Asianet Suvarna News Asianet Suvarna News

ದೇಶದಲ್ಲಿ ಮತ್ತೆ ಕೋವಿಡ್‌ ಸ್ಫೋಟ, ಒಂದೇ ದಿನ ಕೇಸ್‌ 40% ಏರಿಕೆ!

* 5233 ಕೊರೋನಾ ಕೇಸು: 3 ತಿಂಗಳ ಗರಿಷ್ಠ

* ಕೇಸು 5 ಸಾವಿರ ದಾಟಿದ್ದು 3 ತಿಂಗಳ ನಂತರ ಇದೇ ಮೊದಲು

* ಪಾಸಿಟಿವಿಟಿ ದರ ಶೇ.1.67ಕ್ಕೆ, ಸಕ್ರಿಯ ಕೇಸು 28,857ಕ್ಕೇರಿಕೆ

* 3,345 ಮಂದಿ ಗುಣಮುಖ, 7 ಸಾವು

* ಮಹಾರಾಷ್ಟ್ರ, ಕೇರಳ, ದೆಹಲಿ, ಕರ್ನಾಟಕದಲ್ಲಿ ಸೋಂಕು ಏರಿಕೆ

India reports 5233 new Covid 19 cases reports over 40pc jump in daily numbers pod
Author
Bangalore, First Published Jun 9, 2022, 8:01 AM IST

ನವದೆಹಲಿ(ಜೂ.09): 4ನೇ ಅಲೆ ಭೀತಿಯ ನಡುವೆ ದೇಶದಲ್ಲಿ ಕೊರೋನಾ ಮತ್ತಷ್ಟುಅಬ್ಬರಿಸಿದೆ. ಬುಧವಾರ 5,233 ಪ್ರಕರಣಗಳು ವರದಿಯಾಗಿದೆ. ಒಂದೇ ದಿನ 5000ಕ್ಕಿಂತ ಹೆಚ್ಚು ಪ್ರಕರಣ ವರದಿಯಾಗಿದ್ದು 93 ದಿನದಲ್ಲಿ (3 ತಿಂಗಳಲ್ಲಿ) ಇದೇ ಮೊದಲು ಎಂದು ಕೇಂದ್ರ ಸರ್ಕಾರ ಹೇಳಿದೆ.

ಇದೇ ಅವಧಿಯಲ್ಲಿ 3345 ಜನ ಮಾತ್ರ ಗುಣಮುಖರಾಗಿದ್ದಾರೆ. ಹೀಗಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ ಮಂಗಳವಾರಕ್ಕಿಂತ 1,881ರಷ್ಟುಹೆಚ್ಚಾಗಿ 28,857ಕ್ಕೆ ಏರಿದೆ. ಆದರೆ ಮರಣ ಪ್ರಮಾಣ ಕಡಿಮೆ ಇದ್ದು 7 ಮಂದಿ ಅಸುನೀಗಿದ್ದಾರೆ.

ಈ ನಡುವೆ, 3.13 ಲಕ್ಷ ಪರೀಕ್ಷೆಗಳನ್ನು 1 ದಿನದಲ್ಲಿ ನಡೆಸಲಾಗಿದ್ದು, ಪಾಸಿಟಿವಿಟಿ ದರ ಶೇ.1.67ಕ್ಕೆ ಏರಿಕೆಯಾಗಿದೆ. ವಾರದ ಪಾಸಿಟಿವಿಟಿ ದರ ಶೇ.1.21ರಷ್ಟಿದೆ. ಈವರೆಗೆ 194.4 ಕೋಟಿ ಡೋಸ್‌ ಕೊರೋನಾ ಲಸಿಕೆಗಳನ್ನು ನೀಡಲಾಗಿದೆ.

ಕರ್ನಾಟಕ ನಂ.4

ಬುಧವಾರ ಬೆಳಗ್ಗೆ 8 ಗಂಟೆಗೆ ಕೇಂದ್ರ ಸರ್ಕಾರ ಪ್ರಕಟಿಸಿದ ಕೊರೋನಾ ವರದಿ ಪ್ರಕಾರ, ಅತಿ ಹೆಚ್ಚು ಪ್ರಕರಣಗಳು ಮಂಗಳವಾರ ಮಹಾರಾಷ್ಟ್ರದಲ್ಲಿ 1,881 ವರದಿಯಾಗಿವೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ಕೇರಳ (1,494), ದೆಹಲಿ (450), ಕರ್ನಾಟಕ (348) ಹಾಗೂ ಹರ್ಯಾಣ (227) ಇವೆ. ಅಂದರೆ ಹೆಚ್ಚು ಕೊರೋನಾ ಪ್ರಕರಣ ಕಂಡ ರಾಜ್ಯಗಳಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದೆ.

376 ಕೋವಿಡ್‌ ಕೇಸು: 100 ದಿನದ ಗರಿಷ್ಠ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ - 19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬುಧವಾರ 376 ಮಂದಿಯಲ್ಲಿನ ಸೋಂಕು ದೃಢಪಟ್ಟಿದ್ದು, 100 ದಿನದ ಗರಿಷ್ಠ ಪ್ರಕರಣವಾಗಿದೆ. ಇದೇ ವೇಳೆ, 231 ಮಂದಿ ಮಾತ್ರ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಸಕ್ರಿಯ ಕೇಸು 2623ಕ್ಕೆ ಏರಿದೆ. ಸಮಾಧಾನವೆಂದರೆ, ಕೋವಿಡ್‌ನಿಂದ ಮೃತಪಟ್ಟಿರುವುದು ವರದಿಯಾಗಿಲ್ಲ. ರಾಜ್ಯದಲ್ಲಿ ಮಾಚ್‌ರ್‍ 3ರಂದು 382 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು.

ಇದಾದ 100 ದಿನಗಳ ಅಂತರದ ಗರಿಷ್ಠ ಪ್ರಕರಣ ಬುಧವಾರ ದಾಖಲಾಗಿದೆ. ಈ ನಡುವೆ, ಕಳೆದ ಜೂನ್‌ 6ಕ್ಕೆ 230 ಮಂದಿಯಲ್ಲಿ, ಜೂನ್‌ ಏಳಕ್ಕೆ 348 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಈ ನಡುವೆ, ಕೋವಿಡ್‌ ಪರೀಕ್ಷೆಯ ಪ್ರಮಾಣದಲ್ಲಿಯೂ ಹೆಚ್ಚಳವಾಗಿದೆ. 23,246 ಮಂದಿ ಪರೀಕ್ಷೆಗೆ ಒಳಗಾಗಿದ್ದು, ಶೇ.1.61 ಪಾಸಿಟಿವಿಟಿ ದರ ದಾಖಲಾಗಿದೆ. ಮಾಚ್‌ರ್‍ 31 ರಂದು 24,031 ಪರೀಕ್ಷೆ ನಡೆದ ಬಳಿಕದ ಅತಿ ಹೆಚ್ಚು ಪರೀಕ್ಷೆ ಬುಧವಾರ ನಡೆದಿ

Follow Us:
Download App:
  • android
  • ios