆ.
ಸದ್ಯ ಗುರ್ನೂರ್ ಬ್ರಾರ್‌ಗೆ ಡಿಮೇರಿಟ್ಸ್ ಪಾಯಿಂಟ್ಸ್ ನೀಡಲಾಗಿದೆ. ಇದೇ ರೀತಿ ಮತ್ತೆ ನಿಯಮ ಉಲ್ಲಂಘಿಸಿ ಡಿಮೆರಿಟ್ಸ್ ಪಾಯಿಂಟ್ಸ್ ನಿಗದಿತ ಮಿತಿ ಮೀರಿದರೆ ಒಂದು ಪಂದ್ಯದಿಂದ ನಿಷೇಧಕ್ಕೆ ಒಳಾಗಾಗುತ್ತಾರೆ. ಗುರ್ನೂರ್ ಬ್ರಾರ್ ಇದೇ ರೀತಿ ಐಸಿಸಿ ನಿಯಮ ಉಲ್ಲಂಘಿಸಿದರೆ ಮುಂದಿನ ಸರಣಿಗಳಲ್ಲಿ ಸಂಕಷ್ಟ ಎದುರಾಗಲಿದೆ.
ಪ್ರಮುಖ ಎರಡು ವಿಕೆಟ್ ಕಬಳಿಸಿದ ಬ್ರಾರ್
ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಪ್ರಮುಖ ಬ್ರೇಕ್‌ಥ್ರೂ ನೀಡಿದ ವೇಗಿ ಗುರ್ನೂರ್ ಬ್ರಾರ್ 2 ವಿಕೆಟ್ ಕಬಳಿಸಿದ್ದಾರೆ. 43 ರನ್ ಸಿಡಿಸಿದ ಬೆನ್ ಡಕೆಟ್ ಹಾಗೂ 14 ರನ್ ಸಿಡಿಸಿದ ಜೇಕಬ್ ಬೆತೆಲ್ ವಿಕೆಟ್ ಕಬಳಿಸಿದ್ದರು. ಭಾರತ ಮೊದಲ ಏಕದಿನ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ಗೆಲುವು ದಾಖಲಿಸಿತ್ತು.
ಮೊದಲ ಏಕದಿನ ಪಂದ್ಯದಲ್ಲಿ ಭಾರತ 6 ವಿಕೆಟ್ ಗೆಲುವು ದಾಖಲಿಸಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಇಂದಿನ ಪಂದ್ಯ ಗೆದ್ದು ಸರಣಿ ಕೈವಶ ಮಾಡಲು ಮುಂದಾಗಿದೆ.


