Asianet Suvarna News Asianet Suvarna News

Covid 19 ಭಾರತಕ್ಕೆ ಮತ್ತೆ ವಕ್ಕರಿಸಿದ ಕೊರೋನಾ, ಒಂದೇ ದಿನ 7 ಸಾವಿರ ಕೇಸ್!

  • ದಿನದಿಂದ ದಿನಕ್ಕೆ ಶೇಕಡಾ 40 ರಷ್ಟು ಕೊರೋನಾ ಪ್ರಕರಣ ಏರಿಕೆ
  • ಬುಧವಾರ 5 ಸಾವಿರ ಆಸುಪಾಸಿನಲ್ಲಿದ್ದ ಕೇಸ್, ಇಂದು 7,000
  • ಮಾಸ್ಕ್ , ಸಾಮಾಜಿಕ ಅಂತರ ಕಡ್ಡಾಯ 
India report 7240 fresh Coronavirus cases last 24 hours highest jump jump after march ckm
Author
Bengaluru, First Published Jun 9, 2022, 4:31 PM IST

ನವದೆಹಲಿ(ಜೂ.09): ಭಾರತದಲ್ಲಿ ಶಾಲೆ ಕಾಲೇಜುಗಳು(School College) ಆರಂಭಗೊಳ್ಳುತ್ತಿದ್ದಂತೆ ಇದೀಗ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಕಾರಣ ದಿನದಿಂದ ದಿನಕ್ಕೆ ಕೋವಿಡ್(Covid 19 Cases) ಪ್ರಕರಣಗಳ ಸಂಖ್ಯೆಗಲ್ಲಿ ಗಣನೀಯ ಏರಿಕೆ ಕಾಣುತ್ತಿದೆ. ಬುಧವಾರ 5,233 ಪ್ರಕರಣ ವರದಿಯಾಗಿದ್ದರೆ, ಇಂದು(ಜೂ.09) 7,240 ಹೊಸ ಕೋವಿಡ್ ಪ್ರಕರಣ ವರದಿಯಾಗಿದೆ.

ಜೂನ್ 8 ರಂದು ಶೇಕಡಾ 41 ಕೊರೋನಾ ಪ್ರಕರಣಗಳು ಏರಿಕೆಯಾಗಿದ್ದರೆ, ಇಂದು ಶೇಕಡಾ 40 ರಷ್ಟು ಕೇಸ್ ಹೆಚ್ಚಾಗಿದೆ. ಅದರಲ್ಲೂ ಮುಂಬೈ ಸೇರಿದಂತೆ ಮಹಾನಗರಗಳಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಇದೀಗ ಶಾಲಾ ಮಕ್ಕಳ ಪೋಷಕರು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.

ದೇಶದಲ್ಲಿ ಮತ್ತೆ ಕೋವಿಡ್‌ ಸ್ಫೋಟ, ಒಂದೇ ದಿನ ಕೇಸ್‌ 40% ಏರಿಕೆ!

ಕಳೆದ 24 ಗಂಟೆಯಲ್ಲಿ ಪಾಸಿಟಿವಿಟಿ ರೇಟ್ ಶೇಕಡಾ 1.31ಕ್ಕೆ ಏರಿಕೆಯಾಗಿದೆ. ವಾರದ ಪಾಸಿವಿಟಿ ರೇಟ್ ಶೇಕಡಾ  2.13ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ವರದಿಯಲ್ಲಿ ಹೇಳಿದೆ. ಕಳೆದ 24 ಗಂಟೆಯಲ್ಲಿ 8 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. 

ಕಳೆದ 24 ಗಂಟೆಯಲ್ಲಿ ಕೇರಳದಲ್ಲಿ 2,271 ಹೊಸ ಪ್ರಕರಣಗಳು ಪತ್ತೆಯಾಗಿದೆ. ಒಂದು ವಾರದಲ್ಲಿ ಕೇರಳದಲ್ಲಿ 10,805 ಕೋವಿಡ್ ಪ್ರಕರಣ ವರದಿಯಾಗಿದೆ. ನಿನ್ನೆ ಮಹಾರಾಷ್ಟ್ರದಲ್ಲಿ 2,701 ಕೋವಿಡ್ ಪ್ರಕರಣ ಪತ್ತೆಯಾಗಿದೆ. ಇನ್ನು ಪಶ್ಚಿಮ ಮುಂಬೈನಲ್ಲಿ ಒಂದು  B.A.5 ಒಮಿಕ್ರಾನ್ ಉಪತಳಿ ಪತ್ತೆಯಾಗಿದೆ. 

ಕೋವಿಡ್ ಗಣನೀಯ ಏರಿಕೆ ಬೆನ್ನಲ್ಲೇ ಕೇಂದ್ರ ಸರ್ಕಾರ ಇದೀಗ ಮಹಾರಾಷ್ಟ್ರ, ಕೇರಳ, ಕರ್ನಾಟಕ, ದೆಹಲಿ ಸೇರಿದಂತೆ ಕೆಲ ರಾಜ್ಯಗಳೊಂದಿಗೆ ನಿಕಟ ಸಂಪರ್ಕದಲ್ಲಿದೆ. ಕೋವಿಡ್ ಪ್ರಕರಣ ನಿಯಂತ್ರಿಸಲು ಮಾರ್ಗಸೂಚಿ ಪಾಲಿಸಲು ಸೂಚಿಸಿದೆ.

Covid Crisis: ಬೆಂಗ್ಳೂರಲ್ಲಿ ಕೊರೋನಾ ಹೆಚ್ಚಳ: ಪ್ರತಿದಿನ 300ಕ್ಕೂ ಅಧಿಕ ಕೇಸ್

ಮುಂಬೈ, ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಮಾಸ್ಕ್ ನಿಯಮ ಜಾರಿ ಮಾಡಲಾಗಿದೆ. ವಿಮಾಗಳಲ್ಲಿ ಮಾಸ್ಕ್ ಹಾಕದವರನ್ನು ಯಾವುದೇ ಸೂಚನೆ ನೀಡದೆ ಹೊರದಬ್ಬಲಾಗುತ್ತಿದೆ. ಒಂದೊಂದೆ ನಿಯಮಗಳು ಕಠಿಣವಾಗುತ್ತಿದೆ. ಹೀಗಾಗಿ ಭಾರತದಲ್ಲಿ ಮತ್ತೆ ಕೊರೋನಾ ಆತಂಕ ಎದುರಾಗಿದೆ.

ಬೆಂಗಳೂರಿನಲ್ಲಿ ತ್ರಿಬಲ್ ಸೆಂಚುರಿ
ರಾಜಧಾನಿ ಬೆಂಗಳೂರಿನಲ್ಲಿ ಮೂರು ತಿಂಗಳ ಬಳಿಕ ಸತತ ಎರಡನೇ ದಿನ 300ಕ್ಕೂ ಅಧಿಕ ಸೋಂಕು ಪ್ರಕರಣ ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.2.01ಕ್ಕೆ ಹೆಚ್ಚಾಗಿದೆ. ಕಳೆದ ಮಂಗಳವಾರ 339 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಬುಧವಾರ 358 ಪ್ರಕರಣ ಪತ್ತೆಯಾಗಿತ್ತು, 222 ಮಂದಿ ಚೇತರಿಸಿಕೊಂಡಿದ್ದಾರೆ. ಕೋವಿಡ್‌ ಸಾವು ದಾಖಲಾಗಿಲ್ಲ.

ನಗರದಲ್ಲಿ ಸದ್ಯ ಒಟ್ಟು 2,526 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ ಇಬ್ಬರು ತೀವ್ರ ನಿಗಾ ಘಟಕ ಹಾಗೂ 20 ಮಂದಿ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆ ಆರೈಕೆಯಲ್ಲಿದ್ದಾರೆ.11,728 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 1,062 ಮಂದಿ ಮೊದಲ ಡೋಸ್‌, 5,758 ಮಂದಿ ಎರಡನೇ ಡೋಸ್‌ ಮತ್ತು 4,938 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ.​​ ಒಟ್ಟು 15,623 ಮಂದಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 12,483 ಆರ್‌ಟಿಪಿಸಿಆರ್‌ ಹಾಗೂ 3,140 ರಾರ‍ಯಪಿಡ್‌ ಆ್ಯಂಟಿಜನ್‌ ಪರೀಕ್ಷೆ ನಡೆಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

Follow Us:
Download App:
  • android
  • ios