ಭಾರತದ ರಾಷ್ಟ್ರಗೀತೆ ಆರಂಭವಾಗುತ್ತಿದ್ದಂತೆಯೇ ತಮಿಳುನಾಡು ಮೂಲದ ಸ್ಪಿನ್ನರ್ ಸಾಯಿ ಕಿಶೋರ್, ತಮ್ಮ ಬಹುಕಾಲದ ಕನಸು ನನಸಾದ ಕ್ಷಣವನ್ನು ನೆನಪಿಸಿಕೊಂಡು, ಆನಂದಭಾಷ್ಪ ಸುರಿಸಿದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. 

ಹಾಂಗ್ಝೂ(ಅ.03): ಭಾರತ ಪರ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಆರ್ ಸಾಯಿ ಕಿಶೋರ್, ಪಂದ್ಯ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಒಂದು ಕ್ಷಣ ಭಾವುಕರಾಗಿದ್ದಾರೆ. ಏಷ್ಯಾಕಪ್‌ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗಿದ್ದವು. ಈ ಸಂದರ್ಭದಲ್ಲಿ ಎರಡೂ ತಂಡಗಳ ಆಟಗಾರರು ಸಾಲಾಗಿ ನಿಂತಾಗ ಉಭಯ ದೇಶಗಳ ರಾಷ್ಟ್ರಗೀತೆಯನ್ನು ನುಡಿಸಲಾಯಿತು. 

ಇನ್ನು ಭಾರತದ ರಾಷ್ಟ್ರಗೀತೆ ಆರಂಭವಾಗುತ್ತಿದ್ದಂತೆಯೇ ತಮಿಳುನಾಡು ಮೂಲದ ಸ್ಪಿನ್ನರ್ ಸಾಯಿ ಕಿಶೋರ್, ತಮ್ಮ ಬಹುಕಾಲದ ಕನಸು ನನಸಾದ ಕ್ಷಣವನ್ನು ನೆನಪಿಸಿಕೊಂಡು, ಆನಂದಭಾಷ್ಪ ಸುರಿಸಿದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. 

Scroll to load tweet…

ಇನ್ನು ತಮಿಳುನಾಡು ಮೂಲದ ಟೀಂ ಇಂಡಿಯಾ ಅನುಭವಿ ಕ್ರಿಕೆಟಿಗ ದಿನೇಶ್ ಕಾರ್ತಿಕ್, ಟ್ವೀಟ್ ಮೂಲಕ ಸಾಯಿ ಕಿಶೋರ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತಂತೆ ಎಕ್ಸ್‌ ಮಾಡಿರುವ ಡಿಕೆ, "ಯಾರೆಲ್ಲಾ ಕಠಿಣ ಪರಿಶ್ರಮ ಪಡುತ್ತಾರೋ ಅವರಿಗೆ ದೇವರು ಖಂಡಿತ ಪ್ರತಿಫಲ ನೀಡುತ್ತಾನೆ. ದೇಶಿ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿರುವ ಆರ್ ಸಾಯಿ ಕಿಶೋರ್ ಅವರೊಬ್ಬ ಅತ್ಯದ್ಭುತ ಆಟಗಾರನಾಗಿದ್ದಾರೆ. ಈ ಕ್ಷಣವನ್ನು ಕಂಡು ನಾನು ತುಂಬಾ ಸಂತೋಷಪಡದೇ ಇರಲು ಸಾಧ್ಯವಿಲ್ಲ." 

Asian Games 2023 ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ, ನೇಪಾಳ ಮಣಿಸಿ ಸೆಮೀಸ್‌ಗೆ ಲಗ್ಗೆಯಿಟ್ಟ ಟೀಂ ಇಂಡಿಯಾ

ಬೆಳಗ್ಗೆ ಎದ್ದು ಆಡುವ ಹನ್ನೊಂದರ ಬಳಗದಲ್ಲಿ ಅವರ ಹೆಸರನ್ನು ನೋಡಿದಾಗ, ನಾನಂತೂ ಒಂದು ಕ್ಷಣ ಭಾವುಕನಾಗಿ ಹೋದೆ. ಯಾರೆಲ್ಲಾ ಚೆನ್ನಾಗಿ ಆಡಿದ್ದಾರೆ ಎಂದು ನೋಡಿದರೆ, ನನ್ನ ಪಟ್ಟಿಯಲ್ಲಿ ಅವರು ಅಗ್ರಸ್ಥಾನದಲ್ಲಿದ್ದಾರೆ.

Scroll to load tweet…

ಅವರು ಬ್ಯಾಟಿಂಗ್‌ ವಿಭಾಗದಲ್ಲಿ ತಮ್ಮನ್ನು ತಾವು ಸುಧಾರಿಸಿಕೊಂಡ ರೀತಿ ನಿಜಕ್ಕೂ ಅದ್ಭುತವಾದದ್ದು. ಯಾವುದೇ ಮಾದರಿಯ ಕ್ರಿಕೆಟ್‌ಗೆ ಸೆಟ್‌ ಆಗಬಲ್ಲ ಅದ್ಭುತ ಆಟಗಾರನೀತ. ನಾನು ಈಗ ಆತ ಟೀಂ ಇಂಡಿಯಾ ಆಟಗಾರ ಎನಿಸಿಕೊಂಡಿರುವುದನ್ನು ಕೇಳಿ ಸಂತುಷ್ಟನಾಗಿದ್ದೇನೆ ಹಾಗೂ ಯಾರೊಬ್ಬರೂ ಆತನ ಈ ಸಾಧನೆಯನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಚೆನ್ನಾಗಿ ಆಡು ಸಾಯಿ ಎಂದು ದಿನೇಶ್ ಕಾರ್ತಿಕ್ ಟ್ವೀಟ್ ಮಾಡಿದ್ದಾರೆ.

ವಿಶ್ವಕಪ್‌ಗೂ ಬೆಂಬಿಡದ ವಿವಾದಗಳು! ಟೂರ್ನಿ ಆರಂಭಕ್ಕೂ ಮುನ್ನವೇ ಗಮನ ಸೆಳೆದ ಕಾಂಟ್ರೊವರ್ಸಿಗಳಿವು

ಇನ್ನು ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಹಾಗೂ ನೇಪಾಳ ನಡುವಿನ ಪಂದ್ಯದ ಬಗ್ಗೆ ಹೇಳುವುದಾದರೇ, ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ ಹಾಗೂ ಆವೇಶ್ ಖಾನ್ ಮತ್ತು ರವಿ ಬಿಷ್ಣೋಯಿ ಮಿಂಚಿನ ಬೌಲಿಂಗ್ ನೆರವಿನಿಂದ ಋತುರಾಜ್ ಗಾಯಕ್ವಾಡ್ ನೇತೃತ್ವದ ಭಾರತ ತಂಡವು ನೇಪಾಳ ಎದುರು 23 ರನ್ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಏಷ್ಯನ್ ಗೇಮ್ಸ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. 

ಮೊದಲು ಬ್ಯಾಟ್ ಮಾಡಿದ ಭಾರತ, ಯಶಸ್ವಿ ಜೈಸ್ವಾಲ್(100) ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 202 ರನ್ ಬಾರಿಸಿತು. ಇನ್ನು ಗುರಿ ಬೆನ್ನತ್ತಿದ ನೇಪಾಳ ತಂಡವು 9 ವಿಕೆಟ್ ಕಳೆದುಕೊಂಡು 179 ರನ್ ಗಳಿಸಲಷ್ಟೇ ಶಕ್ತವಾಯಿತು.